ಬೆಂಗಳೂರು: ವರನಟ ರಾಜ್‌ಕುಮಾರ್ ಅವರನ್ನು ವೀರಪ್ಪನ್ ಅಪಹರಣ ಮಾಡಿ 24 ವರ್ಷಗಳಾಗಿವೆ. ಭೀಮನ ಅಮವಾಸ್ಯೆ ದಿನವೇ ರಾಜ್‌ಕುಮಾರ್ ಅಪಹರಣವಾಗಿತ್ತು.

1980ರಲ್ಲಿಯೇ ವೀರಪ್ಪನ್ ಕಾಡಿನಲ್ಲಿ ಕುಕೃತ್ಯಗಳನ್ನು ಪ್ರಾರಂಭ ಮಾಡಿದ್ದ. 1990ರ ದಶಕದ ಅಂತ್ಯದ ವೇಳೆಗೆ ಪೊಲೀಸ್, ಅರಣ್ಯ ಇಲಾಖೆಯ ಅಧಿಕಾರಿಗಳ ಕಾರ್ಯಾಚರಣೆಗಳಿಂದ ಅವನ ಗಂಧದ ಕಳ್ಳಸಾಗಣೆ, ಆನೆದಂತದ ವ್ಯಾಪಾರಗಳು ಕ್ಷೀಣಿಸಿದ್ದವು. ಇದರಿಂದ ವೀರಪನ್ ಹಣಕಾಸು ಮುಗ್ಗಟ್ಟಿಗೆ ಸಿಲುಕಿದ್ದ. ಈ ಹಂತದಲ್ಲಿ ಅವನು ಗಣ್ಯರನ್ನು ಅಪಹರಣ ಮಾಡಿ ಹಣ ಸಂಗ್ರಹಿಸುವ ಯೋಜನೆ ರೂಪಿಸಿದ್ದ.
.ರಾಜ್ ಅಪಹರಣ: ಎಲ್ಲರೂ ಖುಲಾಸೆ.ಡಾ. ರಾಜ್ ಅಪಹರಣ ಪ್ರಕರಣ: ಇಂದು ತೀರ್ಪು.
ರಾಜ್ ಕುಮಾರ್ ಅಪಹರಣಕ್ಕೂ ಮುನ್ನ ವನ್ಯಜೀವಿ ಫೋಟೊಗ್ರಾಪರ್‌ಗಳಾದ ಕೃಪಾಕರ್ ಮತ್ತು ಸೇನಾನಿಯನ್ನು ಅಪಹರಿಸಿದ್ದ. ನಂತರ ಪ್ರಾದ್ಯಾಪಕರೊಬ್ಬರನ್ನು ಅಪಹರಿಸಿದ್ದ. ಇವರಿಂದ ಹಣ ಸಿಗುವುದಿಲ್ಲ ಎಂದು ತಿಳಿದು ಗಣ್ಯರ ಅಪಹರಣಕ್ಕೆ ಮುಂದಾಗಿದ್ದ.

2000, ಜುಲೈ 30ರಂದು ಗಾಜನೂರಿನ ಮನೆಯಿಂದ ರಾಜ್‌ಕುಮಾರ್ ಅವರನ್ನು ವೀರಪ್ಪನ್ ಅಪಹರಣ ಮಾಡಿದ. 108 ದಿನಗಳ ಬಳಿಕ ಅವರನ್ನು ಬಿಡುಗಡೆ ಮಾಡಿದ್ದ.

2004ರ ಅಕ್ಟೋಬರ್‌ನಲ್ಲಿ ತಮಿಳುನಾಡಿನ ವಿಶೇಷ ಪೊಲೀಸ್ ಕಾರ್ಯಪಡೆ ವೀರಪ್ಪನ್‌ನನ್ನು ಹತ್ಯೆ ಮಾಡಿತ್ತು. ಇದಾದ ಎರಡು ವರ್ಷಗಳ ನಂತರ 2006ರಲ್ಲಿ ರಾಜ್‌ಕುಮಾರ್ ವಿಧಿವಶರಾದರು.
.ರಾಜ್ ಜನ್ಮದಿನ: ಅಭಿಮಾನಿಗಳ ಸಡಗರ.ವೀರಪ್ಪನ್ ಉರಿದ ಮೇಲೆ ಉಳಿದ ನೆರಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.