ಬಾಲಿವುಡ್‌ನ ‘ಮಸಲ್‌ಮ್ಯಾನ್’ ವಿದ್ಯುತ್ ಜಮ್‌ವಾಲ್ ಬಯಸಿದಂತೆ ಮತ್ತೆ ಮತ್ತೆ ಆ್ಯಕ್ಷನ್ ಸಿನಿಮಾಗಳೇ ಕೈಬೀಸಿ ಕರೆಯುತ್ತಿವೆ. ಈಗಷ್ಟೇ ‘ಜಂಗ್ಲಿ’ ಸಿನಿಮಾ ಮುಗಿಸಿರುವ ವಿದ್ಯುತ್ ಅವರೊಂದಿಗೆ ನಿರ್ದೇಶಕ ಫಾರೂಕ್ ಕಬೀರ್ ತಮ್ಮ ಹೊಸ ಸಿನಿಮಾದ ಮಾತುಕತೆ ಮುಗಿಸಿದ್ದಾರೆ. ‘ಖುದಾ ಹಫೀಜ್’ ಶೀರ್ಷಿಕೆಯ ಆ್ಯಕ್ಷನ್ ಥ್ರಿಲ್ಲರ್‌ನಲ್ಲಿ ವಿದ್ಯುತ್ ರೊಮ್ಯಾಂಟಿಕ್ ಹೀರೊ ಆಗಿ ಸಾಹಸ ದೃಶ್ಯಗಳಲ್ಲಿ ಮಿಂಚಲಿದ್ದಾರೆ.

‘ಖುದಾ ಹಫೀಜ್‘ ಕೆಲವು ನೈಜ ಘಟನೆಗಳನ್ನು ಆಧರಿಸಿ ಹೆಣೆಯಲಾಗಿರುವ ಚಿತ್ರಕತೆಯನ್ನು ಒಳಗೊಂಡಿರುತ್ತದೆ. ಕುಮಾರ್ ಮಾಂಗಾಡ್ ಪಾಠಕ್ ಮತ್ತು ಅಭಿಷೇಕ್ ಪಾಠಕ್ ಬಂಡವಾಳದಲ್ಲಿ ಚಿತ್ರ ಮೂಡಿಬರಲಿದೆ. ಚಿತ್ರದ ನಾಯಕಿಯ ಆಯ್ಕೆ ಅಂತಿಮಗೊಂಡ ಬಳಿಕ ಮೊರಾಕ್ಕೊ ಮತ್ತು ಕೇರಳದ ವಿವಿಧ ಲೊಕೇಶನ್‌ಗಳಲ್ಲಿ ಚಿತ್ರೀಕರಣ ಶುರುವಾಗಲಿದೆ ಎಂದು ವಿದ್ಯುತ್ ಹೇಳಿದ್ದಾರೆ.

‘ನಿಜ ಜೀವನದ ಪ್ರೇಮಕತೆಗಳನ್ನು ಸಮಕಾಲೀನ ಜಗತ್ತಿನ ಪ್ರೇಕ್ಷಕರ ಮನಮೆಚ್ಚುವಂತೆ ತೆರೆಯಲ್ಲಿ ತರುವುದು ನಿಜಕ್ಕೂ ಥ್ರಿಲ್ಲಿಂಗ್ ಕೆಲಸ. ಅಂತಹ ವಿಶಿಷ್ಟ ಸಿನಿಮಾದಲ್ಲಿ ನಾನು ನಾಯಕನಟನಾಗಿ ನಟಿಸಲು ಖುಷಿಪಡುತ್ತೇನೆ. ಚಿತ್ರನಟನಾಗಿ ನೆನಪಿನಲ್ಲಿ ಉಳಿಯುವಂತಹ ಚಿತ್ರಗಳ ಸಾಲಿಗೆ ಇದೂ ಸೇರಲಿದೆ‘ ಎಂದು ವಿದ್ಯುತ್ ಹೇಳಿಕೊಂಡಿದ್ದಾರೆ.

ಎಲ್ಲವೂ ಲೆಕ್ಕಾಚಾರದಂತೆ ನಡೆದರೆ ಮುಂದಿನ ವರ್ಷ ಜುಲೈನಲ್ಲಿ ‘ಖುದಾ ಹಫೀಜ್’ ತೆರೆಕಾಣಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.