ದ್ವಿತೀಯ ಜಾಗತಿಕಯುದ್ಧದ ಬಳಿಕ ರೂಪುಗೊಂಡ ಅಲಿಪ್ತ ದೇಶಗಳ ಒಕ್ಕೂಟದ ಶೃಂಗಸಭೆಯು ಉಗಾಂಡಾದ ಕಂಪಾಲಾದಲ್ಲಿ 2024ರ ಜನವರಿ19 ಮತ್ತು 20ರಂದು ನಡೆಯಿತು. ಇದಲ್ಲದೆ ಜನವರಿ 19ರಂದು ಉಗಾಂಡಾದ ಅಧ್ಯಕ್ಷ ಯೊವೆರಿ ಮುಸೆವೆನಿ ಈ ಶೃಂಗಸಭೆಯಲ್ಲಿ ಅಧಿಕೃತವಾಗಿ ಮುಂದಿನ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡರು.

ಅಲಿಪ್ತ ಆಂದೋಲನ ( NAM- non aligned movement)

* ಅಲಿಪ್ತ ಆಂದೋಲನವು (NAM) 120 ಅಭಿವೃದ್ಧಿಶೀಲ ರಾಷ್ಟ್ರಗಳ ಒಂದು ವೇದಿಕೆಯಾಗಿದೆ. ಅದು ಜಗತ್ತಿನ ಯಾವುದೇ ಪ್ರಮುಖ ಶಕ್ತಿ ಬಣಕ್ಕೆ ಬೆಂಬಲವಾಗಿ ಅಥವಾ ವಿರುದ್ಧವಾಗಿರದೇ ತಟಸ್ಥ ನಿಲುವನ್ನು ಕಾಯ್ದುಕೊಳ್ಳುತ್ತಾ ಬಂದಿದೆ.

* ಶೀತಲ ಸಮರದ ಸಮಯದಲ್ಲಿ ಜಗತ್ತಿನಾದ್ಯಂತ ದೇಶಗಳು ವಿಶೇಷವಾಗಿ ಪಾಶ್ಚಿಮಾತ್ಯ ಅಥವಾ ಪೂರ್ವ ಬಣಗಳು ಎಂಬ ಎರಡು ಗುಂಪುಗಳಾಗಿ ವಿಭಜನೆಯಾದಾಗ ಆ ಬಲಾಢ್ಯ ರಾಜಕೀಯಕ್ಕೆ ಪ್ರತಿಕ್ರಿಯೆಯಾಗಿ ಅಲಿಪ್ತ ಬಣವನ್ನು ಪ್ರಾರಂಭಿಸಲಾಯಿತು.

* ಅಲಿಪ್ತ ಚಳವಳಿ ಎಂಬ ಪರಿಕಲ್ಪನೆಯನ್ನು ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರೂ ಅವರು ಮೊದಲ ಬಾರಿಗೆ ನೀಡಿದ್ದರು.

* NAMನ ಸಂಸ್ಥಾಪಕ ತತ್ವಗಳು ಸಾಮ್ರಾಜ್ಯಶಾಹಿ, ವಸಾಹತುಶಾಹಿ, ವರ್ಣಭೇದ ನೀತಿ ಮತ್ತು ಎಲ್ಲಾ ರೀತಿಯ ವಿದೇಶಿ ಆಕ್ರಮಣಗಳ ವಿರುದ್ಧದ ಹೋರಾಟದಲ್ಲಿ ರಾಷ್ಟ್ರೀಯ ಸ್ವಾತಂತ್ರ್ಯ, ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ಅಲಿಪ್ತ ರಾಷ್ಟ್ರಗಳ ಭದ್ರತೆಯ ಪ್ರಾಮುಖ್ಯತೆಗಳ ಬಗ್ಗೆ ಸ್ಪಷ್ಟವಾದ ನಿಲುವನ್ನು ತಾಳಿದ್ದವು.

* ಇದು ಶಾಶ್ವತ ಕಾರ್ಯದರ್ಶಿ ಕಚೇರಿಯನ್ನು ಹೊಂದಿಲ್ಲ.

