ಭೂಮಿ ಜೀವವೈವಿಧ್ಯದ ತವರು. ಅಸಂಖ್ಯಾತ ಜೀವಿಗಳು ಇಲ್ಲಿನ ಪರಿಸರದ ಮೂಸೆಯಲ್ಲಿ ವಿಕಾಸ ಹೊಂದಿವೆ. ಸಾವಿರಾರು ಜೀವಿಗಳು ಕಾಲಚಕ್ರದಡಿಯಲ್ಲಿ ನಶಿಸಿಯೂ ಇವೆ. ಏಕಕೋಶಜೀವಿಗಳಾದ ದಂಡಾಣು (Bacteria) ವಿನಿಂದ ಹಿಡಿದು ಸಂಕೀರ್ಣ ಜೀವಿಗಳಾದ ಮಾನವನವರೆಗೆ ಜೀವವಿಕಾಸ ಸುಲಭದ್ದಲ್ಲ. ಕೋಟಿವರ್ಷಗಳ ಪ್ರಕೃತಿ ಪಾಠದಲ್ಲಿ ಮಿಂದ ಜೀವಿಗಳಿಂದ ಹೊರಹೊಮ್ಮಿದ ಗುಟ್ಟು ಎಂದರೆ ಸಹಜೀವನ (Symbiosis).

ಒಂದನ್ನೊಂದು ಆಧರಸಿ ಬದುಕುವ ಕಲೆಯನ್ನು ಪ್ರಕೃತಿ ಜೀವಿಗಳಿಗೆ ಕಲಿಸಿದೆ. ಪರಿಸರದಲ್ಲಿನ ಆಹಾರ ಸರಪಳಿ ಸೂಕ್ಷ್ಮವಾಗಿದ್ದು ಜೀವಿಗಳ ಉಳಿವು ಒಂದು ಸೋಜಿಗವೇ ಸರಿ.

ಜಗತ್ತಿನ ಜೀವಿಗಳ ಪರಸ್ಪರ ಅವಲಂಬನೆಯ ನಿದರ್ಶನಗಳನ್ನು ಅಧ್ಯಯನ ಮಾಡಿದರೆ ಇದು ಹೇಗೆ ಸಾಧ್ಯ? ಎಂಬ ಪ್ರಶ್ನೆ ಮೂಡುವುದು ಸಹಜ. ಅಂತಹ ಒಂದು ವಿಸ್ಮಯ ಉದಾಹರಣೆ ಎಂದರೆ ಜೇನು ಬ್ಯಾಜರ್ (Honey badger), ಜೇನು ಮಾರ್ಗದರ್ಶಕ (Honey guide) ಹಾಗೂ ಸೂಕ್ಷ್ಮಜೀವಿಗಳ ಪರಸ್ಪರಾವಲಂಬನೆ.

ಜೀವಜಗತ್ತಿನಲ್ಲಿ ಹನಿ ಬ್ಯಾಜರ್ ಅತ್ಯಂತ ಧೈರ್ಯವಂತ ಎಂದು ಗಿನ್ನೆಸ್ ಪುಸ್ತಕದಲ್ಲಿ ದಾಖಲಾಗಿರುವ ಸ್ತನಿ ಜಾತಿಗೆ ಸೇರಿದ ಪ್ರಾಣಿ. ಆಫ್ರಿಕಾ ಮತ್ತು ಏಷ್ಯಾ ಖಂಡಗಳಲ್ಲಿ ವಾಸಿಸುವ ಈ ಪ್ರಾಣಿಗಳು ದಕ್ಷಿಣ ಭಾರತದಲ್ಲೂ ಇವೆ. ಮುಂಗುಸಿಯಂತೆ ಕಾಣುವ ಇದು ತನ್ನ ಆಹಾರಕ್ಕಾಗಿ ಕೀಟಗಳು, ಹಾವು, ಚೇಳು, ಕಪ್ಪೆ, ಮೀನು ಮುಂತಾದವುಗಳನ್ನು ತಿನ್ನುತ್ತದೆ. ಜೊತೆಗೆೆ ಅದಕ್ಕೆ ಜೇನು ಗೂಡಿನಲ್ಲಿರುವ ಜೇನುಹುಳುಗಳ ಮೊಟ್ಟೆ, ಲಾರ್ವಗಳನ್ನು ಜೇನಿನೊಂದಿಗೆ ಚಪ್ಪರಿಸುವುದು ಬಹು ಇಷ್ಟ.

