ಪುರಾಣ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇಗುಲ, ಕ್ರೋಢ ಶಂಕರನಾರಾಯಣ, ಬ್ರಾಹ್ಮೀ ಕಮಲಶಿಲೆ, ಮರವಂತೆಯ ಕಡಲ ಕಿನಾರೆ, ಸೋಮೆಶ್ವರ ಸಮುದ್ರ ತೀರ, ನಿಸರ್ಗ ರಮಣೀಯ ಒತ್ತಿನೇಣೆ ಸೇರಿದಂತೆ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳ ಸಂಗಮ ಕ್ಷೇತ್ರವಾಗಿರುವ ‘ಬೈಂದೂರು‘, ಜಿಲ್ಲೆಯಲ್ಲಿಯೇ ಉದ್ದನೆಯ ಕರಾವಳಿ ತೀರ ಹೊಂದಿರುವ ಪಶ್ಚಿಮ ಘಟ್ಟದ ಬುಡದಲ್ಲಿ ಮಲೆನಾಡಿನೊಂದಿಗೆ ಬೆಸೆದುಕೊಂಡಿರುವ ಕ್ಷೇತ್ರ. ಗಂಗೊಳ್ಳಿ, ಮರವಂತೆ ಹಾಗೂ ಕೋಡೇರಿ ಮೀನುಗಾರಿಕಾ ಬಂದರು ಕ್ಷೇತ್ರದಲ್ಲಿವೆ.