ನವದೆಹಲಿ: ಬಿಜೆಪಿ ತ್ಯಜಿಸಿ ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರಿರುವ ಕೀರ್ತಿ ಆಜಾದ್ ಅವರನ್ನು ಜಾರ್ಖಂಡ್ನ ಧನ್ಬಾದ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವುದಾಗಿ ಕಾಂಗ್ರೆಸ್ ಘೋಷಿಸಿದೆ.

ಬಿಹಾರದ ದರ್ಬಾಂಗ್ ಲೋಕಸಭಾ ಕ್ಷೇತ್ರವನ್ನು ಮೂರು ಬಾರಿ ಪ್ರತಿನಿಧಿಸಿದ್ದ ಕೀರ್ತಿ ಆಜಾದ್, ಈ ಬಾರಿಯೂ ಅದೇ ಕ್ಷೇತ್ರದಿಂದ ಟಿಕೆಟ್ ಬಯಸಿದ್ದರು. ಆದರೆ ಸೀಟು ಹಂಚಿಕೆಯಲ್ಲಿ ಈ ಕ್ಷೇತ್ರ ಆರ್ಜೆಡಿ ಪಾಲಾಗಿತ್ತು. ಇಲ್ಲಿಂದ ಅಬ್ದುಲ್ ಬರಿ ಸಿದ್ದಿಕಿ ಅವರಿಗೆ ಆರ್ಜೆಡಿ ಟಿಕೆಟ್ ನೀಡಿದೆ.

ಇದಾದ ಬಳಿಕ ವಾಲ್ಮೀಕಿ ನಗರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಕಾಂಗ್ರೆಸ್ ಮುಖಂಡರು ಆಜಾದ್ಗೆ ಸಲಹೆ ನೀಡಿದ್ದರೂ ಅದಕ್ಕೆ ಅವರು ಒಪ್ಪಿರಲಿಲ್ಲ. ಈಗ ಧನ್ಬಾದ್ನಿಂದ ಅವರನ್ನು ಕಣಕ್ಕಿಳಿಸಲಾಗಿದ್ದು ಅವರು ಬಿಜೆಪಿಯ ಹಾಲಿ ಸಂಸದ ಪಶುಪತಿನಾಥ ಸಿಂಗ್ ಅವರನ್ನು ಎದುರಿಸಲಿದ್ದಾರೆ. ಪಶುಪತಿನಾಥ್ ಅವರು 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಜಯ್ಕುಮಾರ್ ದುಬೆ ಅವರನ್ನು ಸುಮಾರು ಮೂರು ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.