ಮಂಗಳೂರು: ಬೊಳ್ಳಿ ಮೂವೀಸ್ ಲಾಂಛನದಲ್ಲಿ ಅರ್ಜುನ್ ಕಾಪಿಕಾಡ್ ನಿರ್ದೇಶಿಸಿರುವ ‘ಅಬತರ’ ತುಳು ಸಿನಿಮಾ ಆಗಸ್ಟ್ 18ರಂದು ಕರಾವಳಿಯಲ್ಲಿ ತೆರೆ ಕಾಣಲಿದೆ ಎಂದು ನಿರ್ದೇಶಕ ದೇವದಾಸ್ ಕಾಪಿಕಾಡ್ ತಿಳಿಸಿದರು.

‘ಜುಲೈ 1ರಂದು ಸಿನಿಮಾ ಬಿಡುಗಡೆಗೆ ನಿರ್ಧರಿಸಲಾಗಿತ್ತು. ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ಸಿನಿಮಾ ಈಗ ಕರಾವಳಿಯಲ್ಲಿ ಪ್ರದರ್ಶನ ಕಾಣುತ್ತಿದೆ. ಒಂದು ತುಳು ಸಿನಿಮಾ ಯಶಸ್ವಿಯಾಗುತ್ತಿರುವಾಗಲೇ ಮತ್ತೊಂದು ಬಿಡುಗಡೆಯಾದರೆ ಎರಡಕ್ಕೂ ಪೆಟ್ಟು ಬೀಳುವ ಸಾಧ್ಯತೆ ಇರುವುದರಿಂದ ಅಬತರವನ್ನು ತಡವಾಗಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.

‘ಆಗಸ್ಟ್ನಲ್ಲಿ ‘ಇಲ್ಲ್ ಒಕ್ಕೆಲ್’ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಈಗ ಚರ್ಚೆಯ ಮೂಲಕ ಬಿಡುಗಡೆಯ ದಿನಾಂಕಗಳ ಗೊಂದಲ ನಿವಾರಿಸಲಾಗಿದೆ. ಚಿತ್ರ ಅಕ್ಟೋಬರ್ನಲ್ಲಿ ತೆರೆ ಕಾಣಲಿದೆ ಎಂದು ನಿರ್ದೇಶಕ ಸುರೇಶ್ ಚಿತ್ರಾಪು ತಿಳಿಸಿದರು. ಸೀಮಿತ ಮಾರುಕಟ್ಡೆ ಹೊಂದಿರುವ ತುಳು ಚಿತ್ರರಂಗದಲ್ಲಿ ಚರ್ಚೆಯ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಅಗಿರುವುದು ಸಂತಸದ ವಿಷಯ ಎಂದು ನಟ ಅರ್ಜುನ್ ಕಾಪಿಕಾಡ್ ಹೇಳಿದರು.

ಅಬತರ ಸಿನಿಮಾದ ತಾರಾಬಳಗದಲ್ಲಿ ದೇವದಾಸ್ ಕಾಪಿಕಾಡ್, ನವೀನ್ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಸಾಯಿಕೃಷ್ಣ ಕುಡ್ಲ, ಅರ್ಜುನ್ ಕಾಪಿಕಾಡ್ ಇದ್ದಾರೆ. ಹಾಸ್ಯ ಮನೋರಂಜನೆಯ ಪ್ಯಾಕೇಜ್ ಚಿತ್ರದಲ್ಲಿ ಇದೆ. ಇಲ್ಲ್ ಒಕ್ಕೆಲ್ ಕೂಡ ಹಾಸ್ಯ ಮನೋರಂಜನೆಯ ಸಿನಿಮಾ. ನವೀನ್ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಉಮೇಶ್ ಮಿಜಾರ್ ಅಭಿನಯಿಸಿದ್ದಾರೆ ಎಂದು ನಿರ್ದೇಶಕರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.