ಬ್ಯಾಂ ಕ್ ನೇಮಕಾತಿ ಸಿಬ್ಬಂದಿ ಸಂಸ್ಥೆ (ಐಬಿಪಿಎಸ್) ವಿವಿಧ ಬ್ಯಾಂಕ್ಗಳಲ್ಲಿನ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಪ್ರಸಕ್ತ ಸಾಲಿನಲ್ಲಿ ನಡೆಸುತ್ತಿರುವ ಬ್ಯಾಂಕ್ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಇಂದು (ಜು.21) ಕೊನೆಯ ದಿನ. ಈ ಪರೀಕ್ಷೆಗೆ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಇಲ್ಲಿ ವಿವರಿಸಲಾಗಿದೆ.

lಅರ್ಜಿ ಸಲ್ಲಿಸಲು ಅರ್ಹತೆ ಇದೆಯಾ ಎಂಬುದನ್ನು ಮೊದಲು ಪರೀಕ್ಷಿಸಿ ಕೊಳ್ಳಿ. ಮುಖ್ಯವಾಗಿ ವಯೋಮಿತಿ, ವಿದ್ಯಾರ್ಹತೆಯನ್ನು ಗಮನಿಸಿಕೊಳ್ಳಿ.

l→ಪರೀಕ್ಷಾ ಅಧಿಸೂಚನೆಯ ಅನುಬಂಧ-II (Annexure-II)ರಲ್ಲಿರುವಂತೆ ನಿಮ್ಮ ಭಾವಚಿತ್ರ, ಹೆಬ್ಬೆಟ್ಟಿನ ಗುರುತು ದೃಢೀಕರಣ ಪತ್ರ ಹಾಗೂ ಸಹಿಯನ್ನು ಮೊದಲೇ ಸ್ಕ್ಯಾನ್ ಮಾಡಿ ‘ಜೆಪಿಜಿ’(ಉದಾ: pic.jpg) ಫಾರ್ಮೆಟ್ನಲ್ಲಿ ಸೇವ್ ಮಾಡಿಟ್ಟುಕೊಳ್ಳಿ. ಇ-ಮೇಲ್ ವಿಳಾಸ ಹಾಗೂ ಮೊಬೈಲ್ ಸಂಖ್ಯೆ ಹೊಂದಿರುವುದು ಕಡ್ಡಾಯ. ಆದ್ದರಿಂದ ಇ-ಮೇಲ್ ಅಕೌಂಟ್ ಇಲ್ಲದಿದ್ದಲ್ಲಿ ಅರ್ಜಿ ಸಲ್ಲಿಸುವ ಮುನ್ನ ಹೊಸದಾಗಿ ಇಮೇಲ್ ಖಾತೆ ತೆರೆದುಕೊಳ್ಳಿ.

l→ಅರ್ಜಿಯಲ್ಲಿ ನಮೂದಿಸಿದ ಇ-ಮೇಲ್ ಐ.ಡಿ.ಯನ್ನು ಪರೀಕ್ಷಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಿ. ಏಕೆಂದರೆ, ಐಬಿಪಿಎಸ್ ಸಂಸ್ಥೆ ಸಂದರ್ಶನ ಪತ್ರ / ಪರೀಕ್ಷಾ ಸೂಚನಾ ಪತ್ರ ಹಾಗೂ ಇತರೆ ಮಾಹಿತಿಗಳನ್ನು ವಿಶೇಷ ಸಂದರ್ಭಗಳಲ್ಲಿ ಇ-ಮೇಲ್ ಐ.ಡಿ.ಗೆ ಕಳುಹಿಸುತ್ತದೆ. ಆಗಾಗ ಮೇಲ್ ಚೆಕ್ ಮಾಡಲು ಮರೆಯಬೇಡಿ, ನಿಮ್ಮ ಇ-ಮೇಲ್ ಐ.ಡಿ.ಯನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ ಹಾಗೂ ಆನ್ಲೈನ್ನಲ್ಲಿ ಅಣಕು ಪರೀಕ್ಷೆಗೂ ಬಳಸಬೇಡಿ.

l→ಆನ್ಲೈನ್ ಅಪ್ಲಿಕೇಷನ್ ಸಲ್ಲಿಸುವಾಗ ಅರ್ಜಿ ನಮೂನೆಯಲ್ಲಿ ‘save and next’ ಆಪ್ಶನ್ ಅನ್ನೇ ಬಳಸಿ. ಕೊನೆಯಲ್ಲಿ ‘final submit‘ ಬಟನ್ ಒತ್ತುವ ಮೊದಲು ಏನಾದರೂ ಮಾಹಿತಿ ಬದಲಿಸಬೇಕಾದರೆ ‘preview’ ನಲ್ಲಿ ಒಮ್ಮೆ ನೋಡಿ. ಆಮೇಲೆ ಬೇಕಾದರೆ ಬದಲಿಸಲು ಅವಕಾಶವಿದೆ. ಆದರೆ ನೆನಪಿಡಿ ಯಾವುದೇ ಕಾರಣಕ್ಕೂ ಅಭ್ಯರ್ಥಿಯ ಹೆಸರು, ಹುಟ್ಟಿದ ದಿನಾಂಕ, ಮೊಬೈಲ್ ನಂಬರ್, ಇ-ಮೇಲ್ ಐ.ಡಿ.ಯಂತಹ ಮೂಲ ಮಾಹಿತಿಯನ್ನು ಒಮ್ಮೆ ನಮೂದಿಸಿದಾ ನಂತರ ಬದಲಾಯಿಸಲು ಸಾಧ್ಯವಾಗುವುದಿಲ್ಲ.