* ಇದರ ಅಧ್ಯಕ್ಷೀಯತೆಯನ್ನು ಈ ಆಂದೋಲನವನ್ನು ರೂಪಿಸಿದ ವಿವಿಧ ಭೌಗೋಳಿಕ ಪ್ರದೇಶಗಳ ಸದಸ್ಯರು ಆವರ್ತಕವಾಗಿ ಹಂಚಿಕೊಳ್ಳುತ್ತಾರೆ. ಅಂದರೆ ಆಫ್ರಿಕಾ, ಏಷ್ಯಾ, ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ಮತ್ತು ಯುರೋಪ್‌ನ ಸದಸ್ಯರು ಸತತ ಮೂರು ವರ್ಷಗಳ ಅವಧಿಗೆ ಇದರ ಅಧ್ಯಕ್ಷೀಯತೆಯನ್ನು ಹೊಂದುತ್ತಾರೆ.

ಅಲಿಪ್ತ ಬಣದ ಹುಟ್ಟಿನ ಐತಿಹಾಸಿಕ ಕಾರಣಗಳು

* ಎರಡನೇ ವಿಶ್ವ ಯುದ್ಧದ ನಂತರ ಜಾಗತಿಕವಾಗಿ ಹಲವು ಮಹತ್ತರ ಬೆಳವಣಿಗೆಗಳು ನಡೆದವು. ಅವುಗಳಲ್ಲಿ ಒಂದು ಬ್ರಿಟನ್ ಸಾಮ್ರಾಜ್ಯಶಾಹಿ ತನ್ನ ಬಹುತೇಕ ವಸಾಹತುಗಳನ್ನು ಕಳೆದುಕೊಂಡಿತು.

* ಚೀನಾದಲ್ಲಿ ಅಲ್ಲಿನ ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿ ಅಂತರ್ಯುದ್ಧ ನಡೆದು ಕ್ರಾಂತಿಯಾಗಿ ನವ ಪ್ರಜಾತಾಂತ್ರಿಕ ವ್ಯವಸ್ಥೆ ಸ್ಥಾಪನೆಯಾಯಿತು.

* ಸೋವಿಯತ್ ರಷ್ಯಾದ ಜಾಗತಿಕ ಪ್ರಭಾವ ಹೆಚ್ಚಾಯಿತು. ಜಪಾನ್ ಕೂಡ ತನ್ನ ವಸಾಹತುಗಳನ್ನು ಕಳೆದುಕೊಂಡು ಹಲವು ನಿರ್ಬಂಧಗಳಿಗೆ ಒಳಗಾಗಿ ಬಲಹೀನ ಸ್ಥಿತಿಗೆ ಇಳಿಯಿತು.

* ಅಮೆರಿಕ ಆರ್ಥಿಕವಾಗಿ ರಾಜಕೀಯವಾಗಿ ಮತ್ತಷ್ಟು ಬಲಾಢ್ಯವಾಯಿತು.

* ಜರ್ಮನಿ ಪಶ್ಚಿಮ ಹಾಗೂ ಪೂರ್ವ ಎಂದು ಎರಡು ಹೋಳಾಗಿ ಮಧ್ಯೆ ಬರ್ಲಿನ್ ಗೋಡೆ ನಿರ್ಮಾಣವಾಯಿತು.

* ಪಶ್ಚಿಮ ಜರ್ಮನಿ ಅಮೆರಿಕ ನೇತೃತ್ವದ ಬಂಡವಾಳಶಾಹಿ ಬಣದೊಂದಿಗೆ, ಪೂರ್ವ ಜರ್ಮನಿ ಸೋವಿಯತ್ ರಷ್ಯಾ ನೇತೃತ್ವದ ಕಮ್ಯುನಿಸ್ಟ್ ಸಮಾಜವಾದಿ ಬಣದೊಂದಿಗೆ ಗುರುತಿಸಿಕೊಂಡಿತು.

* ಅದೇ ರೀತಿ ಜಪಾನಿನ ವಸಾಹತು ಆಗಿದ್ದ ಕೊರಿಯಾ ಕೂಡ ಇಬ್ಭಾಗವಾಗಿ ಉತ್ತರ ಕೊರಿಯಾ ಸೋವಿಯತ್ ರಷ್ಯಾದ ಬಣವಾದರೆ, ದಕ್ಷಿಣ ಕೊರಿಯಾ ಅಮೆರಿಕ ಸಂಯುಕ್ತ ಸಂಸ್ಥಾನದ ಬಣವಾಯಿತು. ವಿಶ್ವ ಮುಖ್ಯವಾಗಿ ಈ ಎರಡು ಬಣಗಳಿಗೆ ಸೇರಿಕೊಂಡಿತು. ಅದರಲ್ಲಿ ಕೆಲವು ರಾಷ್ಟ್ರಗಳು ಒಗ್ಗೂಡಿ ‘ಅಲಿಪ್ತರಾಷ್ಟ್ರಗಳು’ ಎಂದು ಪ್ರತ್ಯೇಕವಾಗಿ ಗುರುತಿಸಿಕೊಂಡವು.ಭಾರತದ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರು ಈ ಅಲಿಪ್ತ ದೇಶಗಳ ಬಣದ ಪ್ರಧಾನ ರೂವಾರಿಯಾಗಿದ್ದರು.

