ಮಧ್ಯಾಹ್ನ 3 ಗಂಟೆ ಹೊತ್ತಿಗೆ ಪಶ್ಚಿಮ ಬಂಗಾಳದಲ್ಲಿ ಶೇ. 49.78ರಷ್ಟು ಮತದಾನ
11:0119 Apr 2024
ಮಧ್ಯಾಹ್ನ 3 ಗಂಟೆ ಹೊತ್ತಿಗೆ ತ್ರಿಪುರಾದಲ್ಲಿ ಶೇ 68.35ರಷ್ಟು ಮತದಾನ
Tripura records 68.35% voter turnout till 3pm, the highest amongst the State/UTs voting in the first phase of Lok Sabha polls today pic.twitter.com/b4KfouvG5v
ಈಶಾ ಪೌಂಡೇಶನ್‌ನ ಸದ್ಗುರು ಜಗ್ಗಿ ವಾಸುದೇವ್, ನಟರಾದ ಕಮಲ ಹಾಸನ್, ಅಜಿತ್ ಕುಮಾರ್, ಕೇಂದ್ರ ಸಚಿವ ಗಡ್ಕರಿ, ಸಚಿವ ರಾಜವರ್ಧನ ರಾಥೋಡ್, ಉತ್ತರಾಖಂಡ್ ಸಿಎಂ ಪುಷ್ಕರ್ ಸಿಂಗ್, ಮಣಿಪುರ ಸಚಿವ ಬಿರೇನ್ ಸಿಂಗ್ ಸೇರಿದಂತೆ ಹಲವರು ಮತದಾನ ಮಾಡಿದರು.
ದೇಶದ 102 ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆಯುತ್ತಿದೆ. ಈ ಕ್ಷೇತ್ರಗಳಲ್ಲಿ 1,600ಕ್ಕೂ ಹೆಚ್ಚು ಅಭ್ಯರ್ಥಿಗಳು ಜನಾದೇಶ ಬಯಸಿದ್ದಾರೆ. ಮೊದಲ ಹಂತದ ಮತದಾನ ಪ್ರಕ್ರಿಯೆಯಲ್ಲಿ ಮತ ಚಲಾಯಿಸಲು 16.63 ಕೋಟಿಗೂ ಹೆಚ್ಚು ಮಂದಿ ಅರ್ಹತೆ ಪಡೆದಿದ್ದಾರೆ. ಈ ಕ್ಷೇತ್ರಗಳಿಂದ ಅದೃಷ್ಟ ಪರೀಕ್ಷೆಗೆ ಇಳಿದವರಲ್ಲಿ ಎಂಟು ಮಂದಿ ಕೇಂದ್ರ ಸಚಿವರು, ಇಬ್ಬರು ಮಾಜಿ ಮುಖ್ಯಮಂತ್ರಿಗಳು ಹಾಗೂ ಮಾಜಿ ರಾಜ್ಯಪಾಲೆ ಕೂಡ ಇದ್ದಾರೆ. ಮತದಾನವು ಬೆಳಿಗ್ಗೆ 7 ಗಂಟೆಗೆ ಶುರುವಾಗಲಿದ್ದು, ಸಂಜೆ 6ಕ್ಕೆ ಮುಕ್ತಾಯ ವಾಗಲಿದೆ. ಮತದಾನದ ಕ್ಷಣ ಕ್ಷಣದ ಅಪ್ಡೇಟ್ ಇಲ್ಲಿದೆ...