1. ನಾನು ಶಿವಮೊಗ್ಗ ಮಾನಸಗಂಗೋತ್ರಿಯಲ್ಲಿ ಎಂ.ಎಸ್ಸಿ. ಬಯೋಕೆಮಿಸ್ಟ್ರಿ ಓದುತ್ತಿದ್ದೇನೆ. ಆದರೆ ನನಗೆ ಆ ವಿಷಯದಲ್ಲಿನ ಸ್ಕೋಪ್ ಬಗ್ಗೆ ತಿಳಿದಿಲ್ಲ. ಈ ಕೋರ್ಸ್ನ ಸ್ಕೋಪ್ ಮತ್ತು ಉದ್ಯೋಗಾವಕಾಶದ ಬಗ್ಗೆ ತಿಳಿಸಿರಿ.
ಓಂ ಪ್ರಕಾಶ್, ಊರು ಬೇಡ
ನಮ್ಮ ನಿತ್ಯಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ಬಯೋಕೆಮಿಸ್ಟ್ರಿಯ ಉಪಯೋಗವಿದೆ. ಔಷಧಗಳು, ಕೃಷಿ, ನಿತ್ಯೂಪಯೋಗಿ ವಸ್ತುಗಳು – ಹೀಗೆ ಇನ್ನೂ ಅನೇಕ ಕ್ಷೇತ್ರದಲ್ಲಿ ಬಯೋಕೆಮಿಸ್ಟ್ರಿಯ ಉಪಯೋಗವಿದೆ.
ಬಯೋಕೆಮಿಸ್ಟ್ರಿ ಕೋರ್ಸ್ಗೆ ಸೇರಬೇಕಾದರೆ, ಪಿ.ಸಿ.ಎಂ.ಬಿ. ಕಾಂಬಿನೇಷನ್ ತೆಗೆದುಕೊಂಡಿರಬೇಕು. ದ್ವಿತೀಯ ಪಿಯುಸಿ ನಂತರ ಡಿಗ್ರಿ, ಸ್ನಾತಕೋತ್ತರ, ಎಂ.ಫಿಲ್., ಪಿಎಚ್.ಡಿ. ಪದವಿಗಳನ್ನು ಭಾರತದಲ್ಲೂ ಮತ್ತು ಹೊರದೇಶದಲ್ಲೂ ಪಡೆಯಬಹುದು. ನಿಮ್ಮಲ್ಲಿ ಕುತೂಹಲ, ಸಂಶೋಧನಾ ಮನೋಭಾವ, ತಾಳ್ಮೆಗಳು ಇದ್ದರೆ ಯಶಸ್ಸು ಖಂಡಿತ.
ನೀವು ಎಂ.ಎಸ್ಸಿ. ಓದುವಾಗ ಈ ಪ್ರಶ್ನೆ ಕೇಳಿದ್ದೀರಿ. ಸ್ನಾತಕೋತ್ತರ ಪದವಿಯನ್ನು ಸೇರುವ ಮುಂಚೆಯೇ ಯಾವ ಕ್ಷೇತ್ರದಲ್ಲಿ ವ್ಯಾಸಂಗ ಮಾಡಬೇಕು ಅಂತ ನಿರ್ಧರಿಸಿದ್ದರೆ ಚೆನ್ನಾಗಿತ್ತು.
ಬಯೋಕೆಮಿಸ್ಟ್ರಿ ಸ್ಪೆಷಲೈಜೇಷನ್ ಅನ್ನು ಮಾಡಬಹುದಾದ ಕ್ಷೇತ್ರಗಳು:
1. ಮಾಲಿಕ್ಯುಲರ್ ಬಯಾಲಜಿ (Molecular Biology)
2. ಜನೆಟಿಕ್ಸ್ (Genetics)
3. ಏನರ್ಜಿ ಮತ್ತು ಮೆಟಬಾಲಿಸಂ (Energy and Metabolism)
4. ಬಯೋ ಇನ್ರ್ಫಾಮ್ಯಾಟಿಕ್ಸ್ (Bioinformatics)
5. ಸೆಲ್ ಬಯಾಲಜಿ ಮತ್ತು ಸಿಗ್ನಲಿಂಗ್ (Cell Biology and signaling)
6. ಡೆವಲಪ್ಮೆಂಟ್ ಮತ್ತು ಡಿಸೀಸ್ (Development and Disease)
7. ಫ್ಲಾಂಟ್ ಬಯಾಲಜಿ (Plant Biology)
ಇನ್ನೂ ಅನೇಕ......
ಉದ್ಯೋಗಾವಕಾಶಗಳು

