ಮಗು ನಿತ್ಯವೂ ತನ್ನ ಪರಿಸರದ ಅನೇಕ ವಿದ್ಯಮಾನಗಳನ್ನು ನೋಡುತ್ತಾ, ಕಲಿಯುತ್ತಾ ಬೆಳೆಯುತ್ತದೆ. ಈ ವಿದ್ಯಮಾನಗಳಿಂದ ಮಗುವಿನ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಎದುರಾಗುವುದು ಸಹಜ. ಮಳೆ ಬರುವುದು, ಬಿಸಿಲು ಬೀಳುವುದು, ಕಾಮನಬಿಲ್ಲು ಮೂಡುವುದು, ಗ್ರಹಣಗಳಾಗುವುದು, ಹುಣ್ಣಿಮೆ ಮತ್ತು ಅಮಾವಾಸ್ಯೆಗಳು, ಋತುಗಳ ಬದಲಾವಣೆಯಿಂದ ಕಾಲ ಮತ್ತು ವರ್ಷಗಳ ಬದಲಾವಣೆ ಹೀಗೆ ಅನೇಕ ವಿದ್ಯಮಾನಗಳು ಮಗುವಿನ ಗಮನಕ್ಕೆ ಬರುತ್ತವೆ. ಪ್ರತಿದಿನವೂ ಸೂರ್ಯೋದಯ ಮತ್ತು ಸೂರ್ಯಾಸ್ತ ನೋಡುವ ಮಗುವಿಗೆ ಎಷ್ಟೊಂದು ಸೂರ್ಯರಿರಬಹುದು ಎಂಬ ಪ್ರಶ್ನೆ ಮೂಡದೇ ಇರದು. ನಿತ್ಯ ಪರಿಸರವನ್ನು ಗಮನಿಸುವ ಮಗು ಇಂತಹ ಪ್ರಶ್ನೆಗಳ ಮೂಟೆಯನ್ನು ಹೊತ್ತುಕೊಂಡು ತಿರುಗಾಡುತ್ತದೆ. ಇದಕ್ಕೆ ಸೂಕ್ತ ಉತ್ತರಗಳು ಮನೆಯಲ್ಲಿ ಸಿಗಬಹುದು ಅಥವಾ ಸಿಗದೇ ಇರಬಹುದು. ಮಗುವಿನಲ್ಲಿನ ಇಂತಹ ಪ್ರಶ್ನೆಗಳಿಗೆ ಬಹುತೇಕ ಪಾಲಕರು ಉತ್ತರ ಹೇಳುವಲ್ಲಿ ವಿಫಲರಾಗುವುದು ಸಹಜ. ಆದರೆ ಇಂತಹ ಮೂಲಭೂತ ಪ್ರಶ್ನೆಗಳಿಗೆ ಸರಿಯಾದ ಉತ್ತರ ದೊರೆತಾಗ ಮಾತ್ರ ಮಗು ಭೂಗೋಳ ವಿಷಯದಲ್ಲಿ ಆಸಕ್ತಿ ವಹಿಸುತ್ತದೆ.

