ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯವು ಯುಪಿಎಸ್‌ಸಿ ಪರೀಕ್ಷೆ ಮಾತ್ರವಲ್ಲ, ಕೆಪಿಎಸ್‌ಸಿಯ ವಿವಿಧ ಹುದ್ದೆಗಳ ಪರೀಕ್ಷೆಗಳಲ್ಲಿಯೂ ಪ್ರಮುಖ ವಿಷಯವಾಗಿದೆ. ವಿಜ್ಞಾನ ವಿಷಯದಿಂದ ನಾಗರಿಕ ಸೇವಾ ಪೂರ್ವಭಾವಿ ಪರೀಕ್ಷೆಯಲ್ಲಿ 10 ರಿಂದ 20 ಪ್ರಶ್ನೆಗಳು ಬರುತ್ತವೆ. ಮುಖ್ಯ ಪರೀಕ್ಷೆಯ ಸಾಮಾನ್ಯ ಜ್ಞಾನ ಪತ್ರಿಕೆ-3 ವಿವರಣಾತ್ಮಾಕ ಪತ್ರಿಕೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯದ ತಯಾರಿ ನಡೆಸಬೇಕಾಗುತ್ತದೆ.

ಇತ್ತೀಚೆಗೆ ನಡೆದ ಪೊಲೀಸ್ ಸಬ್-ಇನ್‌ಸ್ಪೆಕ್ಟರ್ ಮತ್ತು ಎಫ್‌ಡಿಎ ಪರೀಕ್ಷೆಗಳಲ್ಲಿ 30ಕ್ಕಿಂತ ಅಧಿಕ ಸಂಖ್ಯೆಯ ಪ್ರಶ್ನೆಗಳು ವಿಜ್ಞಾನ ವಿಷಯದಿಂದ ಬಂದಿರುವುದು ‘ಟ್ರೆಂಡ್ ಬ್ರೇಕರ್’ ಎಂದೇ ಹೇಳಬಹುದು. ಕಳೆದರಡು ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ನೋಡಿದರೆ, ಯಾರೂ ಊಹಿಸಲಾಗದಷ್ಟು ಪ್ರಶ್ನೆಗಳು ವಿಜ್ಞಾನ ವಿಷಯದಿಂದ ಬಂದಿರುವುದು ಗಮನಾರ್ಹ ಬದಲಾವಣೆ. ಇದು ಮುಂಬರುವ ಪರೀಕ್ಷೆಗಳಲ್ಲಿ ಈ ವಿಷಯಕ್ಕೆ ನೀಡಬೇಕಾದ ಪ್ರಾಮುಖ್ಯತೆಯನ್ನು ಸೂಚಿಸುತ್ತದೆ.

ವಿಜ್ಞಾನ ವಿಷಯವನ್ನು ಆಳವಾಗಿ ವಿಶ್ಲೇಷಿಸುತ್ತಾ ಹೋದರೆ ಇದನ್ನು ಐದು ಪ್ರಮುಖ ಭಾಗಗಳಾಗಿ ವಿಂಗಡಿಸಬಹುದು.

1) ಜೀವ ವಿಜ್ಞಾನ 2) ಭೌತ ವಿಜ್ಞಾನ
3) ರಸಾಯನ ವಿಜ್ಞಾನ 4) ತಂತ್ರಜ್ಞಾನ
5) ಪರಿಸರ ಅಧ್ಯಯನ

ಜೀವ ವಿಜ್ಞಾನ ಎಂದರೆ ಒಂದು ಸಣ್ಣ ಸೂಕ್ಷ್ಮ ಜೀವಿಯಿಂದ ಪ್ರಾರಂಭವಾಗಿ ಮನುಷ್ಯನವರೆಗೂ ಅಧ್ಯಯನ ಮಾಡುವ ವಿಷಯವಾಗಿದೆ. ಇದರಲ್ಲಿ ಮುಖ್ಯವಾಗಿ ಮಾನವ ಅಂಗಾಂಗ ವ್ಯವಸ್ಥೆ, ಆಹಾರದಲ್ಲಿನ ಪೋಷಾಂಶಗಳು, ರೋಗಗಳು, ವಿಟಿಮಿನ್‌ಗಳು ಮತ್ತು ಇತರ ವಿಷಯಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇದರೊಂದಿಗೆ ಸ್ವಲ್ಪ ಮಟ್ಟಿಗೆ ಸಸ್ಯ ಸಾಮ್ರಾಜ್ಯದ ಬಗ್ಗೆಯೂ ತಿಳಿಯುವ ಅವಶ್ಯಕತೆ ಇದೆ.

ಭೌತವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಭೌತಿಕ ಲಕ್ಷಣಗಳು ಅಂದರೆ ಬೆಳಕು, ಶಬ್ದ, ಚಲನೆ ಹೀಗೆ ನಮ್ಮ ದಿನನಿತ್ಯದ ಜೀವನದಲ್ಲಿ ನಾವು ನಮ್ಮ ಪರಿಸರದೊಂದಿಗಿನ ಒಡನಾಟದಲ್ಲಿ ಬರುವ ಮುಖ್ಯ ಭೌತಿಕ ಲಕ್ಷಣಗಳನ್ನು ತಿಳಿಯುವ ವಿಷಯವಾಗಿದೆ.

ರಸಾಯನ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ನಾವು ಬಳಸುವ ಗಾಜು, ಸಾಬೂನು, ಸಿಮೆಂಟ್, ಲೋಹಗಳು, ಅಲೋಹಗಳು ಇವುಗಳ ತಯಾರಿಕೆ ಇತ್ಯಾದಿ ವಸ್ತುಗಳ ಕುರಿತು ಅಧ್ಯಯನ ನಡೆಸುವ ವಿಷಯವಾಗಿದೆ. ಅನೇಕ ವಸ್ತುಗಳ ಉತ್ಪಾದನೆಯಲ್ಲಿ ಬಳಸುವ ರಾಸಾಯನಿಕ ವಸ್ತುಗಳ ಕುರಿತು ಅಧ್ಯಯನ ನಡೆಸುವ ವಿಷಯವೂ ಹೌದು.

ಪ್ರಚಲಿತ ವಿಷಯ ಸಂಯೋಜನೆ

ಪ್ರಸ್ತುತದಲ್ಲಿ ಇರುವ ತಂತ್ರಜ್ಞಾನ ವಿಷಯಕ್ಕೆ ಪ್ರಚಲಿತ ಘಟನೆಗಳನ್ನು ಸಂಯೋಜಿಸಿ ಪ್ರಶ್ನೆಗಳನ್ನು ಈ ಕೆಳಗಿನ ವಿಷಯಗಳ ಬಗ್ಗೆ ಕೇಳಲಾಗುತ್ತದೆ. ಉದಾಹರಣೆಗೆ ರಾಕೆಟ್ ಉಡಾವಣೆ: ತಯಾರಿಕೆ, ಇಸ್ರೋ, ಇನ್ನಿತರ ಬಾಹ್ಯಕಾಶ ಸಂಸ್ಥೆಗಳು, ನ್ಯಾನೋ ಟಿಕ್ನಾಲಜಿ, ಬಯೋಟೆಕ್ನಾಲಜಿ, ರೋಬೊಟಿಕ್ಸ್, ರಕ್ಷಣಾ ವಿಭಾಗ, ಕೃತಕ ಬುದ್ಧಿಮತ್ತೆ, ಇದರ ಜೊತೆಗೆ ತಾಂತ್ರಿಕ ಪದಗಳು, ನೊಬೆಲ್ ಪ್ರಶಸ್ತಿಗಳು, ಹೊಸ ಆವಿಷ್ಕಾರಗಳು ಮತ್ತು ಅನ್ವೇಷಣೆಗಳು ಮತ್ತು ಇತರ ವಿಷಯಗಳ ಬಗ್ಗೆ ಅಧ್ಯಯನ ನಡೆಸಬೇಕಾಗುತ್ತದೆ.

ಪರಿಸರ ಅಧ್ಯಯನಕ್ಕೆ ಸಂಬಂಧಿಸಿದಂತೆ ಮೂಲ ಪರಿಕಲ್ಪನೆಗಳು, ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಸಮ್ಮೇಳನಗಳು, ಪರಿಸರಕ್ಕೆ ಸಂಬಂಧಿಸಿದ ದಿನಗಳು ಮತ್ತು ಆಚರಣೆಗಳು, ಸಸ್ಯ ಸಂಪನ್ಮೂಲಗಳು, ಅರಣ್ಯ ವರದಿ, ರಾಷ್ಟ್ರೀಯ ಉದ್ಯಾನವನಗಳು, ಹುಲಿ ಸಂರಕ್ಷಣಾ ತಾಣಗಳು, ಅಳಿವಿನಂಚಿನಲ್ಲಿರುವ ಪ್ರಾಣಿ ಮತ್ತು ಸಸ್ಯವರ್ಗ ಮತ್ತು ಇನ್ನಿತರ ವಿಷಯಗಳನ್ನು ತಿಳಿಯುವುದು ಕೂಡ ಅವಶ್ಯ.

