‘ಸಲಗ’ದ ಯಶಸ್ಸಿನ ಬಳಿಕ ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ ‘ಭೀಮ’ ಚಿತ್ರ ತೆರೆಗೆ ಬರಲು ಇನ್ನೂ ಮುಹೂರ್ತ ಕೂಡಿಬಂದಿಲ್ಲ. ಅದಕ್ಕೂ ಮೊದಲೇ ವಿಜಯ್ ಅವರ 29ನೇ ಸಿನಿಮಾ ಸೆಟ್ಟೇರಿದೆ. ‘ಕಾಟೇರ’ ಚಿತ್ರದ ಬರಹಗಾರ ಹಾಗೂ ನಿರ್ದೇಶಕ ಜಡೇಶ್ ಹಂಪಿ ಈ ಚಿತ್ರಕ್ಕೆ ಆ್ಯಕ್ಷನ್–ಕಟ್ ಹೇಳುತ್ತಿದ್ದಾರೆ.

‘ಜಂಟಲ್‍ಮ್ಯಾನ್’, ‘ಗುರು ಶಿಷ್ಯರು’ ಚಿತ್ರಗಳ ಮೂಲಕ ಗಮನ ಸೆಳೆದಿದ್ದ ಜಡೇಶ್ ಮತ್ತೊಂದು ಕಂಟೆಂಟ್ ಸಿನಿಮಾದೊಂದಿಗೆ ಬಂದಿದ್ದಾರೆ. ‘ಇದು ಆಳಿದವರ ಕಥೆಯಲ್ಲ, ಅಳಿದು ಉಳಿದವರ ಕಥೆ’ ಎಂಬ ಟ್ಯಾಗ್‌ಲೈನ್ ಚಿತ್ರಕ್ಕಿದೆ. ಮೊದಲ ಪೋಸ್ಟರ್ ಬಿಡುಗಡೆಗೊಂಡಿದ್ದು, ಕತ್ತಿ ಹಾಗೂ ಕೊಡಲಿ ಹಿಡಿದು ದುನಿಯಾ ವಿಜಯ್ ನಿಂತಿದ್ದಾರೆ. ಎದುರು ಭಾಗದಲ್ಲಿರುವ ದೇವರ ರಥವೊಂದು ಬೆಂಕಿಯಿಂದ ಹತ್ತಿ ಉರಿಯುತ್ತಿದೆ.

‘ಈ ತಿಂಗಳ ಅಂತ್ಯದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಇದು ನಮ್ಮ ನೆಲದ ಕಥೆ. ಶಿವರಾಮ ಕಾರಂತರ ‘ಚೋಮನದುಡಿ’ಯ ಪಾತ್ರವೊಂದರಿಂದ ಪ್ರೇರಿತವಾಗಿದೆ. ದೇವರನ್ನು ಮುಂದಿಟ್ಟುಕೊಂಡು ಒಳ್ಳೆಯದು ಮಾಡುವ ಕೆಲವರಿದ್ದಾರೆ. ಕೆಡುಕು ಮಾಡುವವರಿದ್ದಾರೆ. ಅವರಿಬ್ಬರ ನಡುವಿನ ಸಂಘರ್ಷ ಇಲ್ಲಿದೆ. ಬೆಂಗಳೂರಿನಲ್ಲಿ ಹಳ್ಳಿಯ ಸೆಟ್ ಹಾಕುತ್ತಿದ್ದೇವೆ. ಬಹುಭಾಗ ಇಲ್ಲಿಯೇ ಚಿತ್ರೀಕರಣಗೊಳ್ಳಲಿದೆ. ಮಿಕ್ಕಿದ್ದು ಕೋಲಾರ, ಮೈಸೂರು ಸುತ್ತಮುತ್ತ ಚಿತ್ರೀಕರಣವಾಗಲಿದೆ. ಸ್ವಾಮಿ ಛಾಯಾಚಿತ್ರಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನವಿದೆ. ಸಂಗೀತ ನಿರ್ದೇಶಕರು ಇನ್ನೂ ಅಂತಿಮವಾಗಿಲ್ಲ’ ಎಂದರು ಜಡೇಶ್.

‘ಸಾರಥಿ’ ಸಿನಿಮಾದ ನಿರ್ಮಾಪಕ ಕೆ.ವಿ. ಸತ್ಯಪ್ರಕಾಶ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ದುನಿಯಾ ವಿಜಯ್ ಅವರ ಮಗಳು ಮೋನಿಕಾ ಈ ಸಿನಿಮಾದೊಂದಿಗೆ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅಂದಹಾಗೆ ಮೋನಿಕಾ ಸಿನಿಮಾದಲ್ಲಿಯೂ ವಿಜಯ್ ಮಗಳಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುತ್ತಿದೆ ಚಿತ್ರತಂಡ. ಇವರು ನಟನೆಯಲ್ಲಿ ತರಬೇತಿ ಪಡೆದು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

‘ಜಾನಿ ಜಾನಿ ಯೆಸ್ ಪಪ್ಪಾ’ ಚಿತ್ರದಲ್ಲಿ ಜೊತೆಯಾಗಿದ್ದ ರಚಿತಾ ರಾಮ್, ಈ ಚಿತ್ರದಲ್ಲಿ ಮತ್ತೆ ದುನಿಯಾ ವಿಜಯ್‌ಗೆ ಜೋಡಿಯಾಗುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.