‘ಜಟ್ಟ‘, ‘ಮೈತ್ರಿ’ ಅಂತಹ ಸಾಮಾಜಿಕ ಕಳಕಳಿಯ ಚಿತ್ರಗಳನ್ನು ನೀಡಿದ್ದ ಬಿ.ಎಂ.ಗಿರಿರಾಜ್ ಮತ್ತೊಂದು ಚಿತ್ರ ನಿರ್ದೇಶನಕ್ಕೆ ಅಣಿಯಾಗಿದ್ದಾರೆ. ಇನ್ನೂ ಹೆಸರಿಡಿದ ಈ ಚಿತ್ರಕ್ಕೆ ನಟಿ ರಾಗಿಣಿ ದ್ವಿವೇದಿ ನಾಯಕಿ. ರಾಮಕೃಷ್ಣ ನಿಗಾಡಿ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

‘ಹರಿವು’ ಚಿತ್ರದಿಂದ ನನ್ನ ಸಿನಿ ಪಯಣ ಆರಂಭವಾಯಿತು. ಹತ್ತು ವರ್ಷಗಳಿಂದ ರಾಗಿಣಿ ಅವರ ಜೊತೆಗೆ ಚಿತ್ರ ನಿರ್ಮಾಣ ಮಾಡಬೇಕೆಂದು ಪ್ರಯತ್ನಿಸುತ್ತಿದೆ. ಈಗ ಕಾಲ ಕೂಡಿ ಬಂದಿದೆ. ನಿರ್ದೇಶಕ ಬಿ.ಎಂ.ಗಿರಿರಾಜ್ ಒಳ್ಳೆ ಕಥೆ ಮಾಡಿಕೊಂಡಿದ್ದಾರೆ’ ಎಂದರು ನಿರ್ಮಾಪಕರಲ್ಲೊಬ್ಬರಾದ ಗಿರೀಶ್ ವಿ ಗೌಡ.

‘ಕೌಂಡಿನ್ಯ’ ಅವರು ನನ್ನ ನೆಚ್ಚಿನ ಲೇಖಕರು. ಅವರ ಕಥೆಗಳಿಂದ ಪ್ರೇರಿತನಾಗಿ ಈ ಚಿತ್ರದ ಕಥೆ ಸಿದ್ದ ಮಾಡಿದ್ದೇನೆ. ರಾಗಿಣಿ ಅವರ ಜೊತೆ ಇದು ನನ್ನ ಮೊದಲ ಸಿನಿಮಾ’ ಎಂದು ನಿರ್ದೇಶಕ ಬಿ.ಎಂ.ಗಿರಿರಾಜ್ ತಿಳಿಸಿದರು.

‘ಚಿತ್ರದ ಫಸ್ಟ್ ಲುಕ್ ಚೆನ್ನಾಗಿದೆ. ಚಿತ್ರದ ಶೀರ್ಷಿಕೆ ಹಾಗೂ ಕಥೆ ಇನ್ನೂ ಚೆನ್ನಾಗಿದೆ. ಸದ್ಯದಲ್ಲೇ ಶೀರ್ಷಿಕೆ ಅನಾವರಣವಾಗಲಿದೆ. ಉಳಿದ ಮಾಹಿತಿಗಳನ್ನು ಹಂತಹಂತವಾಗಿ ಹಂಚಿಕೊಳ್ಳುತ್ತ ಹೋಗುತ್ತೇವೆ’ ಎಂದರು ರಾಗಿಣಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.