ನವದೆಹಲಿ: ಲೋಕಸಭೆ ಚುನಾವಣೆಯ ಎಲ್ಲ 543 ಕ್ಷೇತ್ರಗಳ ಫಲಿತಾಂಶ ಹೊರಬಿದ್ದಿದೆ. ಈ ಕುರಿತು ಚುನಾವಣಾ ಆಯೋಗ ಅಧಿಕೃತ ಘೋಷಣೆ ಮಾಡಿದೆ.

ನಿರೀಕ್ಷಿತ ಮಟ್ಟದ ಯಶ ಸಾಧಿಸದಿದ್ದರೂ ಭಾರತೀಯ ಜನತಾ ಪಕ್ಷ (ಬಿಜೆಪಿ) 240 ಸ್ಥಾನಗಳಲ್ಲಿ ಗೆಲುವಿನೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಕಳೆದ ಬಾರಿಗಿಂತಲೂ ಗಮನಾರ್ಹ ಸಾಧನೆ ಮಾಡಿರುವ ಕಾಂಗ್ರೆಸ್, 99 ಸ್ಥಾನಗಳೊಂದಿಗೆ ನಂತರದ ಸ್ಥಾನದಲ್ಲಿದೆ.

ಲೋಕಸಭೆಯ 542 ಸ್ಥಾನಗಳಿಗೆ ಜೂನ್ 4ರಂದು ದೇಶದಾದ್ಯಂತ ಮತ ಎಣಿಕೆ ನಡೆದಿತ್ತು. ಈ ಮೊದಲು ಬಿಜೆಪಿಯ ಸೂರತ್ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದರು.

ಇದರೊಂದಿಗೆ ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟ ಸರ್ಕಾರ ರಚನೆಗೆ ಸಿದ್ಧತೆ ನಡೆಸುತ್ತಿದೆ. ಅಲ್ಲದೆ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗುವುದು ಬಹುತೇಕ ಖಚಿತವೆನಿಸಿದೆ. ಆ ಮೂಲಕ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ದಾಖಲೆಯನ್ನು ಸರಿಗಟ್ಟಲಿದ್ದಾರೆ.

2019ರಲ್ಲಿ ಬಿಜೆಪಿ 303 ಮತ್ತು 2014ರಲ್ಲಿ 282 ಸ್ಥಾನಗಳಲ್ಲಿ ಗೆಲುವು ಗಳಿಸಿತ್ತು. ಎನ್ಡಿಎ ಮಿತ್ರಪಕ್ಷಗಳ ಪೈಕಿ ಆಂಧ್ರಪ್ರದೇಶದಲ್ಲಿ ಎನ್.ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ (ಟಿಡಿಪಿ) 16 ಮತ್ತು ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ಜೆಡಿಯು 12 ಸ್ಥಾನಗಳನ್ನು ಗೆದ್ದಿದ್ದು, ಕಿಂಗ್ ಮೇಕರ್ ಎನಿಸಿದ್ದಾರೆ.

2019ರಲ್ಲಿ 52 ಸ್ಥಾನಗಳಲ್ಲಿ ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 99 ಸ್ಥಾನಗಳನ್ನು ಗೆದ್ದು ಅಭೂತಪೂರ್ವ ಸಾಧನೆ ಮಾಡಿದೆ. 'ಇಂಡಿಯಾ' ಮೈತ್ರಿಕೂಟದ ಪೈಕಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ (ಎಸ್ಪಿ) 37 ಸ್ಥಾನಗಳಲ್ಲಿ, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) 29 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ.

ಲೋಕಸಭೆಗೆ ಏಪ್ರಿಲ್ 19ರಿಂದ ಜೂನ್ 1ರವರೆಗೆ ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆದಿತ್ತು.

ಲೋಕಸಭೆ ಚುನಾವಣೆ 2024ರಲ್ಲಿ ಪ್ರಮಖ ಪಕ್ಷಗಳು ಗಳಿಸಿದ ಸ್ಥಾನಗಳ ಪಟ್ಟಿ:

ಬಿಜೆಪಿ: 240

ಕಾಂಗ್ರೆಸ್: 99

ಸಮಾಜವಾದಿ ಪಕ್ಷ (ಎಸ್ಪಿ): 37

ಟಿಎಂಸಿ: 29

ಡಿಎಂಕೆ: 22

ತೆಲುಗು ದೇಶಂ: 16

ಜೆಡಿಯು: 12

ಶಿವಸೇನಾ (ಉದ್ಧವ್ ಬಾಳಾಸಾಹೇಬ್ ಠಾಕ್ರೆ): 9

ಎನ್ಸಿಪಿ (ಶರದ್ ಪವಾರ್): 8

ಶಿವಸೇನಾ (ಎಸ್ಎಚ್ಎಸ್): 7

ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್): 5

ವೈಎಸ್ಆರ್ಸಿಪಿ: 4

ಆರ್ಜೆಡಿ: 4

ಸಿಪಿಐ(ಎಂ): 4

ಐಯುಎಂಎಲ್: 3

ಎಎಪಿ: 3

ಜೆಎಂಎಂ: 3

ಪ್ರಮುಖ ಪಕ್ಷಗಳ ಮತ ಹಂಚಿಕೆ ಪ್ರಮಾಣ
.ಸಂಪಾದಕೀಯ | ಲೋಕಸಭೆ ಚುನಾವಣೆ ಫಲಿತಾಂಶ: ಪ್ರಜಾಪ್ರಭುತ್ವಕ್ಕೆ ಸಂದ ಗೆಲುವು.ಆಳ–ಅಗಲ: ಸಂಕಥನಗಳ ಒಡೆದುಹಾಕಿದ ಚುನಾವಣೆ.Lok Sabha Election Results: ‘ಉತ್ತರ’ದಲ್ಲಿ ಮತ್ತೆ ಅರಳಿದ ‘ಕಮಲ’.Lok Sabha Election Results: ಮತಗಟ್ಟೆ ಸಮೀಕ್ಷೆ ಅಂದಾಜು ಹುಸಿ.ಲೋಕಸಭೆ ಚುನಾವಣೆ ಫಲಿತಾಂಶ: ಗೆದ್ದ ಪ್ರಜಾತಂತ್ರ, ಮೈತ್ರಿಯೇ ಮಂತ್ರ.Lok Sabha Election Results 2024 | ಕುಗ್ಗಿದ ಬಿಜೆಪಿ: ಹಿಗ್ಗಿದ ಕಾಂಗ್ರೆಸ್.Lok Sabha Election Results: ಗಮನ ಸೆಳೆದ ಕ್ಷೇತ್ರಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.