ಹೈದರಾಬಾದ್: ಹೈದರಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ. ಮಾಧವಿ ಲತಾ ಅವರು ನಾಮಪತ್ರದೊಂದಿಗೆ ತಮ್ಮ ಆಸ್ತಿ ಘೋಷಣಾ ಪತ್ರ ಸಲ್ಲಿಸಿದ್ದು, ಒಟ್ಟು ₹221 ಕೋಟಿ ಮೌಲ್ಯ ಸ್ಥಿರ ಹಾಗೂ ಚರಾಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.

ಈ ಕ್ಷೇತ್ರಕ್ಕೆ ಮೇ 13ರಂದು ಚುನಾವಣೆ ನಡೆಯಲಿದೆ. ಮಾಧವಿ ಅವರ ಕುಟುಂಬವು ವಿರಿಂಚಿ ಕಂಪನಿಯಲ್ಲಿ ₹94.44 ಕೋಟಿ ಮೌಲ್ಯದ 2.94 ಕೋಟಿ ಷೇರುಗಳನ್ನು ಹೊಂದಿದೆ. ಲತಾ ಅವರ ಪತಿ ವಿಶ್ವನಾಥ ಕಂಪಲ್ಲೆ ಅವರು ಮದ್ರಾಸ್ ಐಐಟಿಯಿಂದ ಪದವಿ ಪಡೆದಿದ್ದಾರೆ. ಫಿನ್‌ಟೆಕ್ ಅಂಡ್ ಹೆಲ್ತ್‌ಕೇರ್ ಕಂಪನಿ ಸಂಸ್ಥಾಪಕರೂ ಹೌದು.

ಚುನಾವಣಾ ಆಯೋಗಕ್ಕೆ ಮಾಧವಿ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ, ಅವರ ಬಳಿ ₹165.46ಕೋಟಿಯಷ್ಟು ಚರಾಸ್ತಿ ಹಾಗೂ ₹55.92 ಕೋಟಿಯಷ್ಟು ಸ್ಥಿರಾಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಹೊಂದಿದ್ದಾರೆ.

ಹೈದರಾಬಾದ್ ಕ್ಷೇತ್ರದಿಂದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಮತ್ತು ಕಾಂಗ್ರೆಸ್‌ನಿಂದ ಮೊಹಮ್ಮದ್ ವಲಿಯುಲ್ಲಾ ಸಮೀರ್ ಅವರು ಸ್ಪರ್ಧಿಸಿದ್ದಾರೆ. ಒವೈಸಿ ಅವರು ₹23.87 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಜತೆಗೆ ₹7 ಕೋಟಿ ಸಾಲ ಪಡೆದಿದ್ದಾರೆ. ಅವರ ಬಳಿ ಪಿಸ್ತೂಲ್ ಹಾಗೂ ರೈಫಲ್ ಇದೆ ಎಂದು ಪ್ರಮಾಣಪತ್ರದಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.