ಇದರೊಂದಿಗೆ ಅನ್ವಯಿಕ ವಿಜ್ಞಾನ (ದಿನ ನಿತ್ಯ ವಿಜ್ಞಾನ) ವಿಷಯಗಳ ಬಗ್ಗೆಯೂ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಮೇಲಿನ ಎಲ್ಲವೂ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಪಕ್ಷಿ ನೋಟವಾಗಿದ್ದು, ಪುಸ್ತಕ ಅಧ್ಯಯನದ ಜೊತೆಗೆ ನಮ್ಮ ಸುತ್ತಮುತ್ತ ನಡೆಯುವ ವಿಸ್ಮಯಗಳ ಕುರಿತು ಕುತೂಹಲ ಮನೋಭಾವ ಬೆಳೆಸಿಕೊಳ್ಳವುದು ಈ ವಿಷಯವನ್ನು ಅರ್ಥೈಸಿಕೊಳ್ಳಲು ಹೆಚ್ಚು ಸಹಾಯ ಮಾಡುತ್ತದೆ.

ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಉತ್ತಮ ರೆಫರೆನ್ಸ್ ಪುಸ್ತಕಗಳು ಮಾರುಕಟ್ಟೆಯಲ್ಲಿ ಲಭ್ಯವಿರುವುದಿಲ್ಲ. ವಿವಿಧ ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸಬೇಕಾಗುತ್ತದೆ. ಮೂಲ ವಿಷಯಕ್ಕೆ ಸಂಬಂಧಿಸಿದಂತೆ ಸ್ಪರ್ಧಾರ್ಥಿಗಳು ಎನ್‌ಸಿಇಆರ್‌ಟಿ (6 ರಿಂದ 10ನೇ ತರಗತಿ ಪುಸ್ತಕಗಳು ಹಾಗೂ 11 ಮತ್ತು 12ನೇ ತರಗತಿಗಳ ಪುಸ್ತಕಗಳು ಜೀವ ವಿಜ್ಞಾನಕ್ಕೆ ಹೆಚ್ಚು ಒತ್ತು ನೀಡುತ್ತವೆ) ಹಾಗೂ ಡಿಎಸ್‌ಇಆರ್‌ಟಿ ಯ 6 ರಿಂದ 10 ನೇ ತರಗತಿಯ ಪುಸ್ತಕಗಳನ್ನು ಕಡ್ಡಾಯವಾಗಿ ಓದುವುದು. ಇಂಗ್ಲಿಷ್‌ನಲ್ಲಿ ದೊರೆಯುವ ಸೈನ್ಸ್ ರಿಪೋರ್ಟರ್, ಡೌನ್ ಟು ಅರ್ಥ, ಯೋಜನಾ, ಕುರುಕ್ಷೇತ್ರ ನಿಯತಕಾಲಿಕಗಳು ಹಾಗೂ ಇಸ್ರೋ ಮತ್ತು ಡಿಆರ್‌ಡಿಓ ವೆಬ್‌ಸೈಟ್‌ನಲ್ಲಿ ದೊರಕುವ ಮಾಹಿತಿಯನ್ನು ಕಲೆಹಾಕಬಹುದು. ಪರೀಕ್ಷಾ ತಯಾರಿಯನ್ನು ಇನ್ನೂ ಹೆಚ್ಚು ಚುರುಕುಗೊಳಿಸಲು ಈ ಪುಸ್ತಕಗಳನ್ನು ಕೂಡ ಅಧ್ಯಯನ ಮಾಡಬಹುದು.

1.Lucent’s Publication Series

2.Environment by Shankar IAS Academy

3.4G Science- Ravi H. N

4.ಸಮಗ್ರ ವಿಜ್ಞಾನ- ವಿಆರ್‌ಎಸ್

5.ಪರಿಸರ ಅಧ್ಯಯನ- ವಿನೋದ್ ಕುಮಾರ್ ಚವ್ಹಾಣ್

6.ವಿಜ್ಞಾನ ಮತ್ತು ತಂತ್ರಜ್ಞಾನ -ಹರಿ ಪ್ರಸಾದ್

7.ನಿತ್ಯ ಜೀವನದ ವಿಜ್ಞಾನ ಮತ್ತು ಅನ್ವಯಿಕ ವಿಜ್ಞಾನ -ಕೆ.ಎಂ. ಸುರೇಶ್

(ಲೇಖಕ: ನಿರ್ದೇಶಕರು, ಜ್ಞಾನಗಂಗೋತ್ರಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರ, ಬೆಂಗಳೂರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.