ಹ ಲವು ಶಾಲೆಗಳಲ್ಲಿ ಈಗ 10 ಮತ್ತು 12ನೇ (ದ್ವಿತೀಯ ಪಿಯುಸಿ) ತರಗತಿ ವಿದ್ಯಾರ್ಥಿಗಳಿಗೆ ‘ಕೌನ್ಸೆಲಿಂಗ್‘ (ಮಾರ್ಗದರ್ಶನ) ನಡೆಯುತ್ತಿದೆ. ಇದು ಕೋರ್ಸ್ ಆಯ್ಕೆ, ವೃತ್ತಿ ಯೋಜನೆ ತಯಾರಿ ಸೇರಿದಂತೆ ಭವಿಷ್ಯದ ‘ಶೈಕ್ಷಣಿಕ ಪಯಣ‘ಕ್ಕೆ ವಿದ್ಯಾರ್ಥಿಗಳಿಗೆ ಮಾರ್ಗ ತೋರುವ ಕಾರ್ಯಕ್ರಮ. ತಜ್ಞರು, ವಿದ್ಯಾರ್ಥಿಗಳು–ಪೋಷಕ ರೊಂದಿಗೆ ಚರ್ಚೆ ನಡೆಸಿ, ಇಬ್ಬರಲ್ಲೂ ಇಬಹುದಾದ ಆತಂಕ, ಗೊಂದಲಗಳನ್ನು ನಿವಾರಿಸಿ, ಸೂಕ್ತವಾದ ವೃತ್ತಿ ಮತ್ತು ಕೋರ್ಸ್ ಆಯ್ಕೆಗೆ ನೆರವಾಗುತ್ತಾರೆ.

ಈ ಪ್ರಕ್ರಿಯೆ ಹೇಗಿರುತ್ತದೆ :

ಸಾಮಾನ್ಯವಾಗಿ, ಶಾಲಾ ಕಾಲೇಜುಗಳಲ್ಲಿ ನಡೆಸುವ ಸಮೂಹ ಮಾರ್ಗದರ್ಶನ ಅಥವಾ ವೈಯಕ್ತಿಕ ಮಾರ್ಗದರ್ಶನದಲ್ಲಿ (ಒನ್ ಟು ಒನ್) ಮಾರ್ಗದರ್ಶಕರು ಹೀಗೆ ವಿಶ್ಲೇಷಿಸುತ್ತಾರೆ;

ವಿದ್ಯಾರ್ಥಿಯ ಮೌಲ್ಯಮಾಪನ

ವಿದ್ಯಾರ್ಥಿಯ ಜ್ಞಾನ ಮೌಲ್ಯಮಾಪನ ಮಾಡಲು ಆಪ್ಟಿಟ್ಯೂಡ್ ಟೆಸ್ಟ್ ಮಾಡಲಾಗುತ್ತದೆ. ಮೌಖಿಕ ಮತ್ತು ಅಮೌಖಿಕ ತಾರ್ಕಿಕತೆ, ಯಾಂತ್ರಿಕ ತಾರ್ಕಿಕತೆ, ಅಮೂರ್ತ ತಾರ್ಕಿಕತೆ, ಭಾಷಾ ಸಾಮರ್ಥ್ಯ, ಪರಿಮಾಣಾತ್ಮಕ ಸಾಮರ್ಥ್ಯ, ಜ್ಞಾಪಕ ಶಕ್ತಿ, ಸಾಮಾನ್ಯ ಜ್ಞಾನ ಇತ್ಯಾದಿಗಳನ್ನು ಪರೀಕ್ಷಿಸಲಾಗುತ್ತದೆ. ವಿದ್ಯಾರ್ಥಿಯ ಪ್ರತಿಭೆ, ಅಭಿರುಚಿ, ಆಸಕ್ತಿ, ಧೋರಣೆಗಳನ್ನು ಪರಿಗಣಿಸಿ, ವ್ಯಕ್ತಿತ್ವದ ಗುಣಲಕ್ಷಣಗಳನ್ನು ಗುರುತಿಸಿ, ಸೂಕ್ತವಾದ ವೃತ್ತಿ/ಕೋರ್ಸ್‌ಗಳನ್ನು ಸೂಚಿಸಲಾಗುತ್ತದೆ.

