ಹೈದರಾಬಾದ್: ₹1 ಕೋಟಿಯನ್ನು 100 ಕುಟುಂಬಗಳಿಗೆ ಹಂಚುವುದರ ಮೂಲಕ ‘ಖುಷಿ’ ಸಿನಿಮಾದ ಯಶಸ್ಸನ್ನು ಸಂಭ್ರಮಿಸುವುದಾಗಿ ತೆಲುಗು ನಟ ವಿಜಯ ದೇವರಕೊಂಡ ಘೋಷಿಸಿದ ಬೆನ್ನಲ್ಲೇ ಸಿನಿಮಾ ವಿತರಕ ಸಂಸ್ಥೆ ಅಭಿಷೇಕ್ ಪಿಕ್ಚರ್ಸ್, ‘ವರ್ಲ್ಡ್ ಫೇಮಸ್ ಲವರ್’ ಚಿತ್ರದಿಂದ ₹8 ಕೋಟಿ ಕಳೆದುಕೊಂಡಿರುವುದಾಗಿ ತಿಳಿಸಿದೆ.

2020ರಲ್ಲಿ ವಿಜಯ ದೇವರಕೊಂಡ ನಟನೆಯ ‘ವರ್ಲ್ಡ್ ಫೇಮಸ್ ಲವರ್’ ಚಿತ್ರ ಬಿಡುಗಡೆಯಾಗಿತ್ತು. ಈ ಚಿತ್ರದ ವಿತರಣಾ ಹಕ್ಕನ್ನು ಅಭಿಷೇಕ್ ಪಿಕ್ಚರ್ಸ್ ವಹಿಸಿಕೊಂಡಿತ್ತು. ಕಳಪೆ ಪ್ರದರ್ಶನದಿಂದ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಮಕಾಡೆ ಮಲಗಿತ್ತು.

ಇದೇ ತಿಂಗಳ ಆರಂಭದಲ್ಲಿ ಬಿಡುಗಡೆಯಾದ ವಿಜಯ ದೇವರಕೊಂಡ ಮತ್ತು ನಟಿ ಸಮಂತ ನಟನೆಯ ‘ಖುಷಿ’ ಚಿತ್ರ ಉತ್ತಮ ಪ್ರದರ್ಶನ ಕಂಡಿತ್ತು. ಬಿಡುಗಡೆಯಾದ ಮೂರು ದಿನಕ್ಕೆ ಜಾಗತಿಕ ಮಟ್ಟದಲ್ಲಿ ಚಿತ್ರ ₹70 ಕೋಟಿ ಗಳಿಸಿತ್ತು ಎಂದು ಚಿತ್ರ ತಂಡ ಹೇಳಿಕೊಂಡಿತ್ತು.

ಇತ್ತೀಚೆಗೆ ವಿಶಾಖಪಟ್ಟಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ದೇವರಕೊಂಡ, ‘‘ಖುಷಿ’ ಚಿತ್ರ ಯಶಸ್ಸನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಸಲುವಾಗಿ ₹1 ಕೋಟಿಯನ್ನು 100 ಕೋಟಿ ಕುಟುಂಬಗಳಿಗೆ ನೀಡಲು ನಿರ್ಧರಿಸಿದ್ದೇನೆ. ಪ್ರತಿ ಕುಟುಂಬಕ್ಕೆ ತಲಾ ₹1 ಲಕ್ಷ ಸಿಗಲಿದೆ. ಇದನ್ನು ನನ್ನ ವೈಯಕ್ತಿಕ ಖಾತೆಯಿಂದಲೇ ನೀಡುತ್ತೇನೆ’ ಎಂದು ಘೋಷಿಸಿದ್ದರು.

ವಿಜಯ ಅವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ವಿತರಕರ ಕುಟುಂಬಗಳನ್ನು ಮರೆಯಬೇಡಿ ಎಂದು ಅಭಿಷೇಕ್ ಪಿಕ್ಚರ್ಸ್ ನಟನಿಗೆ ಜ್ಞಾಪಿಸಿದೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಬರೆದುಕೊಂಡಿರುವ ಅಭಿಷೇಕ್ ಪಿಕ್ಚರ್ಸ್, ‘ಪ್ರೀತಿಯ ವಿಜಯ ದೇವರಕೊಂಡ ಅವರೇ ನಿಮ್ಮ ಸಿನಿಮಾ ‘ವರ್ಲ್ಡ್ ಫೇಮಸ್ ಲವರ್’ ವಿತರಣೆಯಲ್ಲಿ ನಾವು ₹8 ಕೋಟಿ ಕಳೆದುಕೊಂಡಿದ್ದೇವೆ, ಆದರೆ ಈ ಬಗ್ಗೆ ಯಾರೂ ಚಿಂತಿಸುತ್ತಿಲ್ಲ’ ಎಂದಿದೆ.

‘₹1 ಕೋಟಿ ದಾನ ಮಾಡುತ್ತಿರುವ ನಿಮ್ಮ ಹೃದಯ ವೈಶಾಲತೆಯನ್ನು ನಾವು ಮೆಚ್ಚಿದ್ದೇವೆ. ಆದರೆ ದಯವಿಟ್ಟು ಪ್ರದರ್ಶಕರು, ವಿತರಕರ ಕುಟುಂಬಗಳನ್ನು ಉಳಿಸಿ ಎಂದು ನಾವು ನಿಮ್ಮಲ್ಲಿ ಕೇಳಿಕೊಳ್ಳುತ್ತೇವೆ’ ಎಂದು ವಿನಂತಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.