1. ಪಬ್ಲಿಕ್ ಮತ್ತುಪ್ರೈವೇಟ್ ಕಂಪನಿಗಳು

2. ಮೆಡಿಕಲ್ ಇನ್ಸ್ಟ್ರುಮೆಂಟ್ ಕಂಪನಿಗಳು

3. ಫುಡ್ ಅಂಡ್ ಡ್ರಿಂಕ್ಸ್

4. ಸಂಶೋಧನೆ

5. ಲ್ಯಾಬೋರೇಟರಿಗಳು

6. ಸೇಲ್ಸ್ ಮತ್ತು ಮಾರ್ಕೆಟಿಂಗ್ ಕಂಪನಿಗಳು

7. ಕೆಮಿಕಲ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಗಳು

8. ಹೆಲ್ತ್ ಅಂಡ್ ಬ್ಯೂಟಿಕೇರ್

9. ಬಯೋಕೆಮಿಸ್ಟ್

10. ಔಷಧ ಕಂಪನಿಗಳು

11. ಪಬ್ಲಿಕ್ ಹೆಲ್ತ್ ಸೆಂಟರ್ಗಳು

12. ಶೈಕ್ಷಣಿಕ ಸಂಸ್ಥೆಗಳು

13. ಎನ್ವಿರಾನ್ಮೆಂಟಲ್ ಪಲ್ಯೂಷನ್ ಕಂಟ್ರೋಲ್

14. ಆಸ್ಪತ್ರೆಗಳು

15. ವಿಧಿವಿಜ್ಞಾನ

ಇನ್ನೂ ಅನೇಕ......

2. ನಾನು ಬಿಎಸ್ಸಿ ಓದುತ್ತಿರುವೆ. ಮುಂದೆ ಎಂ.ಸಿ.ಎ. ಅಥವಾ ಎಂ.ಎಸ್.ಸಿ. ಯಾವುದು ಮಾಡಬೇಕು ಅನ್ನುವ ಗೊಂದಲದಲ್ಲಿದ್ದೇನೆ. ಒಳ್ಳೆಯ ಉದ್ಯೋಗಕ್ಕೆ ಯಾವುದು ಉತ್ತಮ? ಎಂ.ಸಿ.ಎ. ಮಾಡಲು ಅರ್ಹತೆಗಳೇನು? ಹಾಗೂ ನಾನು ಬೇರ ರಾಜ್ಯದಲ್ಲಿ ಎಂ.ಸಿ.ಎ. ಮಾಡಬಹುದಾ?
ನಾಗರಾಜ್, ಚಿತ್ರದುರ್ಗ
ನೀವು ಬಿ.ಎಸ್ಸಿ.ಯಲ್ಲಿ ಯಾವ ಕಾಂಬಿನೇಷನ್ ತೆಗೆದುಕೊಂಡಿದ್ದೀರಿ ಎಂದು ಬರೆದಿಲ್ಲ. ನಿಮಗೆ ವಿಜ್ಞಾನದಲ್ಲಿ ಆಸಕ್ತಿ ಇದ್ದಲ್ಲಿ, ನೀವು ತೆಗೆದುಕೊಂಡಿರುವ ವಿಷಯದಲ್ಲಿ ಎಂ.ಎಸ್ಸಿ. ಮಾಡಬಹುದು. ಎಂ.ಎಸ್ಸಿ.ಯ ನಂತರ, ಕಾಲೇಜಿನಲ್ಲಿ ಲೆಕ್ಚರರ್ ಆಗಬೇಕಾದರೆ ಬೇರೆ ಬೇರೆ ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕು.