ವಿದ್ಯಾರ್ಥಿಗಳ ಆಕಾಂಕ್ಷೆಗಳ ಪರಿಶೀಲನೆ

ಮಕ್ಕಳಿಗೆ ಚಿಕ್ಕವಯಸ್ಸಿನಲ್ಲೇ ಪೈಲಟ್, ಡಾಕ್ಟರ್, ಎಂಜಿನಿಯರ್ ಆಗುವ ಆಸೆಗಳಿರುತ್ತವೆ. ಪ್ರೌಢಾವಸ್ಥೆಗೆ ಬರುತ್ತಿದ್ದಂತೆ ಇಂತಹ ಕನಸುಗಳು ಗಟ್ಟಿಯಾಗುವುದೂ, ಬೇರೊಂದು ಕನಸುಗಳನ್ನು ಕಾಣುವುದೂ ಸಹಜ. ಹಾಗಾಗಿ, 10/12ನೇ ತರಗತಿಯ ಮಕ್ಕಳಿಗೆ ಅಗತ್ಯವಾದ ಅಭಿರುಚಿ, ಆಸಕ್ತಿ, ಕೌಶಲಗಳಿವೆಯೇ ಎಂದು ಮೌಲ್ಯಮಾಪನ ಮಾಡಬೇಕಾಗುತ್ತದೆ.

ಪೋಷಕರ ಆಕಾಂಕ್ಷೆಗಳ ಪರಾಮರ್ಶೆ

l ಪೋಷಕರು ತಾವು ಅನುಸರಿಸುತ್ತಿರುವ ಅಥವಾ ಅನುಸರಿಸಬೇಕೆಂದಿದ್ದ ವೃತ್ತಿಯನ್ನು ಹೇರುವ ಧೋರಣೆ ಯನ್ನು ಇನ್ನೂ ಗಮನಿಸುತ್ತಿದ್ದೇವೆ. ಇದು ಯಾವ ಸಂದರ್ಭದಲ್ಲಿ ಮಾತ್ರ ಸೂಕ್ತವೆಂದು ಮಾರ್ಗದರ್ಶಕರು ವಿಶ್ಲೇಷಿಸುತ್ತಾರೆ.

ಕೌಟುಂಬಿಕ ಹಿನ್ನೆಲೆಯೇನು?

l ಕುಟುಂಬದ ಮೌಲ್ಯಗಳು, ಅವಕಾಶಗಳು, ಸವಾಲುಗಳಿಗೂ ವೃತ್ತಿ/ಕೋರ್ಸ್ ಆಯ್ಕೆಗೂ ಹೊಂದಾಣಿಕೆಯಿರಬೇಕು. ಇಲ್ಲದಿದ್ದರೆ, ಭವಿಷ್ಯದಲ್ಲಿ ಆಂತರಿಕ ಸಂಘರ್ಷದಿಂದ ಜೀವನದಲ್ಲಿ ಅತೃಪ್ತಿಯಾಗಬಹುದು. ಹಾಗಾಗಿ, ಕುಟುಂಬ ಹಿನ್ನೆಲೆ ಪರಿಶೀಲಿಸಿ, ಅದಕ್ಕೆ ತೊಂದರೆಯಾಗದಂತೆ ಮಾರ್ಗದರ್ಶಕರು ಸಲಹೆ ನೀಡುತ್ತಾರೆ.

ಯಾವ ವೃತ್ತಿ/ಕೋರ್ಸ್?

lಮೇಲಿನ ಎಲ್ಲಾ ಅಂಶಗಳನ್ನು ವಿಶ್ಲೇಷಿಸಿ, ಯಾವ ಕೋರ್ಸ್, ವೃತ್ತಿ ಸೂಕ್ತ ಹಾಗೂ ಯಾವ ವೃತ್ತಿ ಸರಿಹೊಂದುವುದಿಲ್ಲ ಎಂಬ ಮಾರ್ಗದರ್ಶಕರು ತಿಳಿಸುತ್ತಾರೆ.

ಈ ಅಭಿಪ್ರಾಯಗಳನ್ನು ವಿದ್ಯಾರ್ಥಿಗಳಿಗೂ, ಪೋಷಕರಿಗೂ ಮನವರಿಕೆ ಮಾಡುವಾಗ ಸವಾಲಾಗುವುದೂ ಉಂಟು. ಏಕೆಂದರೆ, ಪೋಷಕರು ತಮ್ಮ ಮಕ್ಕಳನ್ನು ಯಾವ ವೃತ್ತಿ/ಕೋರ್ಸ್‌ಗೆ ಸೇರಿಸಬೇಕೆಂದು ಮೊದಲೇ ನಿರ್ಧರಿಸಿ ಮಾರ್ಗದರ್ಶನ ಪ್ರಕ್ರಿಯೆಯಲ್ಲಿ ಭಾಗಿಯಾಗುವುದುಂಟು. ಈ ಸಂದರ್ಭದಲ್ಲಿ, ಪ್ರತಿಷ್ಠಿತ ಪಿಯುಸಿ ಕಾಲೇಜಿನಲ್ಲಿ ನಡೆದ ಒಂದು ಘಟನೆಯನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತವೆನಿಸುತ್ತದೆ.