ಹನಿಗೈಡ್ ಹಕ್ಕಿ (ಒಳಚಿತ್ರ) ಸಹ ಕೀಟಗಳನ್ನು ತಿಂದು ಬದುಕುವ ಸಾಧಾರಣ ಗಾತ್ರದ ಹಕ್ಕಿ. ಆದರೆ ಇವೆರಡರ ಸಹಜೀವನ ನಿಜಕ್ಕೂ ಆಶ್ಚರ್ಯ ತರುವ ವಿಷಯ. ಹನಿಗೈಡ್ ಕಾಡಿನಲ್ಲಿ ಅತ್ತಿತ್ತ ಹಾರಾಡುತ್ತಾ ಜೇನುಗೂಡು ಇರುವ ಸ್ಥಳವನ್ನು ಪತ್ತೆಹಚ್ಚುವುದು, ಆನಂತರ ಹನಿ ಬ್ಯಾಜರ್ ಇರುವ ಜಾಗಕ್ಕೆ ಬಂದು ತನ್ನ ವಿಶೇಷ ಸ್ವರ ಹೊರಡಿಸುತ್ತಾ ಬಾಲದ ರೆಕ್ಕೆಗಳನ್ನು ಕುಣಿಸುತ್ತದೆ. ಪ್ರಾಕೃತಿಕವಾಗಿ ಇದನ್ನು ತಿಳಿದುಕೊಂಡಿರುವ ಹನಿ ಬ್ಯಾಜರ್ ಈ ಹಕ್ಕಿಯನ್ನು ನೋಡಿ ಅದನ್ನು ಹಿಂಬಾಲಿಸುತ್ತದೆ. ಸ್ವಲ್ಪ ದೂರ ಹಾರುತ್ತಾ ಹಕ್ಕಿಯು ಹನಿ ಬ್ಯಾಜರ್ ಅನ್ನು ಜೇನುಗೂಡಿರುವೆಡೆಗೆ ಮಾರ್ಗದರ್ಶನ ಮಾಡುತ್ತದೆ. ಜೇನುಗೂಡನ್ನು ನೋಡಿದ ಕೂಡಲೇ ಹನಿ ಬ್ಯಾಜರ್ ಅದರತ್ತ ಧಾವಿಸಿ ಗೂಡನ್ನು ಕಿತ್ತು ಅದರಲ್ಲಿರುವ ಜೇನು, ಮೊಟ್ಟೆ ಮತ್ತು ಲಾರ್ವಗಳನ್ನು ತಿನ್ನುತ್ತದೆ. ಜೇನುಹುಳುಗಳು ಇದಕ್ಕೆ ಕಚ್ಚಲಾರದಷ್ಟು ದಪ್ಪ ಚರ್ಮ ಮತ್ತು ತುಪ್ಪಳವನ್ನು ಹೊಂದಿರುವುದರಿಂದ ಇದಕ್ಕೇನೂ ತೊಂದರೆಯಿಲ್ಲ. ತಾನು ತಿಂದ ಮೇಲೆ ಜೇನುಗೂಡಿನ ಉಳಿದ ಭಾಗವನ್ನು ಬಿಸಾಡುತ್ತದೆ. ಜೇನುಗೂಡಿನಲ್ಲಿರುವ ಮೇಣ ಹನಿಗೈಡ್ ಹಕ್ಕಿಗೆ ಆಹಾರವಾಗುತ್ತದೆ.

ಒಂದು ಪ್ರಾಣಿ ಮತ್ತು ಹಕ್ಕಿಯ ಪ್ರೇಮಕಥನ ಇಲ್ಲಿಗೆ ಮುಗಿಯುವುದಿಲ್ಲ. ಹನಿಗೈಡ್ ಹಕ್ಕಿಯ ಕರುಳಿನಲ್ಲಿರುವ ವಿಶೇಷ ಸೂಕ್ಷಜೀವಿಗಳು ಜೇನುಮೇಣವನ್ನು ಜೀರ್ಣಿಸುವ ಕೆಲಸ ಮಾಡುತ್ತವೆ. ಈ ಸೂಕ್ಷ್ಮಜೀವಿಗಳು ಸ್ರವಿಸುವ ಲೈಪೇಸ್ (Lipase) ಎಂಬ ಕಿಣ್ವವು ಜೇನುಮೇಣದಲ್ಲಿರುವ ಕೊಬ್ಬನ್ನು ಕರಗಿಸುತ್ತವೆ. ಅದರಲ್ಲಿನ ಪೋಷಕಾಂಶಗಳನ್ನು ತಾವು ಉಪಯೋಗಿಸುವುದಲ್ಲದೆ ಹಕ್ಕಿಗೂ ಒದಗಿಸುತ್ತವೆ. ಹೇಗಿದೆ ಸ್ತನಿ, ಹಕ್ಕಿ ಮತ್ತು ಸೂಕ್ಷ್ಮಜೀವಿಗಳ ಸಹಜೀವನದ ಮರ್ಮ?

ಪರಸ್ಪರ ಅವಲಂಬನೆಯೇ ಜೀವವಿಕಾಸದ ತಳಹದಿ. ಎಲ್ಲಾ ಜೀವಿಗಳ ಅಸ್ತಿತ್ವ ಸಹಜೀವನದ ಆಧಾರದ ಮೇಲೆ ನಿಂತಿರುವುದು ಜೀವಿಗಳಿಗೆ ಪ್ರಕೃತಿ ಕಲಿಸಿರುವ ಪಾಠ. ಇದನ್ನು ಅರಿತು ನಡೆದರೆ ಪ್ರಕೃತಿಮಾತೆ ಮೆಚ್ಚುವಳು. ಸಕಲ ಜೀವಿಗಳೂ ಅವಳ ಮಕ್ಕಳಲ್ಲವೇ? ಅಫ್ರಿಕಾದ ಬುಡಕಟ್ಟು ಜನಾಂಗದವರು ಸಹ ಹನಿಗೈಡ್ ಹಕ್ಕಿಯನ್ನು ಅನುಸರಿಸಿ ಜೇನುಗೂಡನ್ನು ಪತ್ತೆಹಚ್ಚಿ ಜೇನು ತುಪ್ಪವನ್ನು ಸಂಗ್ರಹಿಸುವರು.

(ಲೇಖಕರು: ದಾವಣಗೆರೆ ವಿಶ್ವವಿದ್ಯಾಲಯದ ಸೂಕ್ಷ್ಮ ಜೀವಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.