ಯುನೆಸ್ಕೋ ವಿಶ್ಶ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಭಾರತದ 43ನೇ ತಾಣ

ಅಸ್ಸಾಂನ ಚೊರಾಯ್ದೇವ್ (Choraideo)ನಲ್ಲಿರುವ ದಫನ ದಿಣ್ಣೆಗಳು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರ್ಪಡೆಯಾಗಿದೆ.

ಭಾರತವು ಮೊದಲ ಬಾರಿಗೆ ಜುಲೈ 21-23, 2024ರ ಅವಧಿಯಲ್ಲಿ ವಿಶ್ವ ಪರಂಪರೆಯ ಸಮಿತಿಯ ಸಭೆಯ 46ನೇ ಅಧಿವೇಶನದ ಆತಿಥ್ಯ ವಹಿಸಿತ್ತು. ಅದು ವಿಶ್ವದಾದ್ಯಂತದ ಸಾಂಸ್ಕೃತಿಕ, ನೈಸರ್ಗಿಕ ಮತ್ತು ಸಮ್ಮಿಶ್ರ ತಾಣಗಳನ್ನು ಸಂರಕ್ಷಿಸುವುದರ ಕುರಿತು ಚರ್ಚಿಸಿ ಸಹಕಾರವನ್ನು ಉತ್ತೇಜಿಸುವ ಸಲುವಾಗಿ ವಿವಿಧ ದೇಶಗಳ ಪ್ರತಿನಿಧಿಗಳನ್ನು ಜೊತೆಗೆ ತರುವ ಉದ್ದೇಶವನ್ನು ಹೊಂದಿತ್ತು.

2024ರಲ್ಲಿ ನಡೆದ 46ನೇ ಅಧಿವೇಶನದಲ್ಲಿ 19 ಸಾಂಸ್ಕೃತಿಕ ತಾಣಗಳು, 4 ನೈಸರ್ಗಿಕ ತಾಣಗಳು, 2 ಸಮ್ಮಿಶ್ರ ತಾಣಗಳು ಮತ್ತು 2 ಪ್ರಮುಖ ಗಡಿಪ್ರದೇಶ ಸ್ಥಳಗಳು ಸೇರಿದಂತೆ ಒಟ್ಟು 27 ನಾಮಕರಣಗಳನ್ನು ಸಮಿತಿಯು ಪರಿಶೀಲಿಸಿತು.

ಇವುಗಳಲ್ಲಿ ಭಾರತದ ಮೋಯ್ಡಾಮ್ ಅಂದರೆ ಅಹೋಮ್ ವಂಶದ ದಫನ ವ್ಯವಸ್ಥೆಯ ದಫನ ದಿಣ್ಣೆಗಳನ್ನು ಸಾಂಸ್ಕೃತಿಕ ಆಸ್ತಿ ವಿಭಾಗದಲ್ಲಿ ಮೌಲ್ಯಮಾಪನ ಮಾಡಿ ಈ ಪಟ್ಟಿಗೆ ಸೇರಿಸಿಕೊಳ್ಳಲಾಯಿತು.