ಮಕ್ಕಳಿಗೆ ನೇರವಾಗಿ ಭೂಗೋಳವನ್ನು ಕಲಿಸಲು ಸಾಧ್ಯವಿಲ್ಲ. ಪರಿಸರದಲ್ಲಿನ ಚಿಕ್ಕ ಚಿಕ್ಕ ಘಟನೆಗಳು ಮತ್ತು ವಿದ್ಯಮಾನಗಳ ಮೂಲಕವೇ ಭೂಗೋಳ ಕಲಿಸಲು ಸಾಕಷ್ಟು ಅವಕಾಶಗಳಿವೆ. ಪ್ರಾರಂಭದಲ್ಲಿ ಮಗು ತನ್ನ ಪರಿಸರದಲ್ಲಿ ಬೆಳೆಯುವ ಗಿಡಮರಗಳ ಪರಿಚಯ ಮಾಡಿಕೊಂಡರೆ ಮಾತ್ರ ಹೊರದೇಶಗಳ ಗಿಡಮರಗಳ ಬಗ್ಗೆ ಆಸಕ್ತಿ ತಳೆಯಲು ಸಾಧ್ಯ. ತಾನು ವಾಸಿಸುವ ಮಣ್ಣಿನ ಗುಣ ಮತ್ತು ಅದರಲ್ಲಿನ ಬೆಳೆಯುವ ಬೆಳೆಗಳನ್ನು ತಿಳಿದುಕೊಂಡರೆ ಮಾತ್ರ ಇನ್ನಿತರೇ ಪ್ರದೇಶಗಳ ಮಣ್ಣು ಮತ್ತು ಬೆಳೆಗಳ ಬಗ್ಗೆ ತಾನೇ ತಾನಾಗಿ ಕಲಿಯಲು ಆಸಕ್ತಿ ವಹಿಸುತ್ತದೆ. ಹಾಗಾಗಿ ಪಾಲಕರಾದ ನಾವು ಮಕ್ಕಳಿಗೆ ನಾವು ವಾಸಿಸುವ ಪರಿಸರ ಮತ್ತು ಪ್ರಾದೇಶಿಕ ಸಂಪನ್ಮೂಲಗಳನ್ನು ಅಂದರೆ ಹವಾಮಾನ, ವಾಯುಗುಣ, ಮಣ್ಣು, ಬೆಳೆಗಳು, ಖನಿಜಗಳು, ಕೈಗಾರಿಕೆಗಳು ಇಂತಹ ಭೂಗೋಳಕ್ಕೆ ಸಂಬಂಧಿಸಿದ ವಿಷಯಗಳನ್ನು ತಿಳಿಸಬೇಕು. ಆಗ ಮಕ್ಕಳಲ್ಲಿ ಭೂಗೋಳ ಕಲಿಕೆಯತ್ತ ಸ್ವಾಭಾವಿಕವಾದ ಆಸಕ್ತಿ ಮೂಡಿಬರುತ್ತದೆ.

ಜ್ಞಾನದ ಮೂಲವಾಗಿ ಭೂಗೋಳ

ಭೂಗೋಳ ಕಲಿಕೆಯು ಕೇವಲ ಭೂಮಿಯ ಆಕಾರ, ಗಾತ್ರದ ಕಲಿಕೆಯಲ್ಲ. ಇದು ಭೂಮ್ಯಾಕಾಶದ ಕಲಿಕೆ ಎನ್ನಬಹುದು. ಅಂದರೆ ಭೂಮಿಯ ಉಗಮಕ್ಕೆ ಕಾರಣವಾದ ಅಂಶಗಳಿಂದ ಅಂತರಿಕ್ಷದ ಗ್ರಹ, ತಾರೆಗಳವರೆಗಿನ ಅನೇಕ ಅಂಶಗಳ ಕಲಿಕೆ ಇಲ್ಲಿ ಅಡಕವಾಗಿರುತ್ತದೆ. ಭೂಗೋಳ ಕೇವಲ ಒಂದು ವಿಷಯವಲ್ಲ. ಅದು ವಿವಿಧ ಜ್ಞಾನಗಳ ಮೂಲ ಆಗರ. ಇಲ್ಲಿ ವಿಜ್ಞಾನ, ಸಮಾಜ ಅಧ್ಯಯನ, ಸಂಸ್ಕೃತಿ, ನೆಲ, ಜಲ, ಭಾಷೆ, ಕೃಷಿ, ಖನಿಜ ಸಂಪನ್ಮೂಲಗಳು, ಕೈಗಾರಿಕೊದ್ಯಮ, ತಂತ್ರಜ್ಞಾನ ಹೀಗೆ ಅನೇಕ ವಿಷಯಗಳು ಇದರಲ್ಲಿ ಅಂತರ್ಗತವಾಗಿವೆ. ಹಾಗಾಗಿ ಭೂಗೋಳ ಕಲಿಕೆಯಿಂದ ಮಕ್ಕಳಲ್ಲಿ ವಿವಿಧ ವಿಷಯಗಳ ಕಲಿಕೆಗೆ ಪೂರಕವಾದ ಮೂಲ ಜ್ಞಾನ ದೊರೆಯುತ್ತದೆ.
ಭೂಗೋಳ ಕಲಿಕೆಯಿಂದ ಮಕ್ಕಳು ವಿವಿಧ ಭೌಗೋಳಿಕ ಪ್ರದೇಶದ ಜನರ ಜೀವನ ವಿಧಾನ ಮತ್ತು ಪದ್ಧತಿಗಳನ್ನು ತಿಳಿದು ಗೌರವಿಸುತ್ತಾರೆ. ನೈಜ ಅನುಭವದ ಆಧಾರದ ಮೇಲೆ ನೈಸರ್ಗಿಕ ವಿದ್ಯಮಾನಗಳನ್ನು ಅರ್ಥೈಸಿಕೊಳ್ಳುತ್ತಾರೆ. ಸ್ಥಳೀಯ ಭೌಗೋಳಿಕ ಅವಲೋಕನ ವಿಧಾನಗಳಿಂದ ನಕ್ಷೆ, ಗ್ಲೋಬ್, ಅಟ್ಲಾಸ್ ಮುಂತಾದವುಗಳ ಬಳಕೆ ಮಾಡುತ್ತಾರೆ ಹಾಗೂ ಅವುಗಳಿಂದ ಹೆಚ್ಚು ಹೆಚ್ಚು ಜ್ಞಾನ ಸಂಪಾದಿಸಿಕೊಳ್ಳುತ್ತಾರೆ.

