ಬೆಂಗಳೂರು: ಜಯನಗರ, ಬಿಟಿಎಂ ಲೇಔಟ್, ಗೋವಿಂದರಾಜನಗರ ಹಾಗೂ ವಿಜಯನಗರಗಳಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಹಾಗೂ ಬೆಂಬಲಿಗರು ಬುಧವಾರ ಬೈಕ್ ರ‍್ಯಾಲಿ ನಡೆಸಿ, ಮತಯಾಚಿಸಿದರು.

ಜಯನಗರದಲ್ಲಿ ಶಾಸಕ ಸಿ.ಕೆ. ರಾಮಮೂರ್ತಿ ಅವರು ಬೆಂಬಲಿಗರೊಂದಿಗೆ ಬೈಕ್ ರ‍್ಯಾಲಿ ನಡೆಸಿದರು. ‘ದೇಶಕ್ಕೆ ಮೋದಿ ದಕ್ಷಿಣಕ್ಕೆ ಸೂರ್ಯ’ ಎಂಬ ಘೋಷಣೆಯೊಂದಿಗೆ ಶಾಕಾಂಬರಿ ನಗರ ವಾರ್ಡ್, ಜಯನಗರ 8ನೇ ಬಡಾವಣೆ, ಸಿಆರ್ ಲೇಔಟ್, ವೈಶ್ಯ ಬ್ಯಾಂಕ್ ಕಾಲೊನಿ, ಗುರುಮೂರ್ತಪ್ಪ ಗಾರ್ಡನ್ ಸುತ್ತಮುತ್ತ ರಾಜ್ಯ ಒಬಿಸಿ ಪ್ರಧಾನ ಕಾರ್ಯದರ್ಶಿ ಬಿ. ಸೋಮಶೇಖರ್ ಅವರ ನೇತೃತ್ವದಲ್ಲಿ ಪಾದಯಾತ್ರೆ ಮುಖಾಂತರ ಮನೆ ಮನೆಗೆ ತೆರಳಿ ಮತಯಾಚಿಸಿದರು.

ಬಿಟಿಎಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ರ‍್ಯಾಲಿಯಲ್ಲಿ ವಿಧಾನಪರಿಷತ್ ಸದಸ್ಯ ಗೋಪಿನಾಥ್ ರೆಡ್ಡಿ, ಮುಖಂಡರಾದ ಶ್ರೀಧರ್ ರೆಡ್ಡಿ, ಸರಸ್ವತಮ್ಮ, ರಾಜೇಂದ್ರ ರೆಡ್ಡಿ, ಸುದರ್ಶನ್ ರೆಡ್ಡಿ, ಸುಧಾಕರ ರೆಡ್ಡಿ ಉಪಸ್ಥಿತರಿದ್ದರು.

ಗೋವಿಂದರಾಜ ನಗರ, ವಿಜಯನಗರದಲ್ಲಿ ಬೈಕ್ ರ‍್ಯಾಲಿ ಹಾಗೂ ಪ್ರಚಾರ ಸಭೆಯಲ್ಲಿ ತೇಜಸ್ವಿ ಸೂರ್ಯ ಮತಯಾಚಿಸಿದರು. ‘ದೇಶದ ಪ್ರಧಾನಿಯನ್ನು ಚುನಾಯಿಸುವ ಸಂದರ್ಭದಲ್ಲಿ, ಕಳೆದ 10 ವರ್ಷಗಳಲ್ಲಿ ಮೋದಿ ಸರ್ಕಾರದ ಅವಧಿಯಲ್ಲಿನ ಸುಧಾರಣೆಗಳನ್ನು ಪರಿಗಣಿಸಿ, ಈ ಬಾರಿ ಬಿಜೆಪಿಯುನ್ನು ಅತ್ಯಧಿಕ ಮತಗಳ ಅಂತರದಲ್ಲಿ ಗೆಲ್ಲಿಸಿ’ ಎಂದರು.

‘ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವೆನಿಸಿರುವ ಭಾರತದ ಪ್ರಸ್ತುತ ಸಾರ್ವತ್ರಿಕ ಚುನಾವಣೆ ಮೇಲೆ ವಿಶ್ವದ ಗಮನ ನೆಟ್ಟಿದೆ. ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವುದರ ಮೂಲಕ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸಬೇಕು. ಮತದಾನದ ದಿನವನ್ನು ರಜೆಯೆಂದು ಭಾವಿಸದೆ, ಎಲ್ಲರೂ ಮತಕೇಂದ್ರಗಳಿಗೆ ತೆರಳಿ ತಪ್ಪದೇ ತಮ್ಮ ಹಕ್ಕು ಚಲಾಯಿಸಬೇಕು’ ಎಂದು ತೇಜಸ್ವಿ ಸೂರ್ಯ ಮನವಿ ಮಾಡಿದರು.

ಉಮೇಶ್ ಶೆಟ್ಟಿ, ವಿಶ್ವನಾಥ ಗೌಡ, ಎಚ್. ರವೀಂದ್ರ , ಟಿ.ವಿ. ಕೃಷ್ಣ, ಹನುಮಂತಯ್ಯ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.