ಚೊರಾಯ್ದೇವ್ ದಫನ ದಿಣ್ಣೆಗಳು: ಥಾಯ್- ಅಹೋಮ್ ರಾಜವಂಶದ ದಫನ ಸಂಪ್ರದಾಯದ ಇಣುಕುನೋಟಗಳು

ಥಾಯ್-ಅಹೋಮ್ ಕುಲದವರು ಕ್ರಿ.ಶ 12ನೇ ಮತ್ತು 18ನೇ ಶತಮಾನಗಳ ನಡುವೆ ಚೀನಾದಿಂದ ವಲಸೆ ಬಂದು ಬ್ರಹ್ಮಪುತ್ರಾ ನದಿಯ ಈಚೆಗಿನ ಕಣಿವೆಗಳಲ್ಲಿ ವಿವಿಧ ಸ್ಥಳಗಳಲ್ಲಿ ತಮ್ಮ ರಾಜಧಾನಿಗಳನ್ನು ಸ್ಥಾಪಿಸಿದರು. ಚೌ-ಲುಂಗ್ ಸಿಯೂ-ಕಾ-ಫಾ ಎಂಬ ರಾಜಕುಮಾರ 1228ರಲ್ಲಿ ಭಾರತವನ್ನು ಪ್ರವೇಶಿಸಿ- ಸ್ಥಳೀಯ ಬರಾಹಿ ಬುಡಕಟ್ಟನ್ನು ಸ್ಥಳಾಂತರಗೊಳಿಸಿ ಪಟ್ಕೈ ಬೆಟ್ಟಗಳ ಕೆಳಗಿನ ಚಿಕ್ಕ ಬೆಟ್ಟಗಳಲ್ಲಿ 1253ರಲ್ಲಿ ಮೊದಲ ಅಹೋಮ್ ರಾಜಧಾನಿಯನ್ನು ಸ್ಥಾಪಿಸಿದ.

ಈ ರಾಜಧಾನಿಯನ್ನು ಮೊದಲಿಗೆ ಚೆ-ರಾಯ್-ದೊಯ್ ಎಂದು ಕರೆಯಲಾಗುತ್ತಿತ್ತು. ಇದರ ಅರ್ಥವೆಂದರೆ, ಪರ್ವತಗಳಿಗಿಂತಲೂ ಮೇಲಿರುವ ಪ್ರಜ್ವಲಿಸುವ ನಗರ. ಇದನ್ನು ಧಾರ್ಮಿಕ ವಿಧಿಗಳ ಮೂಲಕ ಪವಿತ್ರಪ್ರದೇಶ ಎಂದು ಘೋಷಿಸಲಾಯಿತು. ನಂತರ ರಾಜಧಾನಿಯನ್ನು ಮತ್ತೆ ಮತ್ತೆ ಬದಲಿಸಲಾದರೂ, ಮೂಲತಃ ಚೆ-ರಾಯ್-ದೊಯ್ ಎಂದು ಕರೆಯಲಾಗುತ್ತಿದ್ದ ಅದು ಈಗ ಚೊರಾಯ್ದೇವ್ ಎಂಬ ಹೆಸರನ್ನು ಪಡೆದುಕೊಂಡಿದ್ದರೂ, ಅಹೋಮ್ಗಳಿಗೆ ಅತ್ಯಂತ ಪವಿತ್ರ ಸ್ಥಳ ಎಂದು ತನ್ನ ಮಹತ್ವವನ್ನು ಇಂದಿಗೂ ಉಳಿಸಿಕೊಂಡಿದೆ.

ಇಲ್ಲಿಯೇ ಮೃತಪಟ್ಟ ರಾಜಮನೆತನದ ಜನರ ಆತ್ಮಗಳು ಜೀವನೋತ್ತರ ಬದುಕಿನ ಸಲುವಾಗಿ ಮೇಲೇರಿವೆ ಎಂದು ನಂಬಲಾಗುತ್ತಿದೆ.

ಈ ವಿಶಿಷ್ಟವಾದ ದಫನ ಪರಂಪರೆ 600 ವರ್ಷಗಳ ಕಾಲ ಮುಂದುವರಿಯಿತಾದರೂ ಬಳಿಕ ಹಲವು ತಾಯ್-ಅಹೋಮ್ ವಂಶಜರು ಬೌದ್ಧ ಧರ್ಮಕ್ಕೆ ಮತಾಂತರಗೊಂಡರು ಮತ್ತು ಉಳಿದವರು ಹಿಂದೂ ಶವಸಂಸ್ಕಾರ ಪದ್ಧತಿಯನ್ನು ಅನುಸರಿಸಲು ಆರಂಭಿಸಿದರು.

