ಶಿವಮೊಗ್ಗ: ರಾತ್ರಿ ಬಿಜೆಪಿ ಅಂತಿಮ ಪಟ್ಟಿ ಬಿಡುಗಡೆ ಆಗಿದ್ದು, ಶಿವಮೊಗ್ಗ ನಗರ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿ ಮಹಾನಗರಪಾಲಿಕೆ ಸದಸ್ಯ ಚನ್ನಬಸಪ್ಪ (ಚನ್ನಿ) ಹೆಸರು ಅಂತಿಮಗೊಂಡಿದೆ.

ಲಿಂಗಾಯತ ಸಮುದಾಯದ ಚನ್ನಬಸಪ್ಪ, ಶಾಸಕ ಕೆ.ಎಸ್.ಈಶ್ವರಪ್ಪ ಅವರ ಕಟ್ಟಾ ಬೆಂಬಲಿಗ ಹಾಗೂ ಮಾನಸಪುತ್ರ ಎಂದೇ ಪರಿಚಿತರು. ಹೀಗಾಗಿ ಟಿಕೆಟ್ ವಿಚಾರದಲ್ಲಿ ಕೆ.ಎಸ್.ಈಶ್ವರಪ್ಪ ಅವರ ಮಾತೇ ನಿರ್ಣಾಯಕವಾಗಿದೆ ಎಂಬ ಮಾತು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ.

ನಾಲ್ಕು ಬಾರಿ ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿರುವ ಚನ್ನಬಸಪ್ಪ, ಹಾಲಿ ಪಾಲಿಕೆ ಆಡಳಿತ ಪಕ್ಷದ ನಾಯಕ. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಗಿದ್ದ ಅವರು, ಶಿವಮೊಗ್ಗದ ಮಟ್ಟಿಗೆ ಬಿಜೆಪಿಯ ಹಿಂದುತ್ವದ ಆಶಯಗಳ ಅನುಷ್ಠಾನದ ಪಡೆಯಲ್ಲಿ ಪ್ರಮುಖ ಸೇನಾನಿಯೂ ಹೌದು. ಈಶ್ವರಪ್ಪ ಹಿಂದುತ್ವದ ಪರ ಮಾತಾಡಿದರೆ ಚನ್ನಬಸಪ್ಪ ಅದನ್ನು ಕಾರ್ಯರೂಪಕ್ಕೆ ತರುತ್ತಾರೆ ಎಂಬ ಮಾತು ಶಿವಮೊಗ್ಗದಲ್ಲಿ ಜನಜನಿತವಾಗಿದೆ.

ಆರ್ ಎಸ್ ಎಸ್ ಹಾಗೂ ಪಕ್ಷದ ಸಂಘಟನೆಯಲ್ಲಿ ಸಕ್ರಿಯರಾಗಿದ್ದು, ಟಿಕೆಟ್ ಪಡೆಯಲು ಅದು ಕೂಡ ನೆರವಾಗಿದೆ ಎನ್ನಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.