ಪಿಲಿಭಿತ್: ಬಿಜೆಪಿ ಸಂಸದ ವರುಣ್ ಗಾಂಧಿ ಅವರ ಬೆಂಬಲಿಗರು ಬುಧವಾರ ಲೋಕಸಭೆ ಚುನಾವಣೆಯ ನಾಲ್ಕು ನಾಮಪತ್ರಗಳನ್ನು ಪಡೆದಿದ್ದಾರೆ.

ವರುಣ್ ಅವರು ಪಿಲಿಭಿತ್‌ನಿಂದಲೇ ಮತ್ತೆ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ.

’ವರುಣ್ ಗಾಂಧಿ ಅವರ ಸೂಚನೆ ಮೇರೆಗೆ ಎರಡು ಹಿಂದಿ ಮತ್ತು ಎರಡು ಇಂಗ್ಲೀಷ್ ಸೇರಿ ಒಟ್ಟು ನಾಲ್ಕು ನಾಮಪತ್ರಗಳನ್ನು ಪಡೆಯಲಾಗಿದೆ. ಇದರಿಂದ ವರುಣ್ ಕ್ಷೇತ್ರ ಬದಲಿಸಲಿದ್ದಾರೆ ಎಂಬ ಊಹಾಪೋಹಗಳಿಗೆ ತೆರೆಬಿದ್ದಿದೆ. ವರುಣ್ ಗಾಂಧಿ ಅವರು ಪಿಲಿಭಿತ್‌ನ ಬಿಜೆಪಿ ಅಭ್ಯರ್ಥಿಯಾಗಿರಲಿದ್ದಾರೆ’ ಎಂದು ವರುಣ್ ಪರ ವಕ್ತಾರ ಎಂ.ಆರ್. ಮಲ್ಲಿಕ್ ತಿಳಿಸಿದ್ದಾರೆ.

ಎಪ್ರಿಲ್ 19ರಂದು ಪಿಲಿಭಿತ್ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದ್ದು, ಬಿಜೆಪಿ ಈವರೆಗೆ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ.

ಕಳೆದ ಕೆಲ ವರ್ಷಗಳಿಂದ ಸ್ವಪಕ್ಷದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ವರುಣ್ ಗಾಂಧಿ, ಇತ್ತೀಚೆಗೆ ಬಿಜೆಪಿ ನಾಯಕರೊಂದಿಗೆ ವೇದಿಕೆ ಹಂಚಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದರು.

ಪಿಲಿಭಿತ್ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯನ್ನು ಇನ್ನೂ ಘೋಷಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.