ಹೇಗೆ ಕಲಿಸಬಹುದು?

ಕಲೆ, ಸಂಗೀತ, ಹಾಗೂ ಇನ್ನಿತರೇ ವಿಷಯಗಳನ್ನು ಮನೆಯಲ್ಲೇ ಕಲಿಯಲು ಉತ್ತೇಜಿಸುವಂತೆ ಭೂಗೋಳ ಕಲಿಕೆಯನ್ನು ಉತ್ತೇಜಿಸಲು ವಿಪುಲ ಅವಕಾಶಗಳಿವೆ. ಕೆಲವು ಮೋಜಿನ ಚಟುವಟಿಕೆಗಳ ಮೂಲಕವೂ ಭೂಗೋಳವನ್ನು ಸುಲಭವಾಗಿ ಮನೆಯಲ್ಲಿಯೇ ಕಲಿಸಬಹುದು. ಅಂತಹ ಕೆಲವು ಚಟುವಟಿಕೆಗಳ ಕಿರುನೋಟ ಇಲ್ಲಿದೆ.

ಹಾಡುಗಳು: ಮಕ್ಕಳಿಗೆ ಹಾಡುಗಳೆಂದರೆ ಪಂಚಪ್ರಾಣ. ಭೂಗೋಳದ ಪ್ರಾಥಮಿಕ ವಿಷಯಗಳಾದ ಸೂರ್ಯ, ಗ್ರಹಗಳು, ನಕ್ಷತ್ರಗಳು, ಸೌರವ್ಯೂಹ, ಮಳೆ, ವಾಯುಮಂಡಲ ಮುಂತಾದ ಪರಿಕಲ್ಪನೆಗಳನ್ನು ಹಾಡುಗಳ ಮೂಲಕ ಕಲಿಸಿದರೆ ಮಕ್ಕಳು ಸುಲಭವಾಗಿ ಭೂಗೋಳದಲ್ಲಿ ಆಸಕ್ತಿ ವಹಿಸುವರು. ಜನಪದ ಹಾಡುಗಳಲ್ಲಿ ಭೂಗೋಳ ವಿಷಯ ಕುರಿತ ಸಾಕಷ್ಟು ಹಾಡುಗಳಿವೆ. ಅವುಗಳನ್ನು ಬಳಸಿಕೊಂಡು ಭೂಗೋಳವನ್ನು ಹಾಡುಗಳ ಮೂಲಕ ಕಲಿಸಬಹುದು.

