ನವದೆಹಲಿ: ಕಾಂಗ್ರೆಸ್ಗೆ ಆದಾಯ ತೆರಿಗೆ ಇಲಾಖೆ (ಐಟಿ) ನೋಟಿಸ್ ನೀಡಿರುವುದಕ್ಕೆ ಸಂಬಂಧಿಸಿ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ‘ಇದು ಪಕ್ಷಪಾತದಿಂದ ಕೂಡಿರುವ ಕ್ರಮವಾಗಿದ್ದು, 140 ಕೋಟಿ ಭಾರತೀಯರ ಧ್ವನಿ ದುರ್ಬಲಗೊಳಿಸಲು ಹೀಗೆ ಮಾಡಲಾಗಿದೆ’ ಎಂದು ಅವರು ಹೇಳಿದ್ದಾರೆ.

ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ಬಿಜೆಪಿಯ ಪ್ರಜಾಪ್ರಭುತ್ವ ವಿರೋಧಿ ಯೋಜನೆಗಳು ಯಶಸ್ವಿಯಾಗಲು ಜನರು ಅವಕಾಶ ಕೊಡುವುದಿಲ್ಲ ಎಂದಿದ್ದಾರೆ.

‘₹3,567 ಕೋಟಿ ಮೊತ್ತದ ತೆರಿಗೆ ನೀಡಲು ಕಾಂಗ್ರೆಸ್ಗೆ ಏಕೆ ಹೇಳಲಾಗಿದೆ. ಪಕ್ಷದ ವಿರುದ್ಧ ಇರುವ ಆರೋಪವಾದರೂ ಏನು? 1994– 95ನೇ ಸಾಲಿನಲ್ಲಿ, ಆನಂತರ 2014–15 ಮತ್ತು 2016–17ರಲ್ಲಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ನಗದು ರೂಪದಲ್ಲಿ ಹಣವನ್ನು ಪಕ್ಷದ ಖಾತೆಯಲ್ಲಿರಿಸಿದ್ದರು. ಆ ಕುರಿತ ಮಾಹಿತಿಯನ್ನು ಐಟಿ ಜೊತೆ ಈಗಾಗಲೇ ಹಂಚಿಕೊಳ್ಳಲಾಗಿದೆ. ಆದಾಗ್ಯೂ, ಕಾಂಗ್ರೆಸ್ ಪಕ್ಷವು ಮಾಹಿತಿ ಒದಗಿಸಿಲ್ಲ ಎಂದು ಕೇಂದ್ರ ಸರ್ಕಾರವು ಆರೋಪ ಹೊರಿಸುತ್ತಿದೆ’ ಎಂದು ಅವರು ಪೋಸ್ಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.