ಕೋಲ್ಕತ್ತ/ಫರೂಖಾಬಾದ್: (ಪಿಟಿಐ): ಇನ್ನೂ 194 ಕ್ಷೇತ್ರಗಳಿಗೆ ಚುನಾವಣೆ ಬಾಕಿ ಇರುವಂತೆಯೇ ಕಾಂಗ್ರೆಸ್ ಪಕ್ಷ ಶನಿವಾರ ತೃತೀಯ ರಂಗಕ್ಕೆ ಬೆಂಬಲ ನೀಡುವ ಸಾಧ್ಯತೆಯನ್ನು ತೇಲಿಬಿಟ್ಟಿದೆ.

ಬಿಜೆಪಿಯ ನರೇಂದ್ರ ಮೋದಿ ಅಧಿಕಾರಕ್ಕೆ ಬರುವುದನ್ನು ಶತಾಯಗತಾಯ ತಡೆಯಲು ಜಾತ್ಯತೀತ ನಿಲುವಿನ ಪಕ್ಷಗಳ ಜತೆ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುವ ಕುರಿತು ಅದು ಪರಿಶೀಲಿಸುತ್ತಿದೆ.

ಕೋಲ್ಕತ್ತದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ, ಚುನಾವಣೆ ನಂತರ ಅನಿವಾರ್ಯವಾದಲ್ಲಿ ಪಕ್ಷದ ಜಾತ್ಯತೀತ ಚೌಕಟ್ಟನ್ನು ಗಮನದಲ್ಲಿಟ್ಟುಕೊಂಡು ಇತರ ಪಕ್ಷಗಳ ಜತೆ ಮೈತ್ರಿಗೆ ಮುಂದಾಗುವುದಾಗಿ ತಿಳಿಸಿದರು.

‘ಕಾಂಗ್ರೆಸ್ ಪಕ್ಷ ಯಾವಾಗಲೂ ಗೆಲ್ಲಲೆಂದೇ ಹೋರಾಡುತ್ತದೆ, ಸ್ವಂತ ಬಲದ ಮೇಲೆ ಶ್ರಮಿಸುತ್ತದೆ. ಆದರೆ, ಚುನಾವಣೆಯ ನಂತರ ಸಂಖ್ಯೆಗಳೇ ಮುಖ್ಯವಾಗುತ್ತವೆ’ ಎಂದೂ ಸಿಂಘ್ವಿ ಹೇಳಿದರು.

ಚುನಾವಣಾ ಫಲಿತಾಂಶದ ನಂತರ ಅಗತ್ಯ ಬಿದ್ದರೆ ತೃತೀಯರಂಗಕ್ಕೆ ಕಾಂಗ್ರೆಸ್ ಬೆಂಬಲ ನೀಡಬೇಕು. ಇಲ್ಲವೇ ಸರ್ಕಾರ ರಚಿಸಲು ಅದರಿಂದ ಬೆಂಬಲ ಪಡೆಯಬೇಕು ಎಂದು ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.

‘ದೇವರ ಅಲೆಯೇ (ರಾಮಮಂದಿರ ನಿರ್ಮಾಣ ಆಂದೋಲನ) ಕಾಂಗ್ರೆಸ್ ಪಕ್ಷವನ್ನು ತಡೆಯಲು ಆಗಲಿಲ್ಲ ಎಂದ ಮೇಲೆ ಮೋದಿ ಅಲೆ ಏನು ಮಾಡೀತು?’ ಎಂದು ಪ್ರಶ್ನಿಸಿದರು.

‘ನರೇಂದ್ರ ಮೋದಿ ಅವರು ಬಿಜೆಪಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತಾರೆ ನೋಡುತ್ತಿರಿ’ ಎಂದರು.

ಪೂಜೆ, ದರ್ಶನ ಏಕಿಲ್ಲ?
ವಾರಾಣಸಿಯಲ್ಲಿ ಸ್ಪರ್ಧಿಸಲು ಗಂಗಾ ಮಾತೆಯೇ ಕರೆ ನೀಡಿದ್ದಳು ಎಂದು ಮೋದಿ ಹೇಳಿಕೊಂಡಿದ್ದಾರೆ. ಹಾಗಿದ್ದರೆ ನಾಮಪತ್ರ ಸಲ್ಲಿಸುವಾಗ ಅವರು ಏಕೆ ಗಂಗೆಯ ದರ್ಶನ ಪಡೆಯಲಿಲ್ಲ, ಪೂಜೆ ಸಲ್ಲಿಸಲಿಲ್ಲ?
–ಸಚಿವ ಸಲ್ಮಾನ್ ಖುರ್ಷಿದ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.