ಎಂ.ಸಿ.ಎ. ಕಂಪ್ಯೂಟರ್ ಕ್ಷೇತ್ರದ ಕೋರ್ಸ್. ಇದಕ್ಕೆ ಅರ್ಹತೆ 10 + 2ನಲ್ಲಿ ಲೆಕ್ಕ ಓದಿರಬೇಕು. ಆರ್ಟ್ಸ್, ಸೈನ್ಸ್ ಅಥವಾ ಕಾಮರ್ಸ್ ಪದವೀಧರರು ಎಂ.ಸಿ.ಎ. ಮಾಡಬಹುದು.

ಎಂ.ಸಿ.ಎ. ಮೂರು ವರ್ಷದ ಕೋರ್ಸ್ (6 ಸೆಮಿಸ್ಟರ್).

ಎಂ.ಸಿ.ಎ. ಸ್ಪೆಷಲೈಜೇಷನ್ ಅನ್ನು ಮಾಡಬಹುದಾದ ವಿಷಯಗಳು:

1. ಅಪ್ಲಿಕೇಷನ್ ಸಾಫ್ಟ್ವೇರ್

2. ಹಾರ್ಡ್ವೇರ್ ಟೆಕ್ನಾಲಜಿ

3. ಮ್ಯಾನೇಜ್ಮೆಂಟ್ ಇನ್ರ್ಫಾಮೇಷನ್ ಟೆಕ್ನಾಲಜಿ

4. ಇಂಟರ್ನೆಟ್

5. ಸಾಫ್ಟ್ವೇರ್ ಡೆವಲಪ್ಮೆಂಟ್

6. ಸಿಸ್ಟಂಸ್ ಮ್ಯಾನೇಜ್ಮೆಂಟ್

7. ಸಿಸ್ಟಂಸ್ ಡೆವಲಪ್ಮೆಂಟ್

8. ಸಿಸ್ಟಂಸ್ ಎಂಜಿನಿಯರಿಂಗ್

9. ಟ್ರಬಲ್ ಶೂಟಿಂಗ್

.... ಮುಂತಾದವು.

ನೀವು ಪದವಿಯನ್ನುಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಮಾಡಿದ್ದಲ್ಲಿ ಬೇರೆ ರಾಜ್ಯದಲ್ಲಿಯೂ ಎಂ.ಸಿ.ಎ. ಮಾಡಬಹುದು.

3. ನಾನು ಪದವಿ ಕೊನೆಯ ವರ್ಷದಲ್ಲಿ ಓದುತ್ತಿದ್ದು (ಸಿಬಿಝಡ್) ನನಗೆ ಮುಂದೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ದಯವಿಟ್ಟು ಮುಂದಿನ ಶಿಕ್ಷಣದ ಬಗ್ಗೆ ಮಾಹಿತಿ ನೀಡಿರಿ.
ಸವಿತಾ ಹಾರುಗೇರಿ

ಕೆಮಿಸ್ಟ್ರಿಯಲ್ಲಿ ಅಥವವಾ ಬಾಟನಿ ಅಥವಾ ಜುವಾಲಜಿಯಲ್ಲಿ ಸ್ನಾತಕೊತ್ತರ ಪದವಿಯನ್ನು ಮಾಡಬಹುದು. ಯಾವ ರೀತಿಯ ವೃತ್ತಿಯನ್ನು ಬಯಸುತ್ತೀರೋ ಅದಕ್ಕೆ ತಕ್ಕ ಕೋರ್ಸ್ ಅನ್ನು ಆರಿಸಿಕೊಳ್ಳಿ.

