ಸದ್ಯ ಕನ್ನಡದ ಯಾವ ಚಿತ್ರಗಳೂ ಯಶಸ್ಸು ಕಾಣುತ್ತಿಲ್ಲ. ಚಿತ್ರಮಂದಿರಕ್ಕೆ ಜನರನ್ನು ಕರೆದು ತರುವಂತಹ ಸ್ಟಾರ್ ನಟರ ಚಿತ್ರಗಳು ಬಿಡುಗಡೆಗೊಳ್ಳಬೇಕೆಂಬ ಅಪೇಕ್ಷೆಯಲ್ಲಿ ಇಡೀ ಚಿತ್ರೋದ್ಯಮವಿದೆ. ಆದರೆ ಸ್ಟಾರ್ ನಟರ ಚಿತ್ರ ಬಿಡುಗಡೆ ದಿನಾಂಕ ಮಾತ್ರ ಮುಂದಕ್ಕೆ ಹೋಗುತ್ತಲೇ ಇದೆ.

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ‘ಯುಐ’ ಚಿತ್ರ ಏಪ್ರಿಲ್ನಲ್ಲಿಯೇ ತೆರೆಗೆ ಬರಬೇಕಿತ್ತು. ಗ್ರಾಫಿಕ್ಸ್ ಕೆಲಸದಿಂದ ಚಿತ್ರ ಬಿಡುಗಡೆ ವಿಳಂಬವಾಗಿದೆ ಎಂದು ತಂಡ ಹೇಳಿತ್ತು. ಅದಾದ ಬಳಿಕ ಮುಂದಿನ ಬಿಡುಗಡೆ ದಿನಾಂಕ ತಿಳಿಸಿರಲಿಲ್ಲ. ಮೂಲಗಳ ಪ್ರಕಾರ ‘ಯುಐ’ ಗೌರಿ–ಗಣೇಶ ಹಬ್ಬಕ್ಕೆ ತೆರೆಗೆ ಬರುವುದು ಖಚಿತವಾಗಿದೆ.

‘ದೊಡ್ಡಮಟ್ಟದ ಗ್ರಾಫಿಕ್ಸ್ ಕೆಲಸವಿತ್ತು. ಹೀಗಾಗಿ ಚಿತ್ರ ಬಿಡುಗಡೆ ವಿಳಂಬವಾಗಿದೆ. ಸೆಪ್ಟೆಂಬರ್ನಲ್ಲಿ ಚಿತ್ರ ತೆರೆಗೆ ಬರುವುದು ಖಚಿತ. ಚಿತ್ರದ ಸಂಗೀತವನ್ನು ಹಂಗೇರಿ ದೇಶದಲ್ಲಿರುವ ಆರ್ಕೆಸ್ಟ್ರಾದಲ್ಲಿ ರೆಕಾರ್ಡ್ ಮಾಡಿದ್ದೇವೆ. ಹೈದರಾಬಾದ್ನಲ್ಲಿ ಗ್ರಾಫಿಕ್ಸ್ ಕೆಲಸ ನಡೆದಿದೆ. ಬಿಡುಗಡೆಯ ಅಂತಿಮ ಹಂತದ ಕೆಲಸಗಳು ಪ್ರಗತಿಯಲ್ಲಿವೆ’ ಎನ್ನುತ್ತಾರೆ ನಿರ್ಮಾಪಕರಲ್ಲೊಬ್ಬರಾದ ಕೆ.ಪಿ.ಶ್ರೀಕಾಂತ್.

‘ಇದು ಎಐ ಅಲ್ಲ, ಯುಐ ಜಗತ್ತು. ಈ ಟೀಸರ್ ನಿಮ್ಮ ಕಲ್ಪನೆಗಾಗಿ’ ಎನ್ನುವ ಟೀಸರ್ನೊಂದಿಗೆ ಉಪೇಂದ್ರ ಚಿತ್ರ ಕುರಿತು ಪ್ರೇಕ್ಷಕರ ತಲೆಗೆ ಹುಳು ಬಿಟ್ಟಿದ್ದರು. ಚಿತ್ರದ ‘ಟ್ರೋಲಾಗುತ್ತೆ, ಎಲ್ಲ ಟ್ರೋಲಾಗುತ್ತೆ’ ಹಾಡು ಮೆಚ್ಚುಗೆ ಗಳಿಸಿತ್ತು.

‘ನಾನು’ ಮತ್ತು ‘ನೀನು’ ಎಂಬ ಅರ್ಥ ನೀಡುವ ಶೀರ್ಷಿಕೆ ಹೊಂದಿರುವ ಚಿತ್ರದಲ್ಲಿ ರೀಷ್ಮಾ ನಾಣಯ್ಯ ನಾಯಕಿ. ಅಜನೀಶ್ ಲೋಕನಾಥ್ ಸಂಗೀತವಿದೆ. ಉಪೇಂದ್ರ ಅವರು ಹಲವು ವರ್ಷಗಳ ಬಳಿಕ ನಿರ್ದೇಶನಕ್ಕೆ ಮರಳಿರುವ ಚಿತ್ರವಿದು. ಕೆ.ಪಿ. ಶ್ರೀಕಾಂತ್ ಮತ್ತು ಜಿ. ಮನೋಹರನ್ ಬಂಡವಾಳ ಹೂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.