ಮುಂಬೈ: ಮುಂಬೈನ ಕ್ರೂಸ್ ಹಡಗಿನಲ್ಲಿ ನಡೆದಿದೆ ಎನ್ನಲಾದ ಡ್ರಗ್ಸ್ ಪಾರ್ಟಿಗೆ ಸಂಬಂಧಿಸಿದಂತೆ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿ ಏಳು ಜನರನ್ನು ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ದಳ (ಎನ್ಸಿಬಿ) ಬಂಧಿಸಿ ಅ 7ರವರೆಗೆ ತನ್ನ ವಶಕ್ಕೆ ತೆಗೆದುಕೊಂಡಿದೆ.

ಕಳೆದ ಭಾನುವಾರದಿಂದ ಬಾಲಿವುಡ್ ಸೇರಿದಂತೆ ರಾಷ್ಟ್ರೀಯ ಮಟ್ಟದಲ್ಲಿ ಈ ಸುದ್ದಿ ದೊಡ್ಡ ಚರ್ಚೆಯಾಗುತ್ತಿದೆ.ದೊಡ್ಡವರ ಮಕ್ಕಳ ಬಣ್ಣ ಬಯಲಾಗಿದೆ, ದೊಡ್ಡವರ ಮಕ್ಕಳ ಸಂಸ್ಕಾರ ಹೇಗಿರುತ್ತದೆ ನೋಡಿ ಎಂದು ಜಾಲತಾಣಗಳಲ್ಲಿ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ. ಅಲ್ಲದೇ ಬಾಲಿವುಡ್ನಲ್ಲಿ ಪೋಷಕರಿಗೆ ತಮ್ಮ ಮಕ್ಕಳ ಬಗ್ಗೆ ಎಚ್ಚೆತ್ತುಕೊಳ್ಳಲು ಇದೊಂದು ಕರೆ ಗಂಟೆ ಎಂದು ಹೇಳುತ್ತಿದ್ದಾರೆ.

ಅನೇಕರು ನೇರವಾಗಿ ಈ ವಿಚಾರದಲ್ಲಿ ಶಾರುಖ್ ಖಾನ್ ಅವರನ್ನೇ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಇನ್ನು ಈ ವಿಷಯವಾಗಿ ತಮ್ಮ ಅಭಿಪ್ರಾಯ ಹೊರಹಾಕಿರುವ ಹೃತಿಕ್ ರೋಷನ್ ಪತ್ನಿ ಹಾಗೂ ಫ್ಯಾಶನ್ ಡಿಸೈನರ್ ಸುಸಾನೆ ಖಾನ್ ಅವರು, ಆರ್ಯನ್ ಖಾನ್ ಒಳ್ಳೆಯ ಮಗು. ನನ್ನ ಬೆಂಬಲ ಆತನ ತಂದೆ ಶಾರುಖ್ ಹಾಗೂ ತಾಯಿ ಗೌರಿ ಖಾನ್ಗೆ ಇರುತ್ತದೆ ಎಂದು ಹೇಳಿದ್ದಾರೆ.

ಪತ್ರಕರ್ತರ ಒಬ್ಬರ ಪೋಸ್ಟ್ಗೆ ಇನ್ಸ್ಟಾಗ್ರಾಂನಲ್ಲಿ ಕಮೆಂಟ್ ಮಾಡಿರುವ ಸುಸಾನೆ ಖಾನ್ ಅವರು, ಇದು ