ಮುಂಬೈ: ಬಾಲಿವುಡ್ ನಟಿ ವಿದ್ಯಾಬಾಲನ್ ಅವರ ಮುಂಬರುವ ಚಿತ್ರ 'ನಿಯತ್' ಜುಲೈ 7 ರಂದು ಬಿಡುಗಡೆಯಾಗಲಿದೆ.

ಈ ಸಿನಿಮಾವನ್ನು ಅನು ಮೆನನ್ ನಿರ್ದೇಶನ ಮಾಡಿದ್ದು, ‘ಪ್ರೈಮ್ ವಿಡಿಯೊ’ ಮತ್ತು ವಿಕ್ರಮ್ ಮಲ್ಹೋತ್ರಾ ನೇತೃತ್ವದ ‘ಅಬುಂಡಾಂಟಿಯಾ’ ಎಂಟರ್ಟೈನ್ಮೆಂಟ್ ನಿರ್ಮಿಸಿದೆ.

ಈ ಚಿತ್ರದಲ್ಲಿ ರಾಮ್ ಕಪೂರ್, ರಾಹುಲ್ ಬೋಸ್, ನೀರಜ್ ಕಬಿ, ಶಹಾನಾ ಗೋಸ್ವಾಮಿ, ಅಮೃತ ಪುರಿ, ದೀಪನ್ನಿತಾ ಶರ್ಮಾ, ನಿಕಿ ವಾಲಿಯಾ, ಶಶಾಂಕ್ ಅರೋರಾ, ಪ್ರಜಕ್ತಾ ಕೋಲಿ ಮತ್ತು ದಾನೇಶ್ ರಜ್ವಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಅನು ಮೆನನ್ ಅವರ ಇತ್ತೀಚಿನ ನಿರ್ದೇಶನದ 'ಕಿಲ್ಲಿಂಗ್ ಈವ್' ವೆಬ್ ಸರಣಿಯ ಕೆಲವು ಸಂಚಿಕೆಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದಿವೆ. 'ನಿಯತ್' ಚಿತ್ರಕ್ಕೆ ಅನು ಮೆನನ್, ಪ್ರಿಯಾ ವೆಂಕಟರಾಮನ್, ಅದ್ವೈತ ಕಲಾ ಮತ್ತು ಗೀರ್ವಾಣಿ ಧ್ಯಾನಿ ಚಿತ್ರಕಥೆ ಹಾಗೂ ಕೌಸರ್ ಮುನೀರ್ ಸಂಭಾಷಣೆ ಬರೆದಿದ್ದಾರೆ.

ಪಾರ್ಟಿಯಲ್ಲಿ ನಡೆಯುವ ನಿಗೂಢ ಕೊಲೆಗಳನ್ನು ತನಿಖೆ ಮಾಡುವ ಪತ್ತೇದಾರಿ ಪಾತ್ರದಲ್ಲಿ ವಿದ್ಯಾಬಾಲನ್ ಕಾಣಿಸಿಕೊಂಡಿದ್ದು, ಚಿತ್ರವು ನಿಗೂಢತೆಯಿಂದ ಕೂಡಿದೆ.

ವಿದ್ಯಾಬಾಲನ್ ‘ನಿಯತ್’ ಚಿತ್ರದ ಮೂಲಕ ಥಿಯೇಟರ್ಗಳಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರದ ಟೀಸರ್ ಪೋಸ್ಟರ್ ಅನ್ನು ನಿರ್ಮಾಪಕರು ಬಿಡುಗಡೆ ಮಾಡಿದರು, ಜುಲೈ 7 ರಂದು 'ನಿಯತ್' ಚಿತ್ರ ವಿಶ್ವದಾದ್ಯಂತ ತೆರೆ ಕಾಣಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.