ಪ್ರಮುಖ ಲಕ್ಷಣಗಳು ಮತ್ತು ಐತಿಹಾಸಿಕ ಹಿನ್ನೆಲೆ

ರಚನೆ: 1955 ರಲ್ಲಿ ಇಂಡೋನೇಷ್ಯಾದ ಬ್ಯಾಂಡಂಗ್‌ನಲ್ಲಿ ನಡೆದ ಏಷ್ಯನ್-ಆಫ್ರಿಕನ್ ಸಮ್ಮೇಳನದ ಸಮಯದಲ್ಲಿ ಅಲಿಪ್ತ ಚಳವಳಿಯ ಕಲ್ಪನೆಯು ಹೊರಹೊಮ್ಮಿತು. ಈ ಚಳವಳಿಯ ಹಿಂದಿನ ಪ್ರಮುಖ ನಾಯಕರು ಭಾರತದ ಜವಾಹರಲಾಲ್ ನೆಹರೂ, ಇಂಡೋನೇಷ್ಯಾದ ಸುಕರ್ನೋ, ಯುಗೊಸ್ಲಾವಿಯಾದ ಜೋಸಿಪ್ ಬ್ರೋಜ್ ಟಿಟೊ, ಘಾನಾದ ಕ್ವಾಮೆ ಕ್ರುಮಾ ಮತ್ತು ಈಜಿಪ್ಟ್‌ನ ಜಮಾಲ್ ಅಬ್ದುಲ್ ನಾಸರ್.

ನಂಬಿಕೆಗಳು ಮತ್ತು ತತ್ವಗಳು: ಈ ಆಂದೋಲನವು ರಾಷ್ಟ್ರಗಳು ತಮ್ಮ ರಾಷ್ಟ್ರೀಯ ಹಿತಾಸಕ್ತಿಗಳನ್ನು ಅನುಸರಿಸಲು ಯಾವುದೇ ಪ್ರಮುಖ ಶಕ್ತಿ ಗುಂಪಿನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೆ ತಮ್ಮದೇ ಆದ ವೇದಿಕೆಯನ್ನು ಒದಗಿಸುವ ಗುರಿಯನ್ನು ಹೊಂದಿತ್ತು. NAM ನ ತತ್ವಗಳು ಯಾವುದೇ ದೇಶಗಳ ಸಾರ್ವಭೌಮತ್ವಕ್ಕೆ ಗೌರವ, ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದಿರುವುದು ಮತ್ತು ಎಲ್ಲಾ ರಾಷ್ಟ್ರಗಳ ಶಾಂತಿಯುತ ಸಹಬಾಳ್ವೆಯನ್ನು ಒಳಗೊಂಡಿವೆ.

ಮೊದಲ ಸಮ್ಮೇಳನ: 1961ರಲ್ಲಿ ಯುಗೊಸ್ಲಾವಿಯಾದ ಬೆಲ್‌ಗ್ರೇಡ್‌ನಲ್ಲಿ ಅಲಿಪ್ತ ರಾಷ್ಟ್ರಗಳ ಮುಖ್ಯಸ್ಥರ ಮೊದಲ ಅಧಿಕೃತ ಸಮ್ಮೇಳನವನ್ನು ನಡೆಸಲಾಯಿತು. ಈ ಮೂಲಕ ಅಲಿಪ್ತ ಚಳವಳಿಯ ಔಪಚಾರಿಕ ಸ್ಥಾಪನೆಯಾಯಿತು.

ಪಂಚಶೀಲ ತತ್ವಗಳು: ಪಂಚಶೀಲ ಎಂದು ಕರೆಯಲ್ಪಡುವ ಶಾಂತಿಯುತ ಸಹಬಾಳ್ವೆಯ ಐದು ತತ್ವಗಳನ್ನು ಅಲಿಪ್ತ ರಾಷ್ಟ್ರಗಳ(NAM) ಮಾರ್ಗದರ್ಶಿ ತತ್ವಗಳಾಗಿ ಅಳವಡಿಸಿಕೊಳ್ಳಲಾಗಿದೆ. ಈ ತತ್ವಗಳು

1. ಪರಸ್ಪರರ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕೆ ಪರಸ್ಪರ ಗೌರವ.

