ಮಕ್ಕಳ ಆ್ಯಪ್ ಎಂದೊಡನೆ ಅವು ಕೇವಲ ಅನಿಮೇಟೆಡ್ ಸರಣಿಗಳಿರುವ ಆ್ಯಪ್ ಆಗಿರಬೇಕೆ? ಪುಸ್ತಕಗಳಿರಬೇಕೆ? ಪಠ್ಯಗಳಿರಬೇಕೆ? ರೈಮ್ಸ್, ಕಥೆಗಳಿರಬೇಕೆ? ಕಲಿಕೆ ಇರಬೇಕೆ? ಮನರಂಜನೆ ಇರಬೇಕೆ? ಮನರಂಜನೆ ಮತ್ತು ಕಲಿಕೆ ಎರಡನ್ನೂ ಮೌಲ್ಯಗಳೊಂದಿಗೆ ನೀಡಬಹುದೆ? ಇಂಥವೇ ಪ್ರಶ್ನೆಗಳನ್ನಿರಿಸಿಕೊಂಡ ವೈಯಾಕಾಂ 18 ಮೀಡಿಯಾ ‘voot.kids’ ಆ್ಯಪ್ ರೂಪಿಸಿದೆ.

ಈಚೆಗೆ ಮುಂಬೈನಲ್ಲಿ Voot.kids ಸಮರ್ಪಿಸಿದ ನಂತರ ಮಕ್ಕಳ ಆ್ಯಪ್ ಸ್ವರೂಪದ ಬಗ್ಗೆ ಚರ್ಚಿಸಲಾಯಿತು.

ಇದು ಮಕ್ಕಳ ಆ್ಯಪ್ ಆಗಿದ್ದರೂ ನಿಯಂತ್ರಣ ಪೋಷಕರ ಕೈನಲ್ಲಿರಬೇಕು. ಅವರು ಎಷ್ಟು ಹೊತ್ತು ನೋಡುತ್ತಾರೆ, ಏನು ನೋಡುತ್ತಾರೆ ಎನ್ನುವುದು ಪೋಷಕರಿಗೆ ಗೊತ್ತಾಗಬೇಕು. ಎಷ್ಟು ಹೊತ್ತು ನೋಡಬೇಕು ಎನ್ನುವುದನ್ನೂ ಪೋಷಕರೇ ನಿರ್ಧರಿಸಲಿ ಎನ್ನುವಂತೆ ಆ್ಯಪ್ ಅನ್ನು ಅಭಿವೃದ್ಧಿ ಪಡಿಸಲಾಗಿದೆ. ಪೇರೆಂಟಲ್ ಕಂಟ್ರೋಲ್ ಇದರ ಮುಖ್ಯ ಅಂಶವಾಗಿದೆ.

ಡಿಜಿಟಲ್ ಡಿವೈಸ್‌ಗಳಿಗೆ ಅಂಟಿಕೊಂಡಿರುವ ಮಕ್ಕಳಲ್ಲಿ ಓದಿನ ಅಭಿರುಚಿ ಹೆಚ್ಚಿಸಲು ವಿಶ್ವದ ಅತ್ಯುತ್ತಮ ಪುಸ್ತಕಗಳ ಗ್ರಂಥಾಲಯವನ್ನೇ ಈ ಆ್ಯಪ್‌ನಲ್ಲಿ ಸಂಗ್ರಹಿಸಿದ್ದಾರೆ. ಕರಡಿ ಟೇಲ್ಸ್‌ನಿಂದ ಆರಂಭಿಸಿ, ವಿಶ್ವದ ಎಲ್ಲ ಭಾಗದ ಪುಸ್ತಕಗಳೂ ಈ ಸಂಗ್ರಹದಲ್ಲಿವೆ. ಓದುತ್ತ ಓದುತ್ತ ಪದಗಳು ಅರ್ಥವಾಗದಿದ್ದಲ್ಲಿ, ಅದಕ್ಕೆ ಅರ್ಥ ಹಾಗೂ ಹೇಗೆ ಉಚ್ಚರಿಸುವುದು ಮುಂತಾದ ವಿವರಗಳೂ ಲಭ್ಯ ಇವೆ. ಆಡಿಯೊ ಪುಸ್ತಕಗಳೂ ಲಭ್ಯ ಇವೆ. 13,000 ವಿಡಿಯೊಗಳ ಸಂಗ್ರಹವಿದೆ. ಕಲಿಕೆಗೆ ಅನುಕೂಲವಾಗುವಂತೆ ಆಡಾಡ್ತಾ ಕಲಿಯಲು ಒಂದಷ್ಟು ಪ್ರಶ್ನೆನಿಧಿಯನ್ನು ಸಂಗ್ರಹಿಸಿದ್ದು, ರಸಪ್ರಶ್ನೆಯಂಥ ಕಾರ್ಯಕ್ರಮವನ್ನೂ ಯೋಜಿಸಿದೆ. ಪಠ್ಯಕ್ರಮದ ವಿಷಯಗಳೆಲ್ಲವನ್ನೂ ಆಡುತ್ತಲೇ ಕಲಿಯಬಹುದಾಗಿದೆ. 3–8 ವರ್ಷ ವಯೋಮಾನದ ಮಕ್ಕಳಿಗಾಗಿಯೇ ಈ ಆ್ಯಪ್ ವಿನ್ಯಾಸಗೊಳಿಸಿದೆ. ಆದರೆ ಉಳಿದೆಲ್ಲ ವಯಸ್ಸಿನವರಿಗೂ ಇಷ್ಟವಾಗುವ ಕಂಟೆಂಟ್ ಇಲ್ಲಿದೆ, ಕಲಿಕೆ ಇಲ್ಲಿದೆಯೆನ್ನುವುದೇ ಇದರ ಹೆಗ್ಗಳಿಕೆಯಾಗಿದೆ.

ಒಟ್ಟಿನಲ್ಲಿ ಇಡಿಯ ಆ್ಯಪ್ ನೋಡು, ಓದು, ಕೇಳು ಹಾಗೂ ಕಲಿ ಎಂಬ ಆಶಯವನ್ನೇ ಹೊತ್ತಿದೆ. ಮೊದಲ ಒಂದು ತಿಂಗಳು ಉಚಿತವಾಗಿ ನೋಡಲು ಅವಕಾಶವಿದೆ. ನಂತರ ವಾರ್ಷಿಕ ಚಂದಾದಾರರಾಗಬಹುದು.

ವೂಟ್‌ಕಿಡ್ಸ್ ವಿಶೇಷಗಳು

150ಕ್ಕೂ ಹೆಚ್ಚಿನಆಡಿಯೊ ಕಥೆಗಳು

5000 ಗಂಟೆಗೂ ಹೆಚ್ಚು ಅವಧಿಯ ಜನಪ್ರಿಯ ಕಾರ್ಯಕ್ರಮಗಳು

500ಕ್ಕೂ ಹೆಚ್ಚು ವಿಶ್ವದೆಲ್ಲೆಡೆಯ ಬೆಸ್ಟ್ ಸೆಲ್ಲಿಂಗ್ ಪುಸ್ತಕಗಳು

150ಕ್ಕೂ ಹೆಚ್ಚು ವಿಷಯಾಧಾರಿತ ರಸಪ್ರಶ್ನೆ

ಹೆಚ್ಚಿನ ಮಾಹಿತಿಗೆ:https://www.vootkids.com/

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.