ಒಗಟುಗಳು: ಒಗಟು ಮಕ್ಕಳಿಗೆ ಖುಷಿಯ ಚಟುವಟಿಕೆ. ಒಗಟುಗಳ ಮೂಲಕ ಭೂಗೋಳದ ಪರಿಕಲ್ಪನೆಗಳನ್ನು ಕಲಿಸಬಹುದು. ಮನೆಯಲ್ಲಿನ ಹಿರಿಯರ ಬಳಿ ಒಗಟುಗಳ ಖಜಾನೆ ಇದ್ದೇ ಇರುತ್ತದೆ. ಇದನ್ನು ಬಳಸಿ ಮಕ್ಕಳಿಗೆ ಭೂಗೋಳ ಕಲಿಸಲು ಅವಕಾಶವಿದೆ. ಅಲ್ಲದೇ ವಿವಿಧ ಜಾಲತಾಣಗಳಲ್ಲಿಯೂ ಒಗಟುಗಳು ಲಭ್ಯ ಇವೆ. ಅವುಗಳನ್ನು ಬಳಸಿ ಕಲಿಸಬಹುದು.

ನಕ್ಷೆ, ಗ್ಲೋಬ್ ಮತ್ತು ಅಟ್ಲಾಸ್: ಪ್ರತಿ ಮನೆಯಲ್ಲಿಯೂ ಕನಿಷ್ಠ ನಾಲ್ಕಾರು ನಕ್ಷೆಗಳು, ಒಂದು ಗ್ಲೋಬ್ ಹಾಗೂ ಒಂದು ಅಟ್ಲಾಸ್ ಇದ್ದರೆ ಮಕ್ಕಳ ಕಲಿಕೆಯ ಆಯಾಮ ವಿಭಿನ್ನವಾಗಿರುತ್ತದೆ. ಮಕ್ಕಳು ತಮಗೆ ಬೇಕಾದಾಗ ಬೇಕಾದ ಸ್ಥಳಗಳನ್ನು ಗ್ಲೋಬ್ ಮತ್ತು ಅಟ್ಲಾಸ್ ಬಳಸಿ ಹುಡುಕಬಹುದು. ಗ್ಲೋಬ್ ಬಳಕೆಯಿಂದ ಯಾವ ಯಾವ ದಿಕ್ಕುಗಳಲ್ಲಿ ಯಾವ ಯಾವ ಸ್ಥಳಗಳಿವೆ, ಸ್ಥಳಗಳ ನಡುವಿನ ಪರಸ್ಪರ ದೂರ ಎಷ್ಟು ಎಂಬುದು ಮಕ್ಕಳಿಗೆ ಖಚಿತವಾಗುತ್ತದೆ. ನಕ್ಷೆಗಳ ಮೂಲಕವೂ ಮಕ್ಕಳ ಸಾಕಷ್ಟು ಪ್ರದೇಶಗಳ ಮಾಹಿತಿಯನ್ನು ಕಲಿಯುವರು. ನಕ್ಷೆ, ಗ್ಲೋಬ್ ಮತ್ತು ಅಟ್ಲಾಸ್‌ಗಳಿಂದ ವಿವಿಧ ಸ್ಥಳಗಳ ಭೌತಿಕ ಲಕ್ಷಣಗಳನ್ನು, ಜನಜೀವನವನ್ನು ಕಲಿಯಲು ಸುಲಭವಾಗುತ್ತದೆ.

ನಕ್ಷೆ ತಯಾರಿಕೆ: ಮಕ್ಕಳು ತಮ್ಮ ಪ್ರದೇಶದ ನಕ್ಷೆ ಬಿಡಿಸುವುದರಿಂದಲೂ ಸಾಕಷ್ಟು ಭೂಗೋಳದ ಮಾಹಿತಿಯನ್ನು ಕಲಿಯಲು ಅವಕಾಶವಿದೆ. ನಕ್ಷೆಯಲ್ಲಿ ಗಡಿಗಳು, ಭೌತಿಕ ಸಂಪನ್ಮೂಲಗಳು, ನೈಸರ್ಗಿಕ ಲಕ್ಷಣಗಳಾದ ಗುಡ್ಡ, ಬೆಟ್ಟ, ಪರ್ವತ, ಕಾಡು, ಕೆರೆ, ನದಿ, ಸಾಗರ, ಬೆಳೆಗಳು, ಕೈಗಾರಿಕೆಗಳು, ರಸ್ತೆಗಳು, ಸಾರಿಗೆ ವ್ಯವಸ್ಥೆ, ಇತ್ಯಾದಿ ಮಾಹಿತಿಗಳನ್ನು ಗುರುತಿಸುವ ಹಾಗೂ ಅದನ್ನು ವಿಶ್ಲೇಷಿಸುವ ಕೌಶಲ ಗಳಿಸುವರು.
ಹೀಗೆ ವೈವಿಧ್ಯಮಯ ಭೌತಿಕ ಚಟುವಟಿಕೆಗಳ ಮೂಲಕ ಭೂಗೋಳವನ್ನು ಕಲಿಸಲು ಅವಕಾಶವಿದೆ.

