ಬೆಂಗಳೂರು: ಧಾರಾವಾಹಿ ಚಿತ್ರೀಕರಣದ ವೇಳೆ ನಡೆದ ಅವಘಡದಲ್ಲಿ ಬಿದ್ದು ಬಲಗಾಲು, ಬಲಗೈ ಮುರಿದುಕೊಂಡಿದ್ದ ನಟ ಮಂಡ್ಯ ರಮೇಶ್ ಅವರು ಶಸ್ತ್ರಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಆರಂಭವಾಗಲಿರುವ ರಮೇಶ್ ಅರವಿಂದ್ ನಿರ್ಮಾಣದ ಹೊಸ ಧಾರಾವಾಹಿ ‘ಆಸೆ’ ಚಿತ್ರೀಕರಣದ ವೇಳೆ ಈ ಅವಘಡ ನಡೆದಿತ್ತು.

ಬೆಂಗಳೂರಿನ ಆರ್ಆರ್ ನಗರದ ಹೊರವಲಯದಲ್ಲಿರುವ ಕಲ್ಲು ಕ್ವಾರಿಯಲ್ಲಿ ಈ ಚಿತ್ರೀಕರಣ ನಡೆಯುತ್ತಿತ್ತು. ಶೂಟಿಂಗ್ ವೇಳೆ ಕಲ್ಲು ಕ್ವಾರಿಗೆ ರಮೇಶ್ ಬಿದ್ದಿದ್ದಾರೆ. ತಕ್ಷಣದಲ್ಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಗುರುವಾರ ರಾತ್ರಿ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದ್ದು, ಮೈಸೂರಿನಲ್ಲಿರುವ ಅವರ ಮನೆಗೆ ತೆರಳಿದ್ದಾರೆ. ‘ಬಲಗೈ ಹಾಗೂ ಬಲಗಾಲಿಗೆ ಪ್ಲಾಸ್ಟರ್ ಹಾಕಿದ್ದು, ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ. ಮೈಕೈಗೂ ತರಚಿದ ಗಾಯಗಳಾಗಿವೆ’ ಎಂದು ಆಪ್ತರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.