2. ಪರಸ್ಪರ ಆಕ್ರಮಣಶೀಲತೆಯನ್ನು ಹೊಂದದಿರುವುದು.

3. ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದಿರುವುದು.

4. ಸಮಾನತೆ ಮತ್ತು ಪರಸ್ಪರ ಲಾಭ ಅಥವಾ ಒಳಿತಿನತ್ತ ನಡೆಯುವುದು.

5. ಶಾಂತಿಯುತ ಸಹಬಾಳ್ವೆಯ ತತ್ವಗಳನ್ನು ಒಳಗೊಂಡಿವೆ.

ಶೀತಲ ಸಮರ: ಶೀತಲ ಸಮರದ ಸಮಯದಲ್ಲಿ, ತಮ್ಮ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಲು ಮತ್ತು ಯುನೈಟೆಡ್ ಸ್ಟೇಟ್ಸ್ ನೇತೃತ್ವದ ಪಾಶ್ಚಿಮಾತ್ಯ ಬಣ ಅಥವಾ ಸೋವಿಯತ್ ಯೂನಿಯನ್ ನೇತೃತ್ವದ ಪೂರ್ವ ಬಣದೊಂದಿಗೆ ಗುರುತಿಸಿಕೊಳ್ಳಲು ಬಯಸದೇ ಇದ್ದ ದೇಶಗಳಿಗೆ ನಾಮ್ ವೇದಿಕೆ ಒದಗಿಸಿತು.

ಜಾಗತಿಕ ಶಾಂತಿಯ ಪ್ರಚಾರ: ನಾಮ್ (NAM) ನಿಶ್ಯಸ್ತ್ರೀಕರಣ ಮತ್ತು ಸಂಘರ್ಷಗಳ ಶಾಂತಿಯುತ ಪರಿಹಾರವನ್ನು ಸಕ್ರಿಯವಾಗಿ ಉತ್ತೇಜಿಸಿತು. ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ನಡುವಿನ ಸಾಮಾಜಿಕ-ಆರ್ಥಿಕ ಅಸಮಾನತೆಗಳನ್ನು ಪರಿಹರಿಸಲು ಹೊಸ ಅಂತರರಾಷ್ಟ್ರೀಯ ಆರ್ಥಿಕ ಕ್ರಮವನ್ನು ಸ್ಥಾಪಿಸಲು ಇದು ಮುಂಗಾಣ್ಕೆಯನ್ನು ನೀಡಿತು.

ಒಟ್ಟಿನಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಒಂದು ರಾಜತಾಂತ್ರಿಕ ವೇದಿಕೆಯನ್ನು ರೂಪಿಸುವಲ್ಲಿ, ಅವರ ಹಿತಾಸಕ್ತಿಗಳನ್ನು ಸಮರ್ಥಿಸುವಲ್ಲಿ ಮತ್ತು ಶಾಂತಿ, ನ್ಯಾಯ ಮತ್ತು ಪರಸ್ಪರ ಸಹಕಾರದ ತತ್ವಗಳ ಆಧಾರದ ಮೇಲೆ ವಿಶ್ವ ಕ್ರಮವನ್ನು ಉತ್ತೇಜಿಸುವಲ್ಲಿ ಅಲಿಪ್ತ ಚಳವಳಿಯು ನಿರ್ಣಾಯಕ ಪಾತ್ರವನ್ನು ವಹಿಸಿದೆ. ಜಾಗತಿಕ ರಾಜಕೀಯದಲ್ಲಿನ ಬದಲಾವಣೆಗಳ ಹೊರತಾಗಿಯೂ, ರಾಷ್ಟ್ರಗಳ ನಡುವೆ ಸಂವಾದ ಮತ್ತು ಸಹಯೋಗವನ್ನು ಬೆಳೆಸುವಲ್ಲಿ NAM ಒಂದು ಮಟ್ಟಿನಲ್ಲಿ ಶಕ್ತಿಬಣವಾಗಿ ಮುಂದುವರೆದಿದೆ.