ನಿರ್ಮಾಣ ಮತ್ತು ಗುಣಲಕ್ಷಣಗಳು:

ದಫನ ದಿಣ್ಣೆಗಳು ಅಥವಾ ಮೊಯ್ಡಮ್ಗಳು ಹೆಚ್ಚಾಗಿ ಎರಡು ಸ್ತರಗಳನ್ನು ಹೊಂದಿರುವ ಕಮಾನು ಆಕಾರದ ದಫನ ಕೋಣೆಗಳು. ಇವುಗಳನ್ನು ಒಂದು ಕಮಾನು ಆಕಾರದ ದಾರಿಯ ಮೂಲಕ ಪ್ರವೇಶಿಸಬೇಕು. ಈ ರಚನೆಗಳನ್ನು ಅರ್ಧಗೋಳಾಕಾರದ ದಿಣ್ಣೆಗಳ ಒಳಗೆ ಇಟ್ಟಿಗೆ ಮತ್ತು ಮಣ್ಣಿನಿಂದ ಕಟ್ಟಲಾಗಿದೆ. ಬಹುಭುಜಾಕೃತಿಯ ತಳಪಾಯದ ಗೋಡೆಗಳ ಮೂಲಕ ಬಲವಾಗಿ ನಿರ್ಮಿಸಲಾಗುತ್ತದೆ. ಸಾಮಾನ್ಯವಾಗಿ ಪಶ್ಚಿಮದ ಕಡೆಗೆ ಇರುವ ಕಮಾನು ದ್ವಾರ ಮತ್ತು ಹಾದಿಯು ಇವುಗಳ ಒಂದು ಸಮಾನ ಗುಣಲಕ್ಷಣವಾಗಿದೆ.

ಸಮಯ ಕಳೆದಂತೆಲ್ಲಾ ಇವುಗಳ ಮೇಲೆ ಹುಲ್ಲು, ಗಿಡಗಂಟಿಗಳು ಬೆಳೆದು ಇಡೀ ಪರಿಸರವೇ ಉಬ್ಬುತಗ್ಗಿನ ದಿಣ್ಣೆಗಳನ್ನು ನೆನಪಿಸುವ ಒಂದು ನೋಟವನ್ನು ಒದಗಿಸುತ್ತಿತ್ತು. ಆದರೆ ಉತ್ಖನನಗಳು, ಪ್ರತಿಯೊಂದು ದಫನ ಕೋಣೆಯು ಮಧ್ಯದಲ್ಲಿ ಎತ್ತರಿಸಲ್ಪಟ್ಟ ಒಂದು ವೇದಿಕೆಯನ್ನು ಹೊಂದಿದ್ದು, ಸತ್ತವರ ದೇಹಗಳನ್ನು ಅಲ್ಲಿ ಇರಿಸಲಾಗುತ್ತಿತ್ತು ಎಂಬುದನ್ನು ತಿಳಿಸಿಕೊಟ್ಟಿದೆ. ಮೃತಪಟ್ಟ ವ್ಯಕ್ತಿಗೆ ಸಂಬಂಧಿಸಿದ- ರಾಜ ಲಾಂಛನ, ಮರ ಅಥವಾ ದಂತದಿಂದ ಮಾಡಲಾದ ವಸ್ತುಗಳು ಚಿನ್ನದ ಪದಕಗಳು, ಪಿಂಗಾಣಿ ವಸ್ತುಗಳು, ಮಾನವ ಅವಶೇಷಗಳನ್ನು ಕೂಡಾ (ನಿರ್ದಿಷ್ಟವಾಗಿ, ಲುಕ್- ಕಾ-ಕುನ್ ಕುಲಕ್ಕೆ ಸೇರಿದವರದ್ದು) ರಾಜನ ಶವದ ಅಕ್ಕಪಕ್ಕದಲ್ಲಿ ಇರಿಸಲಾಗುತ್ತಿತ್ತು.

ಬಳಸಲಾದ ವಸ್ತುಗಳು ಮತ್ತು ನಿರ್ಮಾಣ ತಂತ್ರಗಳು:

ಕ್ರಿ.ಶ. 13ರಿಂದ 17ನೇ ಶತಮಾನದ ವರೆಗೆ ಮೊಯ್ಡಮ್ಗಳ ನಿರ್ಮಾಣಕ್ಕೆ ಮುಖ್ಯವಾಗಿ ಮರವನ್ನೇ ಬಳಸಲಾಗುತ್ತಿತ್ತು. ಆದರೆ 18ನೇ ಶತಮಾನದ ಬಳಿಕ ಒಳಗಿನ ಕೋಣೆಗಳಿಗೆ ಕಲ್ಲು ಮತ್ತು ಸುಟ್ಟ ಇಟ್ಟಿಗೆಗಳನ್ನು ಹೆಚ್ಚಾಗಿ ಬಳಸಲಾಯಿತು.

