ಬಾಲೇಶ್ವರ: 'ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ನೆಲ್ಸನ್ ಮಂಡೇಲಾ ಮತ್ತು ಆಲ್ಬರ್ಟ್ ಐನ್‌ಸ್ಟೀನ್ ಅವರಂತ ಹೆಸರಾಂತ ವ್ಯಕ್ತಿಗಳು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರಿಂದ ಪ್ರೇರಣೆ ಪಡೆದಿದ್ದಾರೆ' ಎಂದು ರಾಹುಲ್ ಗಾಂಧಿ ಗುರುವಾರ ಹೇಳಿದ್ದಾರೆ.

ಒಡಿಶಾದ ಬಾಲೇಶ್ವರ ಜಿಲ್ಲೆಯಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ರಾಹುಲ್, 'ಗಾಂಧಿ ಪರಂಪರೆಯನ್ನು ಅರಿತುಕೊಳ್ಳುವಲ್ಲಿ ಬಿಜೆಪಿ ವಿಫಲವಾಗಿದೆ' ಎಂದು ದೂರಿದ್ದಾರೆ.

'ಗಾಂಧಿ' ಸಿನಿಮಾ ಬರುವವರೆಗೂ ಮಹಾತ್ಮ ಗಾಂಧಿ ಬಗ್ಗೆ ಜಗತ್ತಿಗೆ ಗೊತ್ತಿರಲಿಲ್ಲ ಎನ್ನುವ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ.

'ಆರ್‌ಎಸ್ಎಸ್ ಶಾಖೆಯಲ್ಲಿ ತರಬೇತಿ ಪಡೆದ ಜನರು ಗೋಡ್ಸೆಯ ಅನುಯಾಯಿಗಳಾಗುತ್ತಾರೆ. ಅವರಿಗೆ ಗಾಂಧೀಜಿ ಬಗ್ಗೆ ಏನೂ ಗೊತ್ತಿರುವುದಿಲ್ಲ. ಹಿಂದೂಸ್ತಾನದ ಇತಿಹಾಸ, ಸತ್ಯ ಹಾಗೂ ಅಹಿಂಸೆಯ ಬಗ್ಗೆ ಏನೂ ಗೊತ್ತಿರುವುದಿಲ್ಲ. ಹಾಗಿರುವಾಗ ಗಾಂಧೀಜಿ ಬಗ್ಗೆ ಏನೂ ಗೊತ್ತಿಲ್ಲ ಎಂಬ ಪ್ರಧಾನಿ ಹೇಳಿಕೆ ನಿರೀಕ್ಷಿತವಾಗಿತ್ತು' ಎಂದು ಹೇಳಿದ್ದಾರೆ.

'ಈ ಬಗ್ಗೆ ಹೆಚ್ಚು ಕಾಮೆಂಟ್ ಮಾಡುವ ಅಗತ್ಯವಿಲ್ಲ. ಅವರ (ಬಿಜೆಪಿ) ಜಗತ್ತು ಶಾಖೆ ಮಾತ್ರವಾಗಿದೆ' ಎಂದು ಹೇಳಿದ್ದಾರೆ.

'ಅನೇಕ ಸ್ವಾತಂತ್ರ್ಯ ಚಳುವಳಿ ಹಾಗೂ ಜಗತ್ತಿನ ವಿವಿಧ ಹೋರಾಟಗಳು ಗಾಂಧಿ ಅವರಿಂದ ಸ್ಪೂರ್ತಿ ಪಡೆದಿವೆ. ಭಾರತೀಯ ಮಕ್ಕಳು ಗಾಂಧೀಜಿ ಅವರಿಂದ ಪ್ರೇರಣೆ ಪಡೆದಿದ್ದಾರೆ' ಎಂದು ಅವರು ಹೇಳಿದ್ದಾರೆ.
.LS Polls | ದೇಶದ ಯೋಧರನ್ನು 'ಮಜ್ದೂರ್' ಮಾಡಿದ ಮೋದಿ: ರಾಹುಲ್ ಗಾಂಧಿ ಆರೋಪ.ಹೃದಯ ಮತ್ತು ರಕ್ತದಿಂದ ಸಂವಿಧಾನ ರಕ್ಷಣೆ: ರಾಹುಲ್ ಗಾಂಧಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.