ವಿಕಾಸ ಮತ್ತು ಸಮಕಾಲೀನ ಪ್ರಸ್ತುತತೆ

ಶೀತಲ ಸಮರದ ನಂತರದ ಯುಗ: ಶೀತಲ ಸಮರದ ಅಂತ್ಯದೊಂದಿಗೆ, ಜಾಗತಿಕ ರಾಜಕೀಯ ವಿದ್ಯಮಾನಗಳು ಬದಲಾದ ಹಿನ್ನೆಲೆಯಲ್ಲಿ ಮತ್ತು NAM ನ ಪ್ರಸ್ತುತತೆಯನ್ನು ಕೆಲವರು ಪ್ರಶ್ನಿಸಿದರು. ಆದರೂ ಬಡತನ, ಅಸಮಾನತೆ ಮತ್ತು ಸುಸ್ಥಿರ ಅಭಿವೃದ್ಧಿಯಂತಹ ಜಾಗತಿಕ ಕಾಳಜಿಯ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಶ್ರಮಿಸುವುದನ್ನು ಈ ಅಲಿಪ್ತ ಒಕ್ಕೂಟವು ಮುಂದುವರೆಸಿದೆ.

ಹೆಚ್ಚಿದ ಸದಸ್ಯತ್ವ: ಮುಂದುವರೆದು ಅಲಿಪ್ತ ಚಳವಳಿಯ ಸದಸ್ಯತ್ವವು 120 ಸದಸ್ಯ ರಾಷ್ಟ್ರಗಳಷ್ಟು ವಿಸ್ತರಿಸಿದ್ದು ಇದು ವೈವಿಧ್ಯಮಯ ಸಂಸ್ಕೃತಿಗಳು, ರಾಜಕೀಯ ವ್ಯವಸ್ಥೆಗಳು ಮತ್ತು ಅಭಿವೃದ್ಧಿಯ ವಿವಿಧ ಹಂತಗಳನ್ನು ಪ್ರತಿನಿಧಿಸುತ್ತದೆ.

ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ವಕಾಲತ್ತು: ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಅಂತರರಾಷ್ಟ್ರೀಯ ವೇದಿಕೆಯಲ್ಲಿ ತಮ್ಮ ಕಳವಳಗಳನ್ನು ವ್ಯಕ್ತಪಡಿಸಲು NAM ಒಂದು ಮಹತ್ವದ ವೇದಿಕೆಯಾಗಿ ಉಳಿದಿದೆ. ಇದು ಆರ್ಥಿಕ ಅಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ರಾಜಕೀಯ ಸಮಾನತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತದೆ.

ಪ್ರಜಾಪ್ರಭುತ್ವದ ಉನ್ನತ ಮೌಲ್ಯಗಳ ಸಮರ್ಥನೆ: ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ಹೆಚ್ಚಿನ ಅಭಿಪ್ರಾಯಗಳಿಗೆ ಮನ್ನಣೆ ನೀಡುವುದು ಮತ್ತು ಅಂತರರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆಯ ಪ್ರಾಮುಖ್ಯತೆಯ ಬಗ್ಗೆ NAM ಒತ್ತಿಹೇಳುತ್ತದೆ. ಅಂತರಾಷ್ಟ್ರೀಯ ಸಂಸ್ಥೆಗಳಲ್ಲಿ ಸುಧಾರಣೆಗಳನ್ನು ಮಾಡುವಂತೆ, ಎಲ್ಲಾ ದೇಶಗಳನ್ನು ಹೆಚ್ಚು ಒಳಗೊಳ್ಳುವಂತೆ ಮತ್ತು ಪ್ರತಿನಿಧಿಸುವಂತೆ ಮಾಡಲು ಇದು ಕರೆ ನೀಡುತ್ತದೆ.

ಪ್ರಸ್ತುತ ಸವಾಲುಗಳು: ಸಮಕಾಲೀನ ಭೌಗೋಳಿಕ ರಾಜಕೀಯ ವಿದ್ಯಮಾನಗಳಲ್ಲಿ, NAM ಆಂತರಿಕ ಒಗ್ಗಟ್ಟು, ಸದಸ್ಯ ರಾಷ್ಟ್ರಗಳ ನಡುವಿನ ವಿವಿಧ ರಾಜಕೀಯ ಸಿದ್ಧಾಂತಗಳು ಮತ್ತು ಹೊಸ ಜಾಗತಿಕ ವಾಸ್ತವಗಳಿಗೆ ಹೊಂದಿಕೊಳ್ಳುವ ಅಗತ್ಯಕ್ಕೆ ಸಂಬಂಧಿಸಿದ ಸವಾಲುಗಳನ್ನು ಎದುರಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.