PHOTOS | ಭಾರತದ 'ನಾಟು.. ನಾಟು' ಗೀತೆ ಹಾಗೂ 'ದಿ ಎಲಿಫೆಂಟ್ ವಿಸ್ಪರ್ಸ್' ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಗರಿ
ಎಸ್.ಎಸ್.ರಾಜಮೌಳಿ ನಿರ್ದೇಶನದ ತೆಲುಗಿನ ಆರ್‌ಆರ್‌ಆರ್ ಚಿತ್ರದ 'ನಾಟು ನಾಟು' ಗೀತೆ ಹಾಗೂ ತಮಿಳಿನ 'ದಿ ಎಲಿಫೆಂಟ್ ವಿಸ್ಪರ್ಸ್' ಸಾಕ್ಷ್ಯ ಚಿತ್ರವು ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಜಯಿಸಿದೆ. ಆರ್.ಆರ್.ಆರ್ ಸಿನಿಮಾದ 'ನಾಟು ನಾಟು' ಹಾಡು ಅತ್ಯುತ್ತಮ ಮೂಲಗೀತೆ (ಒರಿಜಿನಲ್) ವರ್ಗದಲ್ಲಿ ಮತ್ತು ತಮಿಳಿನ 'ದಿ ಎಲಿಫೆಂಟ್ ವಿಸ್ಪರರ್ಸ್' ಸಾಕ್ಷ್ಯಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಒಲಿಯಿತು. ಇದೇ ಮೊದಲಿಗೆ ಭಾರತಕ್ಕೆ ಎರಡು ಆಸ್ಕರ್ ಪ್ರಶಸ್ತಿಗಳು ಬಂದಿರುವುದು ವಿಶೇಷ. (ಚಿತ್ರ ಕೃಪೆ: ಐಒಎನ್‌ಎಸ್)