ಘಟನೆ ಹೀಗಿದೆ; ಶ್ರೀಮಂತ ಕುಟುಂಬದ ಪೋಷಕರೊಬ್ಬರು(ತಂದೆ), ತನ್ನ ಮಗಳನ್ನು ವೈದ್ಯಳನ್ನಾಗಿ ಮಾಡಬೇಕೆನ್ನುವ ಪೂರ್ವ-ನಿರ್ಧಾರದಿಂದಲೇ ಮಾರ್ಗದರ್ಶನಕ್ಕಾಗಿ ಬಂದಿದ್ದರು. ಆದರೆ, ವಿದ್ಯಾರ್ಥಿನಿಗೆ ವೈದ್ಯಕೀಯ ವೃತ್ತಿಗೆ ಬೇಕಾದ ಕೌಶಲಗಳು, ಅಭಿರುಚಿ, ಆಸಕ್ತಿಯಿರಲಿಲ್ಲ. ಜೊತೆಗೆ ಹೆಚ್ಚಿನ ಸಂಕೋಚ, ಅಂಜಿಕೆ. ನೀಟ್ ಪ್ರವೇಶ ಪರೀಕ್ಷೆಯಲ್ಲಿ ಮೆರಿಟ್ ಸೀಟ್ ಸಿಗುವ ಯಾವ ಸಾಧ್ಯತೆಯೂ ಇರಲಿಲ್ಲ. ‘ತಾನು ವೈದ್ಯಕೀಯ ವೃತ್ತಿ ನಿಭಾಯಿಸಲಾರೆ‘ ಎಂಬುದು ಆಕೆಯ ಅಭಿಪ್ರಾಯವಾಗಿತ್ತು. ತಂದೆಗೆ, ಎಷ್ಟಾದರೂ ಡೊನೇಷನ್ ಕೊಟ್ಟು ಮಗಳನ್ನು ಓದಿಸಬೇಕೆಂಬ ಹಟ. ಮಾರ್ಗದರ್ಶಕರಾದ ನಮ್ಮದೂ, ವಿದ್ಯಾರ್ಥಿನಿಯ ಅಭಿಪ್ರಾಯವೇ ಆಗಿತ್ತು. ಕೊನೆಗೂ, ಮಗಳನ್ನು ವೈದ್ಯಳನ್ನಾಗಿ ಮಾಡಬೇಕೆಂಬ ತಂದೆಯ ನಿರ್ಧಾರವನ್ನು ಬದಲಿಸಲು ಹೆಣಗಾಡ ಬೇಕಾಯಿತು. ಹೀಗೆ ಕೌನ್ಸೆಲರ್‌ಗಳ ಅಭಿಪ್ರಾಯ ಸ್ವೀಕರಿಸದೇ, ಅದಕ್ಕೆ ತದ್ವಿರುದ್ಧವಾಗಿ ತೆಗೆದುಕೊಂಡ ಪೋಷಕರ ಕೆಲವು ನಿರ್ಧಾರಗಳು ತಪ್ಪಾಗಿರುವ ಉದಾಹರಣೆಗಳು ಸಾಕಷ್ಟಿವೆ.

ಹಾಗಾದರೆ, ವಿದ್ಯಾರ್ಥಿಗಳು ಮತ್ತು ಪೋಷಕರು, ಮಾರ್ಗದರ್ಶಕರು ನೀಡುವ ಸಲಹೆಗಳನ್ನು ಬಳಸಿಕೊಳ್ಳಲು ಯಾವ ರೀತಿ ಸಿದ್ಧರಾಬೇಕು. ಅದಕ್ಕೆ ಇಲ್ಲಿದೆ ಮಾಹಿತಿ;

ವಿದ್ಯಾರ್ಥಿಗಳ, ಪೋಷಕರ ಪೂರ್ವ-ಸಿದ್ಧತೆಗಳು

l ಶಿಕ್ಷಣದ ಪ್ರಾಮುಖ್ಯವನ್ನು ವಿಧ್ಯಾರ್ಥಿಗಳೂ, ಪೋಷಕರೂ ಅರಿತು, ಮುಕ್ತ ಮನಸ್ಸಿನಿಂದ ಚರ್ಚಿಸಿ, ವೃತ್ತಿಜೀವನದ ಆಯ್ಕೆಗಳನ್ನು ಪರಿಗಣಿಸಿ, ಮಾರ್ಗದರ್ಶನದ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು.

