ಪಟ್ನಾ: ಬಿಹಾರದಲ್ಲಿ 'ಮಹಾಘಟಬಂಧನ್' ಮೈತ್ರಿಕೂಟದ ಭಾಗವಾಗಿರುವ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಸ್ಪರ್ಧಿಸಲಿರುವ 23 ಕ್ಷೇತ್ರಗಳ ಪೈಕಿ 22ರಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಇನ್ನೊಂದು ಕ್ಷೇತ್ರದ ಅಭ್ಯರ್ಥಿಯ ಘೋಷಣೆಯಷ್ಟೇ ಬಾಕಿಯಿದೆ.

ಆರ್‌ಜೆಡಿ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ಅವರ ಪುತ್ರಿಯರಾದ ರೋಹಿಣಿ ಆಚಾರ್ಯ ಹಾಗೂ ಮಿಸಾ ಭಾರ್ತಿ ಕಣದಲ್ಲಿದ್ದಾರೆ.

ಆರ್‌ಜೆಡಿ ರಾಜ್ಯಾಧ್ಯಕ್ಷ ಜಗದಾನಂದ್ ಸಿಂಗ್ ಅವರು ಮಂಗಳವಾರ ಸಂಜೆ ಪಟ್ಟಿ ಬಿಡುಗಡೆ ಮಾಡಿದರು. ಲಾಲೂ ಅನೇಕ ಬಾರಿ ಸ್ಪರ್ಧಿಸಿ ಗೆದ್ದಿರುವ ಸರನ್ ಕ್ಷೇತ್ರದಿಂದ ಪುತ್ರಿ ರೋಹಿಣಿ ಆಚಾರ್ಯ ಕಣಕ್ಕಿಳಿದಿದ್ದಾರೆ.

2013ರಲ್ಲಿ ಮೇವು ಹಗರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಲಾಲೂ, ಅನರ್ಹಗೊಳ್ಳುವವರೆಗೂ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ಲಾಲೂ ಅವರ ಹಿರಿಯ ಪುತ್ರಿ ಭಾರ್ತಿ ಅವರು ಪಾಟಲಿಪುತ್ರ ಲೋಕಸಭಾ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಬಿಹಾರದಲ್ಲಿ 40 ಲೋಕಸಭಾ ಕ್ಷೇತ್ರಗಳ ಪೈಕಿ ಆರ್‌ಜೆಡಿ 26, ಕಾಂಗ್ರೆಸ್ ಒಂಬತು ಮತ್ತು ಎಡಪಕ್ಷಗಳು ಐದು ಸ್ಥಾನಗಳನ್ನು ಪಡೆದಿವೆ. ಆರ್‌ಜೆಡಿ ಪಕ್ಷವು ತನ್ನ ಕೋಟದಿಂದ ಮೂರು ಸೀಟುಗಳನ್ನು ಬಿಹಾರದ ಮಾಜಿ ಸಚಿವ ಮುಕೇಶ್ ಸಹಾನಿ ಅವರ ವಿಕಾಸಶೀಲ ಇನ್ಸಾನ್ ಪಕ್ಷಕ್ಕೆ (ವಿಐಪಿ) ಬಿಟ್ಟುಕೊಟ್ಟಿದೆ.

ಬಿಹಾರದಲ್ಲಿ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಫಲಿತಾಂಶ ಜೂನ್ 4ರಂದು ಪ್ರಕಟಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.