ಪಶುವೈದ್ಯರಿಗೆ ಸಹಾಯಕರಾಗಿ ಕೆಲಸ ನಿರ್ವಹಿಸಲು ಮತ್ತು ಪಶುಸಂಗೋಪನೆಯಲ್ಲಿ ನೆರವಾಗಲು ತಾಂತ್ರಿಕ ಕೌಶಲಯುಕ್ತ ಸಿಬ್ಬಂದಿ ರೂಪಿಸುವುದಕ್ಕಾಗಿ ಕೆಲವು ವರ್ಷಗಳ ಹಿಂದೆ ರಾಜ್ಯದ ವಿವಿಧ ಕಡೆಗಳಲ್ಲಿ ಪಶುಸಂಗೋಪನಾ (ಪಶುವೈದ್ಯಕೀಯ) ಡಿಪ್ಲೊಮಾ ಕೋರ್ಸ್ ಆರಂಭಿಸಲಾಗಿದೆ. ಇತ್ತೀಚೆಗೆ ಈ ಕೋರ್ಸ್ಗೆ ಬೇಡಿಕೆ ಹೆಚ್ಚುತ್ತಿದೆ.

ರಾಜ್ಯದ ಐದು ಕಡೆಗಳಲ್ಲಿರುವ ಪಶುಸಂಗೋಪನಾ ಪಾಲಿಟೆಕ್ನಿಕ್ಗಳಲ್ಲಿ ಈ ಡಿಪ್ಲೊಮಾ ಕೋರ್ಸ್ ಇದೆ. ಪ್ರತಿ ಪಾಲಿಟೆಕ್ನಿಕ್ ತನ್ನದೇ ಸಂಶೋಧನಾ ಕೇಂದ್ರವನ್ನು ಹೊಂದಿದೆ. ಪಶುಸಂಗೋಪನೆಯಲ್ಲಿ ಹೊಸ ತಳಿಗಳ ಸಂಶೋಧನೆ ಮತ್ತು ಪರಂಪರಾಗತ ತಳಿಗಳ ಅಭಿವೃದ್ಧಿಯಲ್ಲಿ ತೊಡಗಿಕೊಂಡಿವೆ.

ವಿದ್ಯಾರ್ಹತೆ:ಎಸ್ಸೆಸ್ಸೆಲ್ಸಿ ತೇರ್ಗಡೆಯಾಗಿರುವ, 1 ರಿಂದ 10 ತರಗತಿವರೆಗೆ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾಭ್ಯಾಸ ಮಾಡಿರುವ 20 ವರ್ಷ ವಯೋಮಿತಿ ಮೀರಿರದ ಅಭ್ಯರ್ಥಿಗಳು ಈ ಕೋರ್ಸ್ಗೆ ಅರ್ಜಿ ಸಲ್ಲಿಸಬಹುದು.

ಎರಡು ವರ್ಷ ಅವಧಿ:

ಈ ಪಶುಸಂಗೋಪನಾ ಡಿಪ್ಲೊಮಾ ಕೋರ್ಸ್ ಅವಧಿ ಎರಡು ವರ್ಷ. ಬೀದರ್ನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯಾಪ್ತಿಯ ಪಶುಸಂಗೋಪನಾ ಪಾಲಿಟೆಕ್ನಿಕ್ಗಳು,ತಿಪಟೂರು ತಾಲ್ಲೂಕಿನ ಕೊನೆಹಳ್ಳಿ, ಶಿಗ್ಗಾಂವ ತಾಲ್ಲೂಕಿನ ಕುನ್ನೂರು, ಹಾಸನ ತಾಲ್ಲೂಕು ಕೋರವಂಗಲ ಕ್ರಾಸ್, ಗುಂಡ್ಲುಪೇಟೆ ತಾಲ್ಲೂಕು ಬರಗಿ ಹಾಗೂ ಶಹಾಪುರ ತಾಲ್ಲೂಕು ದೋರನಹಳ್ಳಿಯ ಪಶುಸಂಗೋಪನಾ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಪಶುಸಂಗೋಪನಾ ಡಿಪ್ಲೊಮಾ ಕೋರ್ಸ್ ಕಲಿಸಲಾಗುತ್ತಿದೆ. ಪ್ರತಿ ಪಾಲಿಟೆಕ್ನಿಕ್ನಲ್ಲಿ 50 ಸೀಟುಗಳಿರುತ್ತವೆ.

ಮೆರಿಟ್-ಕಂ-ರೋಸ್ಟರ್ ಪದ್ಧತಿ ಆಧಾರದಲ್ಲಿ ನೇರ ಮೌಖಿಕ ಸಂದರ್ಶನ ವನ್ನು ಬೆಂಗಳೂರಿನ ಪಶುವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ನಡೆಸಲಾಗುತ್ತದೆ. ಪ್ರವೇಶ ಪಡೆದ ಎಲ್ಲಾ ಅಭ್ಯರ್ಥಿಗಳಿಗೆ ಮಾಸಿಕ ₹1000 ಶಿಷ್ಯವೇತನ ನೀಡಲಾಗುತ್ತದೆ. ಹೆಚ್ಚಿನ ವಿವರಗಳಿಗೆ https://www.kvafsu.edu.in/kannada/course_diploma_ka.html ಜಾಲತಾಣ ಭೇಟಿ ಮಾಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.