lಮಕ್ಕಳಿಗೂ ಪೋಷಕರಿಗೂ ವಿಚಾರ ವಿನಿಮಯ ಮಾಡಲು ಸಕಾರಾತ್ಮಕವಾದ ಪರಿಸರವಿರಬೇಕು. ಒಬ್ಬರನ್ನೊಬ್ಬರು ನಿಂದಿಸದೆ, ಆರೋಗ್ಯಕರವಾಗಿ ಚರ್ಚೆಯಾಗಬೇಕು.

l ವೃತ್ತಿ/ಕೋರ್ಸ್/ಕಾಲೇಜು ಕುರಿತ ಅಪಾರವಾದ ಮಾಹಿತಿ ಜಾಲತಾಣದಲ್ಲಿ ಲಭ್ಯ. ಈ ಮಾಹಿತಿಯನ್ನು ಕಲೆಹಾಕಿ ವಿಶ್ಲೇಷಣೆ ಮಾಡಿದರೆ, ಎಲ್ಲಾ ಸಾಧ್ಯತೆಗಳು ಬೆಳಕಿಗೆ ಬಂದು, ಒಮ್ಮತದ ನಿರ್ಧಾರಕ್ಕೆ ಬರಬಹುದು.

l ನಿಮ್ಮ ನಿರ್ಧಾರ ಕುರಿತ ಸಂದೇಹಗಳು, ಸವಾಲುಗಳು, ಗೊಂದಲಗಳು ಸ್ವಾಭಾವಿಕ. ಇವುಗಳನ್ನು ಮಾರ್ಗದರ್ಶಕರೊಡನೆ ಚರ್ಚಿಸಬೇಕು.

ಅಂತಿಮ ನಿರ್ಧಾರ ಹೇಗೆ?

ಮಾರ್ಗದರ್ಶನದ ಅಂತಿಮ ಘಟ್ಟದಲ್ಲಿ ಸೂಕ್ತವಾದ ವೃತ್ತಿ ಮತ್ತು ಕೋರ್ಸ್ ಮಾರ್ಗಸೂಚಿಯನ್ನು ನೀಡಲಾಗುತ್ತದೆ. ಮಾರ್ಗದರ್ಶಕರೊಡನೆ ಸಮಾಲೋಚಿಸಿ ಎರಡು ಆಯ್ಕೆಗಳನ್ನು (ಪ್ಲಾನ್ ಎ, ಪ್ಲಾನ್ ಬಿ) ಗಮನದಲ್ಲಿಟ್ಟುಕೊಳ್ಳುವುದು ಸೂಕ್ತ.

ಸಾಮಾನ್ಯವಾಗಿ, ಮಾರ್ಗದರ್ಶನ ಪ್ರಕ್ರಿಯೆಗೂ ಕೋರ್ಸ್ ಪ್ರವೇಶಕ್ಕೂ ಅಂತರವಿರುವುದು ಸಹಜ. ಹಾಗಾಗಿ, ಅಂತಿಮ ನಿರ್ಧಾರ ತೆಗೆದುಕೊಳ್ಳುವಾಗ ಮಾರ್ಗದರ್ಶಕರ ಸಲಹೆ, ಸೂಚನೆಗಳನ್ನು, ಅಗತ್ಯವಿದ್ದಲ್ಲಿ ಇನ್ನೊಮ್ಮೆ ವಿಶ್ಲೇಷಿಸಬಹುದು. ಆದರೆ, ನಿರ್ಧಾರಗಳು ಕೇವಲ ಭಾವನಾತ್ಮಕವಾಗಿರದೆ ತರ್ಕಬದ್ಧವಾಗಿರಲಿ.

ನಮ್ಮ ಬದುಕಿಗೊಂದು ಕೈಪಿಡಿ ಇಲ್ಲ; ಯಶಸ್ಸಿಗೆ ಇಂತದ್ದೇ ವೃತ್ತಿ ಮಾಡಬೇಕೆನ್ನುವ ನಿಯಮವಿಲ್ಲ. ಆದರೆ, ವೃತ್ತಿಯನ್ನು ನಮ್ಮ ಅಭಿರುಚಿಯಂತೆ, ಆಸಕ್ತಿಯಂತೆ ಆರಿಸಿ, ಪರಿಶ್ರಮದಿಂದ ಅನುಸರಿಸಿದರೆ, ಬದುಕಿನಲ್ಲಿ ಯಶಸ್ಸು, ಸಂತೃಪ್ತಿ ಸಿಗುವುದರಲ್ಲಿ ಸಂದೇಹವಿಲ್ಲ.

(ಲೇಖಕರು ಶಿಕ್ಷಣ ತಜ್ಞರು ಮತ್ತು ವೃತ್ತಿ ಸಲಹೆಗಾರರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.