ಅಹೋಮ್ಗಳ ಧಾರ್ಮಿಕ ಗ್ರಂಥವಾದ ಚಂಗ್ರುಂಗ್ ಫುಕನ್ ವಿವರಿಸುವಂತೆ ಈ ದಫನ ದಿಣ್ಣೆಗಳ ನಿರ್ಮಾಣದಲ್ಲಿ ಇಟ್ಟಿಗೆ, ಕಲ್ಲುಗಳು, ಕರಿ ಧಾನ್ಯಗಳು (ಉದ್ದಿನಂತವು), ಕಬ್ಬಿನ ಮಡಿ (ಮೊಲಾಸಿಸ್ ರೀತಿಯದ್ದು), ಬಾತುಕೋಳಿ ಮೊಟ್ಟೆಗಳು, ಬರಲಿ ಮೀನುಗಳು, ಸುಣ್ಣ (ಸುಣ್ಣದ ಕಲ್ಲುಗಳು ಮತ್ತು ಬಸವನ ಹುಳುವಿನ ಚಿಪ್ಪು) ಮತ್ತು ವಿವಿಧ ಗಾತ್ರಗಳ ಬಂಡೆಗಳು ಹಾಗೂ ಒಡೆದ ಕಲ್ಲುಗಳೂ ಸೇರಿದಂತೆ ಹಲವು ರೀತಿಯ ನಿರ್ಮಾಣ ಸಾಮಗ್ರಿಗಳನ್ನು ಬಳಸಲಾಗುತ್ತಿತ್ತು. ಆದರೆ ಬಾಹ್ಯ ರಚನೆಯನ್ನು ಮಾತ್ರ ದೊಡ್ಡ ಗಾತ್ರದ ಕಲ್ಲಿನ ಚಪ್ಪಡಿಗಳನ್ನು ಬಳಸಿ ಮಾಡಲಾಗುತ್ತಿತ್ತು.

ನಾಶವಾದ ಒಂದು ಅಪರೂಪದ ಸಂಸ್ಕೃತಿ

ಚೊರಾಯ್ದೇವ್ ಮೊಯ್ಡಮ್ಗಳು ಈಗ ತಾಯ್- ಅಹೋಮ್ ಸಂಸ್ಕೃತಿಯ ದಫನ ಕ್ರಿಯೆಗಳಲ್ಲಿ ಒಂದು ದೊಡ್ಡ ಮತ್ತು ಚೆನ್ನಾಗಿ ಕಾಪಿಡಲಾದ ಪಾರಂಪರಿಕ ಸಾಕ್ಷ್ಯವಾಗಿದೆ. ಈ ಪದ್ಧತಿಯು ನಂತರದಲ್ಲಿ ಅಲ್ಲಿನ ಅರಸರು ಹಿಂದೂ ಧರ್ಮ ಅಥವಾ ಬೌದ್ಧ ಧರ್ಮಕ್ಕೆ ಮತಾಂತರ ಆದ ಬಳಿಕ ನಶಿಸಿಹೋಯಿತು. ಈ ಮೊಯ್ಡಮ್ಗಳ ಸಂರಚನೆ, ವಿನ್ಯಾಸಗಳನ್ನು ಫುಕನ್ ಗ್ರಂಥಗಳಲ್ಲಿ ವಿವರಿಸಲಾಗಿದ್ದು, ಅವು ತಾಯ್ ಅಹೋಮ್ ಜನರ- ಜೀವನ, ಮರಣ ಮತ್ತು ಜೀವನೋತ್ತರ ಬದುಕು, ತಮ್ಮ ದೈವಿಕ ರಾಜರಿಗೆ ಸೂಕ್ತವಾದ ದಫನ ಭೂಮಿಗಳ ನಿರ್ಮಾಣ ಇತ್ಯಾದಿಗಳ ಕುರಿತು ನಂಬಿಕೆಗಳನ್ನು ಪ್ರತಿಫಲಿಸುತ್ತವೆ.

