ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ತಮ್ಮ ‘ಮಿ. ನಟ್ವರ್ಲಾಲ್’ ಚಿತ್ರದ ಸಮಯದಲ್ಲಿನ ಸಂಗೀತಾಭಾಸ್ಯದಲ್ಲಿ ತೊಡಗಿದ್ದ ಫೋಟೊವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೊದಲ್ಲಿ ಅಮಿತಾಬ್ ಜೊತೆಗೆ ಪುಟ್ಟ ಹುಡುಗ ಹೃತಿಕ್ ರೋಶನ್ ಹಾಗೂ ಅವರ ಚಿಕ್ಕಪ್ಪ ಸಂಗೀತ ನಿರ್ದೇಶಕ ರಾಜೇಶ್ ರೋಷನ್ ಇದ್ದಾರೆ.

ಈ ಫೋಟೊದೊಂದಿಗೆ ಶೀರ್ಷಿಕೆ ಬರೆದುಕೊಂಡಿರುವ ಅಮಿತಾಬ್ ‘ನಾನು ಮೊದಲ ಬಾರಿ ಮಿ. ನಟ್ವರ್ಲಾಲ್ ಚಿತ್ರಕ್ಕಾಗಿ ಮೇರೆ ಪಾಸ್ ಆವೊ ಹಾಡು ಹಾಡಿದ್ದೆ. ಸಂಗೀತ ನಿರ್ದೇಶಕ ರಾಜೇಶ್ ರೋಶನ್ ಸಂಗೀತಾಭ್ಯಾಸ ಮಾಡಿಸುತ್ತಿದ್ದರು. ಈ ಎಲ್ಲದರ ಜೊತೆ ತಮ್ಮ ಪಕ್ಕದಲ್ಲಿ ಕುರ್ಚಿಯಲ್ಲಿ ಕುಳಿತಿರುವ ಆ ಪುಟ್ಟ ಹುಡುಗ ಹೃತಿಕ್ ರೋಶನ್’ ಎಂದಿದ್ದಾರೆ.

‘ಮೇರೆ ಪಾಸ್ ಆವೊ ಮೇರೆ ದೋಸ್ತೊ’ ಹಾಡನ್ನು ಅಮಿತಾಬ್ ಮೊದಲ ಬಾರಿಗೆ ಸಿನಿಮಾಕ್ಕಾಗಿ ಹಾಡಿದ್ದರು. ಅಮಿತಾಬ್ ಚಿತ್ರದಲ್ಲಿ ಮಕ್ಕಳಿಗಾಗಿ ಈ ಹಾಡನ್ನು ಹಾಡಿದ್ದರು. ಮಿ. ನಟ್ವರ್ಲಾಲ್ ಸಿನಿಮಾ 1979ರಲ್ಲಿ ಬಿಡುಗಡೆಯಾಗಿತ್ತು. ರೇಖಾ ಹಾಗೂ ಅಮಿತಾಬ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಈ ಸಿನಿಮಾವನ್ನು ರಾಕೇಶ್ ಕುಮಾರ್ ನಿರ್ದೇಶನ ಮಾಡಿದ್ದರು.

ಕಬಿ ಖುಷಿ ಕಬಿ ಗಮ್, ಲಕ್ಷ್ಯ ಸಿನಿಮಾಗಳಲ್ಲಿ ಅಮಿತಾಬ್ ಹಾಗೂ ಹೃತಿಕ್ ಒಟ್ಟಾಗಿ ನಟಿಸಿದ್ದರು. ಕಬಿ ಖುಷಿ ಕಬಿ ಗಮ್ನಲ್ಲಿ ಹೃತಿಕ್ ತಂದೆಯಾಗಿ ಅಮಿತಾಬ್ ನಟಿಸಿದ್ದರು, ಯುದ್ಧ ಹಿನ್ನೆಲೆಯುಳ್ಳ ಲಕ್ಷ್ಯ ಸಿನಿಮಾದಲ್ಲಿ ಹೃತಿಕ್ ಅವರಿಗೆ ಕಮಾಂಡಿಗ್ ಅಧಿಕಾರಿಯಾಗಿ ನಟಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.