ಹಾಸನ: ‘9 ಅನ್ನೋದು ಎಚ್.ಡಿ.ದೇವೇಗೌಡರಿಗೆ ಕಂಟಕವಾಗಿದ್ದು, 1989, 1999ರಲ್ಲಿ ಸೋಲು ಉಂಟಾಗಿದೆ. ಅದರಂತೆ 2019 ಹಾಗೂ ಚುನಾವಣೆ ನಡೆಯುವ ಏಪ್ರಿಲ್ 18, ಅಂದರೆ 1+8=9. ಹಾಗಾಗಿ ಅವರಿಗೆ ಸೋಲು ಖಚಿತ’ ಎಂದು ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಮಂಜು ಹೇಳಿದರು.

ಬಿಜೆಪಿ ಮುಖಂಡರ ಸಭೆಯಲ್ಲಿ ಮಾತನಾಡಿದರು. ‘ನಾಯಕರು ಒಂದಾಗಬಹುದು. ಆದರೆ, ಹಳ್ಳಿಯ ನೊಂದ ಮತದಾರರು ಒಂದಾಗಲ್ಲ. ಸಂತ್ರಸ್ತರಿಗೆ ಬಿಸ್ಕತ್, ಹೂಗಳನ್ನು ಎಸೆಯುತ್ತಿದ್ದ ರೇವಣ್ಣ, ನಾನು ಬಿಜೆಪಿ ಅಭ್ಯರ್ಥಿಯಾಗುತ್ತಿದ್ದಂತೆ ಕಾಂಗ್ರೆಸ್, ಬಿಜೆಪಿ ನಾಯಕರ ಮನೆಗೆ ಹೋಗಿ ಬೆಂಬಲ ಕೋರುತ್ತಿದ್ದಾರೆ. ಕಾಂಗ್ರೆಸ್ 20, ಜೆಡಿಎಸ್ 8 ಸೀಟು ಹಂಚಿಕೆ ಮಾಡಿಕೊಂಡಿವೆ. ಆದರೆ, ಜೆಡಿಎಸ್‌ಗೆ ಅಭ್ಯರ್ಥಿಗಳೇ ಸಿಗುತ್ತಿಲ್ಲ. ಅನ್ಯ ಪಕ್ಷದವರನ್ನು ಕರೆ ತಂದು ನಿಲ್ಲಿಸುತ್ತಿದ್ದಾರೆ’ ಎಂದು ಟೀಕಿಸಿದರು.

‘ನಮಗೆ ಕಾಂಗ್ರೆಸ್ ಮತವೇ ಬೇಡ ಎಂದಿದ್ದ ಜೆಡಿಎಸ್ ನಾಯಕರ ವಿರುದ್ಧ ಸೇಡು ತೀರಿಸಿಕೊಳ್ಳಲು ಮತದಾರರು
ಕಾದಿದ್ದಾರೆ. ರೈತರ ಮಕ್ಕಳಾದ ಇವರಿಗೆ ಕೃಷಿ, ತೋಟಗಾರಿಕೆ ಖಾತೆ ಬೇಡ. ಹಣವಿರುವ ಲೋಕೋಪಯೋಗಿ, ಇಂಧನ ಖಾತೆಯೇ ಬೇಕು’ ಎಂದು ಲೇವಡಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.