ಅಹಮದಾಬಾದ್: ಬಿಸಿಲಾಘಾತಕ್ಕೆ ಒಳಗಾಗಿ ಅಸ್ವಸ್ಥರಾಗಿದ್ದ ಬಾಲಿವುಡ್ ನಟ ಶಾರುಕ್ ಖಾನ್ ಅವರನ್ನು ಬುಧವಾರ ಅಹಮದಾಬಾದ್ನ ಕೆ ಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವರದಿ ಪ್ರಕಾರ, ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ತಮ್ಮ ಒಡೆತನದ ಕೆಕೆಆರ್ ತಂಡದ ಐಪಿಎಲ್ ಪಂದ್ಯ ವೀಕ್ಷಣೆಗಾಗಿ ಶಾರುಕ್ ಆಗಮಿಸಿದ್ದರು. ಈ ವೇಳೆ ಬಿಸಿ ಗಾಳಿಯ ಪರಿಸ್ಥಿತಿಯಿಂದಾಗಿ ಶಾರುಕ್ ಅನಾರೋಗ್ಯಕ್ಕೆ ಒಳಗಾಗಿದ್ದಾರೆ.

ನಗರದಲ್ಲಿ ಮಂಗಳವಾರ ಗರಿಷ್ಠ 45.2 ಡಿಗ್ರಿ ಸೆಲ್ಸಿಯಸ್ನಷ್ಟು ತೀವ್ರ ಉಷ್ಣಾಂಶ ದಾಖಲಾಗಿದೆ.

ಐಪಿಎಲ್ 2024ರ ಮೊದಲ ಪ್ಲೇಆಫ್ ಪಂದ್ಯದಲ್ಲಿ ಎಸ್ಆರ್ಎಚ್ ವಿರುದ್ಧ ಕೆಕೆಆರ್ ತಂಡವನ್ನು ಬೆಂಬಲಿಸಲು ಶಾರುಕ್ ಖಾನ್ ಅಹಮದಾಬಾದ್ಗೆ ಭೇಟಿ ನೀಡಿದ್ದರು.

ಆಸ್ಪತ್ರೆಯ ಸುತ್ತ ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.