20ನೇ ಶತಮಾನದ ಆರಂಭದಲ್ಲಿ ನಿಧಿಕಳ್ಳರ ಲೂಟಿಕೃತ್ಯಗಳು ಈ ಸಮಾಧಿಗಳಿಗೆ ಹಾನಿ ಮಾಡಿದ್ದರೂ ಅವುಗಳ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ವ್ಯವಸ್ಥಿತವಾಗಿ ಪುನರುಜ್ಜೀವನಗೊಳಿಸಲಾಗಿದೆ.

ಚೊರಾಯ್ದೇವ್ನಲ್ಲಿರುವ ಮೊಯ್ಡಮ್ಗಳನ್ನು ತಮ್ಮ ವಿಧಿವಿಧಾನಗಳು ಮತ್ತು ಸ್ಮಾರಕ ರೂಪಗಳ ಮೂಲಕ ಪುರಾತನ ಚೀನಾದ ರಾಜಮನೆತನಗಳ ದಫನಭೂಮಿ ಮತ್ತು ಈಜಿಪ್ಟಿನ ಪಿರಾಮಿಡ್ಗಳಿಗೆ ಹೋಲಿಸಬಹುದು .ಅಹೋಮ್ ರಾಜಧಾನಿಯು ದಕ್ಷಿಣ ಮತ್ತು ಪೂರ್ವಕ್ಕೆ ಸ್ಥಳಾಂತರಗೊಳ್ಳಲು ಆರಂಭವಾದಂತೆಲ್ಲಾ, ಉತ್ತರ ವಿಯೆಟ್ನಾಂ, ಲಾಓಸ್, ಥಾಯ್ಲೆಂಡ್, ಉತ್ತರ ಬರ್ಮಾ, ದಕ್ಷಿಣ ಚೀನಾ ಮತ್ತು ಈಶಾನ್ಯ ಭಾರತದ ಹಲವೆಡೆ ಇಂತದ್ದೇ ದಫನ ರಚನೆಗಳು ಕಾಣಿಸಿಕೊಳ್ಳಲು ಆರಂಭಿಸಿದವು.

ಚೊರಾಯ್ದೇವ್ನ ಮೊಯ್ಡಮ್ಗಳು ತಮ್ಮ ಗಾತ್ರ, ನಿಭಿಡತೆ ಮತ್ತು ತಾಯ್ ಅಹೋಮ್ ಸಂಸ್ಕೃತಿಯಲ್ಲಿ ಅವು ಹೊಂದಿರುವ ಅತ್ಯಂತ ಪವಿತ್ರ ಸ್ಥಾನಗಳಿಂದಾಗಿ ಎದ್ದು ಕಾಣುತ್ತವೆ. ಚೊರಾಯ್ದೇವ್ ಮೊಯ್ಡಮ್ಗಳು ತಾಯ್ ಅಹೋಮ್ ಪರಂಪರೆಯ ವಿಶಿಷ್ಟವಾದ ದಫನ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ಅವು ಅದರ ಧಾರ್ಮಿಕ ನಂಬಿಕೆಗಳು ಮತ್ತು ಸಾಂಸ್ಕೃತಿಕ ಆಚರಣೆಗಳನ್ನು ಕಾಪಿಡುತ್ತವೆ. ಅವುಗಳ ಸಂರಕ್ಷಣೆ ಮತ್ತು ಅಧ್ಯಯನಗಳು ತಾಯ್ ಅಹೋಮ್ ನಾಗರಿಕತೆ ಮತ್ತು ಅದರ ಐತಿಹಾಸಿಕ ಸಂದರ್ಭವನ್ನು ಕುರಿತು ತಿಳಿದುಕೊಳ್ಳಲು ಅಮೂಲ್ಯ ಒಳನೋಟಗಳನ್ನು ಒದಗಿಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.