ಎರಡೂ ಆಯ್ಕೆಗಳು ಉತ್ತಮವಾದದ್ದಾದರೂ, ಯಾವುದು ಹೆಚ್ಚು ಸೂಕ್ತವೆಂದು ಮೌಲ್ಯಮಾಪನ ಮಾಡಬೇಕು. ವೈದ್ಯರಾಗಲು ಸೇವಾ ಮನೋಭಾವ, ಜ್ಞಾಪಕ ಶಕ್ತಿ, ನಿಷ್ಠೆ, ಪ್ರಾಮಾಣಿಕತೆ, ಸಮಯದ ನಿರ್ವಹಣೆ, ವೃತ್ತಿ ಮತ್ತು ವೈಯಕ್ತಿಕ ಬದುಕಿನ ಸಮತೋಲನ ಅಗತ್ಯವಾದರೆ, ಎಂಜಿನಿಯರಿಂಗ್ ವೃತ್ತಿಗೆ ಗಣಿತದಲ್ಲಿ ತಜ್ಞತೆ, ವಿಶ್ಲೇಷಾತ್ಮಕ ಕೌಶಲ, ಯೋಜನೆಯ ನಿರ್ವಹಣೆ, ತಾಂತ್ರಿಕ ಕೌಶಲದ ಅಗತ್ಯವಿರುತ್ತದೆ. ಹಾಗಾಗಿ, ನಿಮ್ಮ ಸ್ವಾಭಾವಿಕ ಪ್ರತಿಭೆ, ಆಸಕ್ತಿ, ಒಲವು ಮತ್ತು ಕೌಶಲಗಳ ಮೌಲ್ಯಮಾಪನ ಮಾಡಿ, ವೈಯಕ್ತಿಕ/ಕುಟುಂಬದ ಮೌಲ್ಯಗಳು, ಸವಾಲುಗಳು, ಅಗತ್ಯಗಳು, ಧ್ಯೇಯಗಳನ್ನು ಗುರುತಿಸಿ, ವೃತ್ತಿಯ ಆಯ್ಕೆಯನ್ನು ಮಾಡುವುದು ಸೂಕ್ತ.