ಗಂಗಾವತಿ (ಕೊಪ್ಪಳ ಜಿಲ್ಲೆ): ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ್ ಭಾಷಣ ಮಾಡುವಾಗ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಬೆಂಬಲಿಗರು ಕುರ್ಚಿ ಎಸೆದು ಆಕ್ರೋಶ ವ್ಯಕ್ತಪಡಿಸಿದರು.

ಗಂಗಾವತಿ ಕ್ಷೇತ್ರದಲ್ಲಿ ಅನ್ಸಾರಿ ಹಾಗೂ ಶ್ರೀನಾಥ್ ಬಣದ ನಡುವೆ ಜಿದ್ದಾಜಿದ್ದಿ ನಡೆಯುತ್ತಿದೆ.

ಸ್ವಯಂಪ್ರೇರಿತವಾಗಿ ಮೈಕ್ ಬಳಿ ಬಂದು ಶ್ರೀನಾಥ್ ಮಾತು ಆರಂಭಿಸುತ್ತಿದ್ದಂತೆ ಅನ್ಸಾರಿ ಆಕ್ಷೇಪ ವ್ಯಕ್ತಪಡಿಸಿದರು. ಆಗ ಅನ್ಸಾರಿ ಪಕ್ಕದಲ್ಲಿ ಕುಳಿತಿದ್ದ ಸಚಿವ ಬೈರತಿ ಸುರೇಶ್ ಅವರನ್ನು ಸಮಾಧಾನಪಡಿಸಿದರು.

ಆಗ ಶ್ರೀನಾಥ್ ಮಾತು ಆರಂಭಿಸಿದಾಗ ಅನ್ಸಾರಿ ಬೆಂಬಲಿಗರು ಖುರ್ಚಿ ಎಸೆದರು. ಮಾತಾಡಬೇಡಿ, ಮಾತಾಡಬೇಡಿ ಎಂದು ಕೂಗಿದರು. ಶ್ರೀನಾಥ್ ಮಾತನಾಡಿದಷ್ಟೂ ಹೊತ್ತು ಕಾರ್ಯಕರ್ತರು ವಿರೋಧ ವ್ಯಕ್ತಪಡಿಸುತ್ತಲೇ ಇದ್ದರು. ವೇದಿಕೆ ಮೇಲಿದ್ದ ಅನ್ಸಾರಿ ವಿರೋಧ ಮುಂದುವರಿಸಿ ಎಂದು ಕೈ ಸಂಜ್ಞೆ ಮಾಡಿದರು. ಆಗ ವೇದಿಕೆ ಮುಂಭಾಗದಲ್ಲಿದ್ದ ಸಾವಿರಾರು ಬೆಂಬಲಿಗರು ಶ್ರೀನಾಥ್ ಭಾಷಣಕ್ಕೆ ಅಡ್ಡಿಪಡಿಸಿದರು.

ಈ ಬಣ ರಾಜಕಾರಣದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇರುಸು ಮುರುಸಾಯಿತು. ಶ್ರೀನಾಥ್ ಭಾಷಣ ಮುಗಿದ ಬಳಿಕವಷ್ಟೇ ಅನ್ಸಾರಿ ಬೆಂಬಲಿಗರು ಸುಮ್ಮನಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.