ನವದೆಹಲಿ: ಲೋಕಸಭಾ ಚುನಾವಣೆಯ ನಾಲ್ಕನೇ ಹಂತದಲ್ಲಿ ಶೇ 67.25 ಮತದಾನ ನಡೆದಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಸೋಮವಾರ ನಡೆದ ನಾಲ್ಕನೇ ಹಂತದಲ್ಲಿ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 96 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಮೊದಲ ಮೂರು ಹಂತಗಳ ಮತದಾನ ಪ್ರಮಾಣಕ್ಕೆ ಹೋಲಿಸಿದರೆ ನಾಲ್ಕನೇ ಹಂತದಲ್ಲಿ ಮತದಾನ ಹೆಚ್ಚಿದೆ.

ಏಪ್ರಿಲ್ 19 ರಂದು ನಡೆದಿದ್ದ ಮೊದಲ ಹಂತದಲ್ಲಿ ಶೇ 66.14, ಏ.26 ರಂದು ನಡೆದಿದ್ದ ಎರಡನೇ ಹಂತದಲ್ಲಿ ಶೇ 66.71 ಹಾಗೂ ಮೇ 7 ರಂದು ನಡೆದಿದ್ದ ಮೂರನೇ ಹಂತದಲ್ಲಿ 65.68 ಶೇ ಮತದಾನ ಪ್ರಮಾಣ ದಾಖಲಾಗಿತ್ತು.

ಅಂಧ್ರಪ್ರದೇಶದಲ್ಲಿ ಶೇ 78 ಮತದಾನ

(ಅಮರಾವತಿ ವರದಿ): ಆಂಧ್ರಪ್ರದೇಶದಲ್ಲಿ ನಡೆದ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಶೇ 78 ಕ್ಕೂ ಅಧಿಕ ಮತದಾನ ದಾಖಲಾಗಿದೆ. ಆಂಧ್ರಪ್ರದೇಶ ವಿಧಾಸಭೆಯ 175 ಸ್ಥಾನಗಳು ಮತ್ತು ಲೋಕಸಭೆಯ 25 ಸ್ಥಾನಗಳಿಗೆ ಸೋಮವಾರ ಮತದಾನ ನಡೆದಿತ್ತು. 2019ರ ಚುನಾವಣೆಯಲ್ಲಿ ಇಲ್ಲಿ ಶೇ 79.83 ಮತದಾನ ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.