ಬಣ್ಣದ ಲೋಕದಲ್ಲಿ ನಟೀಮಣಿಯರ ಯಶಸ್ಸಿನ ಹಾದಿ ತುಸು ಕಡಿಮೆಯೇ. ಹೀರೊಗಳಷ್ಟು ಅವರಿಗೆ ಅದೃಷ್ಟ ಒಲಿಯುವುದಿಲ್ಲ. ಮೂವತ್ತು ವರ್ಷ ದಾಟಿದ ತಕ್ಷಣ ಪೋಷಕ ಪಾತ್ರಗಳಿಗೆಯೇ ಅವರನ್ನು ಸೀಮಿತಗೊಳಿಸುವುದು ಹೆಚ್ಚು. ಆದರೆ, ಚಿತ್ರರಂಗದಲ್ಲಿ ತಮ್ಮದೇ ಆದ ನಟನೆಯ ಚಾಪು ಮೂಡಿಸಿರುವ ಕೆಲವು ನಟಿಯರಿಗೆ ಈ ಮಾತು ಅನ್ವಯಿಸುವುದಿಲ್ಲ.

ವೃತ್ತಿಬದುಕಿನಲ್ಲಿ ಹೀರೊಯಿನ್ ಆಗಿ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ ಕೆಲವು ನಟಿಯರು ಅಚಾನಕ್ ಆಗಿ ಐಟಂ ಸಾಂಗ್‌ಗಳಿಗೆ ಹೆಜ್ಜೆ ಹಾಕಿ ಮತ್ತೆ ಅವಕಾಶಗಳಿಲ್ಲದೇ ತೆರೆಮರೆಗೆ ಸರಿದ ಉದಾಹರಣೆಗಳು ಸಾಕಷ್ಟಿವೆ. ಈ ಪಟ್ಟಿಗೆ ನಟಿ ಹೆಬಾ ಪಟೇಲ್ ಹೊಸ ಸೇರ್ಪಡೆ. ಯಾರು ಈ ಹೆಬಾ ಎಂದು ಹೆಚ್ಚಿಗೆ ತಲೆಕೆಡಿಸಿಕೊಳ್ಳಬೇಡಿ. ನಂದ ಕಿಶೋರ್ ನಿರ್ದೇಶನದ ‘ಅಧ್ಯಕ್ಷ’ ಸಿನಿಮಾದಲ್ಲಿ ನಟ ಶರಣ್ ಜೊತೆಗೆ ಹೆಜ್ಜೆಹಾಕಿದ್ದ ಮುಂಬೈ ಬೆಡಗಿಯೇ ಈ ಹೆಬಾ ಪಟೇಲ್.

‘ಅಧ್ಯಕ್ಷ’ ಚಿತ್ರದ ಯಶಸ್ಸಿನ ಬಳಿಕ ಹೆಬಾ ಹಾರಿದ್ದು ಟಾಲಿವುಡ್‌ಗೆ. ತೆಲುಗಿನಲ್ಲಿ ಅವರು ನಟಿಸಿದ ಮೊದಲ ಚಿತ್ರ ‘ಕುಮಾರಿ 21ಎಫ್’. 2015ರಲ್ಲಿ ತೆರೆಕಂಡ ಈ ಚಿತ್ರದಲ್ಲಿನ ಆಕೆಯ ನಟನೆ ಕಂಡು ಎಲ್ಲರೂ ಬೆರಗಾಗಿದ್ದರು. ಆದರೆ, ಮೊದಲ ಚಿತ್ರದಷ್ಟು ಕ್ರೇಜ್ ಉಳಿಸಿಕೊಳ್ಳಲು ಆಕೆ ಎಡವಿದ್ದು ದಿಟ.

ಅವಕಾಶಗಳ ನಿರೀಕ್ಷೆಯಲ್ಲಿದ್ದ ಅವರು ಇತ್ತೀಚೆಗೆ ತೆರೆಕಂಡ ನಿತಿನ್ ನಟನೆಯ ‘ಭೀಷ್ಮ’ ಚಿತ್ರದಲ್ಲಿ ಅತಿಥಿ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಈ ಚಿತ್ರದಲ್ಲಿನ ಆಕೆಯ ಗ್ಲಾಮರ್ ಲುಕ್ ಕಂಡು ಅಭಿಮಾನಿಗಳು ಬೇಸರಪಟ್ಟಿದ್ದಾರಂತೆ. ಆದರೆ, ಗ್ಲಾಮರ್ ಪ್ರಿಯರು ಆಕೆಯ ಲುಕ್‌ಗೆ ಫಿದಾ ಆಗಿರುವುದು ಸುಳ್ಳೇನಲ್ಲ. ಮತ್ತೊಂದೆಡೆ ಈ ಅತಿಥಿ ಪಾತ್ರವೇ ಹೆಬಾ ಅವರನ್ನು ‘ಐಟಂ ಸಾಂಗ್’ಗಳಿಷ್ಟೇ ಸೀಮಿತಗೊಳಿಸುತ್ತಿರುವುದು ಆಕೆಯ ಅಭಿಮಾನಿಗಳಲ್ಲಿ ಕೋಪಕ್ಕೆ ಕಾರಣವಾಗಿದೆ. ಮತ್ತೊಂದೆಡೆ ರಾಮ್ ಪೋನಿನೇನಿ ನಟನೆಯ ‘ರೆಡ್’ ಚಿತ್ರದಲ್ಲಿ ಐಟಂ ಸಾಂಗ್‌ವೊಂದಕ್ಕೆ ಆಕೆಗೆ ಆಫರ್ ಬಂದಿದೆ.

ಸದ್ಯಕ್ಕೆ ಹೆಬಾ ಕೈಯಲ್ಲಿ ಯಾವುದೇ ಹೊಸ ಸಿನಿಮಾಗಳಿಲ್ಲ. ಈ ಐಟಂ ಸಾಂಗ್ ಅವಕಾಶವೇ ಆಕೆಗೆ ಹೊಸ ಅವಕಾಶಗಳಿಗೆ ಹೆಬ್ಬಾಗಿಲು ತೆರೆಯಲಿದೆ ಎನ್ನುವುದು ಆಕೆಯ ಅಭಿಮಾನಿಗಳ ಇಂಗಿತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.