ಇತ್ತೀಚಿನ ದಿನಗಳಲ್ಲಿ ಹೆಚ್ಚು ಪೋಷಕರು ಗಣಿತ, ವಿಜ್ಞಾನದಂತಹ ಕೆಲವು ನಿರ್ದಿಷ್ಟ ವಿಷಯಗಳಲ್ಲಿ ಮಾತ್ರ ಮಕ್ಕಳನ್ನು ಓದಲು ಪ್ರೇರೇಪಿ
ಸುತ್ತಿದ್ದಾರೆ. ಇದೇ ವೇಳೆ ಕೆಲವು ಪ್ರಾಮುಖ್ಯವಾದ ವಿಷಯಗಳನ್ನು ಕಡೆಗಣಿಸುತ್ತಿದ್ದಾರೆ. ಅದರಲ್ಲಿ ಭೂಗೋಳವೂ ಒಂದು. ಆದರೆ ಪ್ರಾರಂಭಿಕ ಹಂತದಿಂದ ಭೂಗೋಳ ವಿಷಯ ಕಲಿಯಲು ಪ್ರೇರೇಪಿಸಿದರೆ ಇನ್ನುಳಿದ ವಿಷಯಗಳನ್ನು ಕಲಿಯಲು ಅವರೇ ಸ್ವಯಂ ಆಸಕ್ತಿ ಹೊಂದುವರು. ಪ್ರಾರಂಭಿಕ ಹಂತದಿಂದಲೇ ಭೂಗೋಳ ಕಲಿಕೆಯನ್ನು ಉತ್ತೇಜಿಸಿದರೆ ಅನುಭವಗಳ ಮೂಲಕವೇ ತಮ್ಮ ಜ್ಞಾನವನ್ನು ಕಟ್ಟಿಕೊಳ್ಳಲು ಮುಂದೆಬರುತ್ತಾರೆ. ಲೌಕಿಕ ಅರಿವನ್ನು ಪಡೆಯುತ್ತಲೇ ಇನ್ನಿತರೇ ವಿಷಯಗಳನ್ನು ಕಲಿಯಲು ಕುತೂಹಲ ವಹಿಸುತ್ತಾರೆ.

ಬಾಕ್ಸ್

ಪದಬಂಧ ಹಾಗೂ ಚಿತ್ರಬಂಧ

ಪದಬಂಧ ಹಾಗೂ ಚಿತ್ರಬಂಧಗಳ ಮೂಲಕ ಭೂಗೋಳ ಕಲಿಸಬಹುದು. ಭೂಗೋಳಕ್ಕೆ ಸಂಬಂಧಿಸಿದ ನಿರ್ದಿಷ್ಟ ಪರಿಕಲ್ಪನೆಯಾಧಾರಿತ ಚಿತ್ರದ ತುಂಡುಗಳನ್ನು ನೀಡಿ ಅವುಗಳನ್ನು ಜೋಡಿಸುವ ಮತ್ತು ಅದರ ಬಗ್ಗೆ ಮಾತನಾಡುವ ಚಟುವಟಿಕೆ ನೀಡಬಹುದು. ಇಲ್ಲವೇ ಕೆಲವು ಭೂಗೋಳಕ್ಕೆ ಸಂಬಂಧಿಸಿದ ಪದಬಂಧ ತುಂಬುವ ಅಥವಾ ರಚಿಸುವ ಕೌಶಲ ಕಲಿಸಬಹುದು. ಕೆಲವು ಚಿತ್ರಗಳನ್ನು ತೋರಿಸಿ ಅದಕ್ಕೆ ಪೂರಕ ಮಾಹಿತಿ ಸಂಗ್ರಹಿಸುವ ಚಟುವಟಿಕೆ ನೀಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.