ವೃತ್ತಿಜೀವನದಲ್ಲಿ ಪ್ರಗತಿ ಮತ್ತು ಯಶಸ್ಸನ್ನು ಸಾಧಿಸಲು, ಆಸಕ್ತಿ, ಅಭಿರುಚಿ ಮತ್ತು ವೃತ್ತಿ ಸಂಬಂಧಿತ ಕೌಶಲಗಳು ಅಗತ್ಯ.
ಎಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಕೋರ್ಸ್‌ಗಳಿಗೆ ಗಣಿತದಲ್ಲಿ ತಜ್ಞತೆ, ವಿಶ್ಲೇಷಾತ್ಮಕ ಕೌಶಲ, ಯೋಜನೆಯ ನಿರ್ವಹಣೆ, ತಾಂತ್ರಿಕ ಕೌಶಲ, ಸಮಸ್ಯೆಗಳನ್ನು ಬಗೆಹರಿಸುವ ಕೌಶಲಗಳು ಅಗತ್ಯ. ಆದರೆ ಯಶಸ್ವಿ ಆರ್ಕಿಟೆಕ್ಟ್ ಆಗಲು, ಈ ಕೌಶಲಗಳ ಜೊತೆಗೆ ಈ ಕ್ಷೇತ್ರದಲ್ಲಿ ಅಭಿರುಚಿ, ಸೃಜನಶೀಲತೆ, ವಿನ್ಯಾಸದ ಆಸಕ್ತಿ ಬೇಕು. ಅಂತಿಮ ಆಯ್ಕೆಯ ಮುನ್ನ, ಈ ಕೌಶಲಗಳಿವೆಯೇ ಎಂದು ವಿಶ್ಲೇಷಿಸಿ. ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://youtu.be/AwlDno1YduQ