l→ನಿಮ್ಮ ಐ.ಡಿ. ಪ್ರೂಫ್ನಲ್ಲಿ(ಗುರುತಿನ ಚೀಟಿ) ಹಾಗೂ ಇತರೆ ದಾಖಲೆ ಗಳಲ್ಲಿ ಇರುವಂತೆಯೇ ನಿಮ್ಮ ಮೊದಲ, ಮಧ್ಯ ಹಾಗೂ ಕೊನೆಯ ಹೆಸರನ್ನು ಅರ್ಜಿ ಸಲ್ಲಿಸುವಾಗ ಸರಿಯಾಗಿ ಭರ್ತಿ ಮಾಡಿ. ಅರ್ಜಿಯಲ್ಲಿನ ಹೆಸರು ದಾಖಲೆಗೆ ಹೊಂದಿಕೆಯಾಗದಿದ್ದರೆ ಅಭ್ಯರ್ಥಿಯನ್ನು ಅನರ್ಹಗೊಳಿಸಲಾಗುತ್ತದೆ.

l→ಅರ್ಜಿ ಸಲ್ಲಿಸುವಾಗ ಒಂದೇ ಬಾರಿಗೆ ಎಲ್ಲ ಮಾಹಿತಿಯನ್ನು ತುಂಬಬೇಕೆಂಬ ನಿಯಮವಿಲ್ಲ. ಡೇಟಾ ಸೇವ್ ಮಾಡಿ ಎಲ್ಲ ಮಾಹಿತಿ ಯನ್ನು ತುಂಬಿದ ನಂತರವೇ ‘final submit’ ಬಟನ್ ಒತ್ತಿ. ಹೀಗೆ ಮಾಡುವಾಗ ನೋಂದಾಯಿತ ಇಮೇಲ್ಗೆ ಬಂದ ನಿಮ್ಮ ನೋಂದಣಿ ಸಂಖ್ಯೆ ಹಾಗೂ ಪಾಸ್ವರ್ಡ್ ಅನ್ನು ಬರೆದಿಟ್ಟುಕೊಳ್ಳಲು ಮರೆಯಬೇಡಿ.

l→ಆನ್ಲೈನ್ ಅಪ್ಲಿಕೇಷನ್ನಲ್ಲಿ ನಾಲ್ಕು ವಿಭಾಗಗಳಿರುತ್ತವೆ. ಮೊದಲನೆ ಯದ್ದು, ಬೇಸಿಕ್ ಇನ್ಫರ್ಮೇಷನ್, ಎರಡನೆಯದ್ದು ಭಾವಚಿತ್ರ ಹಾಗೂ ಸಹಿ, ಮೂರನೆಯದರಲ್ಲಿ ಮೂರು ವಿಭಾಗಗಳಿದ್ದು, ಮೊದಲ ವಿಭಾಗದಲ್ಲಿ Category/Date of Birth/Address, ಎರಡನೇ ವಿಭಾಗದಲ್ಲಿ ವಿದ್ಯಾರ್ಹತೆ/ ಅನುಭವ, ಮೂರನೇ ವಿಭಾಗದಲ್ಲಿ ನೀವು ಆರಿಸಿಕೊಳ್ಳುವ ಬ್ಯಾಂಕ್ ಅನ್ನು ಕ್ರಮವಾಗಿ ಗುರುತಿಸುವುದು ಕಡ್ಡಾಯ. ನಿಮಗೆ ಇಷ್ಟವಾದ ಬ್ಯಾಂಕ್ ಅನ್ನು ಮೊದಲು ಗುರುತಿಸಿ. ಏಕೆಂದರೆ ಮುಂದೆ ನೇಮಕಾತಿ ಸಂದರ್ಭದಲ್ಲಿ ನೀವು ಗುರುತಿಸಿದ ಬ್ಯಾಂಕುಗಳಿಗೆ ಮೊದಲ ಆದ್ಯತೆ ನೀಡುತ್ತಾರೆ. ನಾಲ್ಕನೆಯದಾಗಿ ಪ್ರಿವ್ಯೂ ಮತ್ತು ಐದನೆಯದಾಗಿ ನಿಮ್ಮ ಹೆಬ್ಬೆಟ್ಟಿನ ಗುರುತು ಹಾಗೂ ಧೃಢೀಕರಣ ಪತ್ರವನ್ನು ಅಪ್ ಲೋಡ್ ಮಾಡಬೇಕು. ಎಲ್ಲವೂ ಸರಿಯಾಗಿದ್ದರೆ final submit ಬಟನ್ ಒತ್ತಿ. ನಂತರ payment ಡೀಟೇಲ್ಸ್ ನ ಇನ್ನೊಂದು ಅಡಿಷನಲ್ ಪೇಜ್ ಡಿಸ್ಪ್ಲೇ ಆಗುತ್ತದೆ.

