ಶಿವಮೊಗ್ಗ: ದ್ವಿತೀಯ ಪಿಯುಸಿ ಪರೀಕ್ಷೆ ಕಲಾ ವಿಭಾಗದಲ್ಲಿ ಇಲ್ಲಿನ ಡಿವಿಎಸ್ ಇಂಡಿಪೆಂಡೆಂಟ್ ಕಾಲೇಜಿನ ವಿದ್ಯಾರ್ಥಿನಿ ಕೆ.ಸಿ.ಚುಕ್ಕಿ 600ಕ್ಕೆ 593 ಅಂಕಗಳಿಸಿ ನಾಲ್ಕನೇ ರ‍್ಯಾಂಕ್ ಪಡೆದಿದ್ದಾರೆ.

ಚುಕ್ಕಿ ಹಿರಿಯ ಪತ್ರಕರ್ತ ಹೊನ್ನಾಳಿ ಚಂದ್ರಶೇಖರ ಹಾಗೂ ವಕೀಲೆ ಪೂರ್ಣಿಮಾ ದಂಪತಿ ಪುತ್ರಿ.

ಚುಕ್ಕಿ ಎಸ್ಸೆಸ್ಸೆಲ್ಸಿಯಲ್ಲಿ 625ಕ್ಕೆ 621 ಅಂಕ ಪಡೆದಿದ್ದು, ದ್ವಿತೀಯ ಪಿಯುಸಿಯಲ್ಲಿ ಕಲಾ ವಿಭಾಗವನ್ನು ಆಯ್ದುಕೊಂಡಿದ್ದರು.

ಮುಂದೆ ಎಲ್‌ಎಲ್‌ಬಿ ಓದಿ, ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸುವೆ ಎಂದು ಹೇಳುವ ಚುಕ್ಕಿ ಐಎಎಸ್ ಅಧಿಕಾರಿ ಆಗುವ ಕನಸು ಹೊಂದಿದ್ದಾರೆ.

'ದಿನಕ್ಕೆ ನಾಲ್ಕು ತಾಸು ಓದುತ್ತಿದ್ದೆ. ರಂಗಕಲೆ, ನೃತ್ಯದಲ್ಲಿ ತೊಡಗಿಕೊಂಡಿರುವುದರಿಂದ ಪರೀಕ್ಷೆಯನ್ನು ಒತ್ತಡ ಮಾಡಿಕೊಳ್ಳದೇ ಸುಲಭವಾಗಿ ತೆಗೆದುಕೊಂಡೆ. ಹೀಗಾಗಿ ರ‍್ಯಾಂಕ್ ಗಳಿಸಲು ಸಾಧ್ಯವಾಯಿತು' ಎಂದು ಚುಕ್ಕಿ ಪ್ರತಿಕ್ರಿಯಿಸಿದರು.
.Karnataka 2nd PUC Result 2024: ರಾಜ್ಯದ ಶೇ 81.15 ವಿದ್ಯಾರ್ಥಿಗಳು ಉತ್ತೀರ್ಣ.ದ್ವಿತೀಯ ಪಿಯು ಕಲಾ ವಿಭಾಗ: ಮೂವರು ಟಾಪರ್ಗಳಲ್ಲಿ ಕೊಟ್ಟೂರಿನ ವಿದ್ಯಾರ್ಥಿನಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.