ಬೆಂಗಳೂರು: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪರ ಬಹುಭಾಷಾ ನಟಿ, ಎಐಸಿಸಿ ವಕ್ತಾರೆ ಖುಷ್ಬು ಬುಧವಾರ ಹೊಯ್ಸಳನಗರದಲ್ಲಿ ರೋಡ್ ಶೋ ನಡೆಸಿದರು.

ಈ ವೇಳೆ ಕನ್ನಡದಲ್ಲಿ ಮಾತನಾಡಿದ ಖುಷ್ಬು, ‘ನಮ್ಮವರೂ ಇಲ್ಲಿ ಹೆಚ್ಚು ಇದ್ದೀರಾ. ನೀವೆಲ್ಲರೂ ರಿಜ್ವಾನ್ ಬೆನ್ನಿಗೆ ನಿಲ್ಲಬೇಕು’ ಎಂದು ಮನವಿ ಮಾಡಿದರು.

‘ಕೇಂದ್ರ ಸರ್ಕಾರ ಏನೇನು ಮಾಡಿದೆ ಎಂಬುವುದು ಎಲ್ಲರಿಗೂ ಗೊತ್ತಿದೆ. ಮೋದಿ ಬರೀ ಸುಳ್ಳು ಹೇಳಿಕೊಂಡೇ ಬಂದಿದ್ದಾರೆ. ಈ ಬಾರಿ ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕು. ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಪಟ್ಟದಲ್ಲಿ ಕುಳ್ಳಿರಿಸಬೇಕು’ ಎಂದು ಮನವಿ ಮಾಡಿದರು.

ಈಡೇರಿಸಬಹುದಾದ ಭರವಸೆಯನ್ನಷ್ಟೆ ನೀಡಿದ್ದೇವೆ: ‘ನಮ್ಮ ಪ್ರಣಾಳಿಕೆ ಸಮಗ್ರವಾಗಿದೆ. ಈಡೇರಿಸಬಹುದಾದ ಭರವಸೆಯನ್ನು ನಾವು ನೀಡಿದ್ದೇವೆ’ ಎಂದು ಖುಷ್ಬು ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಹಿಳೆ, ಬಡವರು, ಮಧ್ಯಮವರ್ಗ, ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಪ್ರಾತಿನಿಧ್ಯ ನೀಡಿದ್ದೇವೆ. ನಮ್ಮ ಭರವಸೆಗಳ ಪೈಕಿ ನ್ಯಾಯ್ ಯೋಜನೆ ಜನರನ್ನು ಸೆಳೆದಿದೆ’ ಎಂದರು.

‘ನರೇಂದ್ರ ಮೋದಿ ಜಾರಿಗೆ ತಂದ ಹಲವು ಯೋಜನೆಗಳು ವಿಫಲವಾಗಿವೆ. ಜಿಎಸ್ಟಿ ಹಾಗೂ ನೋಟು ರದ್ಧತಿ ಜನರಲ್ಲಿ ಭಯದ ವಾತಾವರಣ ಉಂಟು ಮಾಡಿದೆ’ ಎಂದರು.

‘ಸರ್ವಾಧಿಕಾರಿಯಂತೆ ಮೋದಿ ವರ್ತಿಸುತ್ತಿದ್ದಾರೆ. ಚೌಕೀದಾರ್ ಚೋರ್ ಆಗಿದ್ದಾರೆ. ದೇಶದಲ್ಲಿ ಕಳ್ಳತನ ಆಗುತ್ತಿದೆ. ಚೌಕೀದಾರ್ ಯಾವುದೇ ತನಿಖೆ ಕೈಗೊಳ್ಳುತ್ತಿಲ್ಲ. ಅವರ ನಡವಳಿಕೆ ಅನುಮಾನ ಮೂಡಿಸುತ್ತಿದೆ’ ಎಂದರು.

‘ಐದು ವರ್ಷಗಳಲ್ಲಿ ಬಿಜೆಪಿ ಗೇಮ್ ಚೇಂಜರ್ ಆಗಿ ಕೆಲಸ ಮಾಡಿಲ್ಲ. ಕೇವಲ ನೇಮ್ ಚೇಂಜರ್ ಆಗಿದೆ. ತನ್ನದೇ ಆದ ಯಾವುದೇ ಯೋಜನೆ ಕೂಡ ಘೋಷಿಸಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.