ಆನ್ಲೈನ್ನಲ್ಲಿ ಶುಲ್ಕ ಭರಿಸಲು ಕ್ರೆಡಿಟ್ / ಡೆಬಿಟ್ ಕಾರ್ಡ್ ಹಾಗೂ ಪಾಸ್ವರ್ಡ್ ಮಾಹಿತಿಯನ್ನು ಮೊದಲೇ ಸಿದ್ಧವಾಗಿಟ್ಟುಕೊಳ್ಳಿ. ಕಾರ್ಡ್ ಮೂಲಕ ಅರ್ಜಿ ಶುಲ್ಕ ಪಾವತಿಸಿ.

l→ಆನ್ಲೈನ್ ಪೇಮೆಂಟ್ ಮಾಡುವಾಗ ಪೇಮೆಂಟ್ ಇನ್ಫರ್ಮೇಷನ್ ತುಂಬಿದ ನಂತರ ಸರ್ವರ್ನಿಂದ ಮಾಹಿತಿ ಬರುವವರೆಗೆ ಕಾಯಿರಿ. ಈ ಸಂದರ್ಭದಲ್ಲಿ back ಅಥವಾ refresh ಬಟನ್ ಬಳಸಬೇಡಿ, ಒಂದು ವೇಳೆ ಎರಡರಲ್ಲಿ ಯಾವುದೇ ಬಟನ್ ಬಳಸಿದರೆ ಗೊಂದಲವಾಗಿ ಎರಡು ಸಲ ಶುಲ್ಕ ಪಾವತಿಯಾಗಬಹುದು.

l→ಗಮನಿಸಿ: ಅರ್ಜಿಯ ಕೊನೆಯಲ್ಲಿ ಕೈಬರಹದ ಘೋಷಣೆಯ ಪಠ್ಯ ಹೀಗಿರುತ್ತದೆ- ‘ನಾನು, _______ (ಅಭ್ಯರ್ಥಿಯ ಹೆಸರು), ಈ ಮೂಲಕ ನಾನು ಅರ್ಜಿಯಲ್ಲಿ ಸಲ್ಲಿಸಿದ ಎಲ್ಲಾ ಮಾಹಿತಿಯು ಸರಿಯಾಗಿದೆ, ನಿಜ ಮತ್ತು ಮಾನ್ಯವಾಗಿದೆ ಎಂದು ಘೋಷಿಸುತ್ತೇನೆ. ಅಗತ್ಯವಿದ್ದಾಗ ನಾನು ಪೂರಕ ದಾಖಲೆಗಳನ್ನು ಪ್ರಸ್ತುತಪಡಿಸುತ್ತೇನೆ’.

ನೆನಪಿಡಿ: ಮೇಲೆ ತಿಳಿಸಿದ ಕೈ ಬರಹದ ಘೋಷಣೆ ಅಭ್ಯರ್ಥಿಯ ಕೈ ಬರಹದಲ್ಲಿ ಮತ್ತು ಇಂಗ್ಲಿಷ್ನಲ್ಲಿ ಮಾತ್ರ ಇರಬೇಕು ಮತ್ತು ಕ್ಯಾಪಿಟಲ್ ಲೆಟರ್ಸ್ನಲ್ಲಿ ಇರಬಾರದು. ಇದನ್ನು ಬೇರೆಯವರು ಅಥವಾ ಬೇರೆ ಯಾವುದೇ ಭಾಷೆಯಲ್ಲಿ ಬರೆದಿದ್ದರೆ, ಅರ್ಜಿ ಅಮಾನ್ಯವಾಗುತ್ತದೆ.

l→ಕ್ಯಾಪಿಟಲ್ ಲೆಟರ್ಗಳಲ್ಲಿ ಹಾಕಿದ ಸಹಿ ಸ್ವೀಕರಿಸಲಾಗುವುದಿಲ್ಲ.

l→ಎಡ ಹೆಬ್ಬೆರಳಿನ ಗುರುತು ಸರಿಯಾಗಿ ಸ್ಕ್ಯಾನ್ ಮಾಡಬೇಕು ಮತ್ತು ಮಸುಕಾಗಿರಬಾರದು.⇒

(ಸರಣಿ ಮುಗಿಯಿತು)

(ಲೇಖಕರು: ಬ್ಯಾಂಕಿಂಗ್ ಪರೀಕ್ಷೆ ಮತ್ತು ವ್ಯಕ್ತಿತ್ವ ವಿಕಸನ ತರಬೇತುದಾರರು ಹಾಗೂ ವೃತ್ತಿ ಮಾರ್ಗದರ್ಶಕರು. ಮಡಿಕೇರಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.