ಕೆಮಿಸ್ಟ್ರಿ ಎಂ.ಎಸ್ಸಿ. ಮಾಡಿದರೆ ಪ್ರೈವೇಟ್ ಇಂಡಸ್ಟ್ರಿಗಳಲ್ಲಿ, ಕಾರ್ಪೋರೇಟ್ ವಿಭಾಗಗಳಲ್ಲಿ ಉದ್ಯೋಗಾವಕಾಶಗಳಿವೆ. ಮೆಡಿಕಲ್ ರಿಸರ್ಚ್ ಲ್ಯಾಬೊರೇಟರಿಗಳು, ಟೆಕ್ನಿಕಲ್ ಜರ್ನಲ್ಸ್, ಎಂಜಿನಿಯರಿಂಗ್ ಫರ್ಮುಗಳು, ಪೆಟ್ರೋಲಿಯಂ ಕಂಪನಿಗಳು, ಫಾರ್ಮಾ ಕಂಪನಿಗಳು – ಈ ರೀತಿಯ ಇನ್ನೂ ಅನೇಕ ಸಂಸ್ಥೆಗಳಲ್ಲಿ ಕೆಲಸ ಮಾಡಬಹುದು. ಬಾಟನಿ ಎಂ.ಎಸ್ಸಿ. ಮಾಡಿದರೆ, ಹೆಸರಾಂತ ಕಂಪನಿಗಳಲ್ಲಿ ಪ್ಲಾಂಟ್ ಎಕ್ಸ್ಪ್ಲೋರರ್ (Plant Explorer), ಕನ್ಸರ್ವೇಷನಿಸ್ಟ್, ಇಕಾಲಜಿಸ್ಟ್, ಎನ್ವಿರಾನ್ಮೆಂಟಲ್ ಕನ್ಸಲ್ಟೆಂಟ್, ಹಾರ್ಟಿಕಲ್ಚರಲಿಸ್ಟ್, ಪ್ಲಾಂಟ್ ಬಯೋಕೆಮಿಸ್ಟ್ – ಈ ರೀತಿಯ ಅನೇಕ ಕ್ಷೇತ್ರದಲ್ಲಿ ಉದ್ಯೋಗಾವಕಾಶವಿದೆ.

ನೀವು ಜುವಾಲಜಿ ಎಂ.ಎಸ್ಸಿ. ಮಾಡಿದರೆ, ಜೂ (ZOO), ವೈಲ್ಡ್ಲೈಫ್ ಸರ್ವೀಸ್, ರಿಸರ್ಚ್ ಮತ್ತು ಡಾಕ್ಯುಮೆಂಟೇಷನ್ಸ್ – ನ್ಯಾಷನಲ್ ಜಿಯೋಗ್ರಾಫಿಕ್, ಅನಿಮಲ್ ಪ್ಲಾನೆಟ್, ಡಿಸ್ಕವರಿ ಚಾನೆಲ್ಗಳಿಗೆ ನ್ಯಾಷನಲ್ ಪಾರ್ಕ್ ಅಕ್ವೇರಿಯಂ – ಈ ರೀತಿ ಅನೇಕ ಕ್ಷೇತ್ರದಲ್ಲಿ ಉದ್ಯೋಗಾವಕಾಶವಿದೆ.

ಮುಂದೆ ಇಂಡಿಯನ್ ಫಾರೆಸ್ಟ್ ಸರ್ವೀಸ್ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು.

ಬಿ.ಎಸ್ಸಿಯ ನಂತರ, ಸಿವಿಲ್ ಸರ್ವೀಸ್ ಪರೀಕ್ಷೆಗಳು, ಎಂ.ಬಿ.ಎ., ಇವೆಂಟ್ ಮ್ಯಾನೇಜ್ಮೆಂಟ್, ಬೋಧನೆ – ಇನ್ನೂ ಅನೇಕ ಉದ್ಯೋಗಾವಕಾಶಗಳಿವೆ.

ಸರಿಯಾಗಿ ಯೋಚಿಸಿ ಮುಂದುವರೆಯಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.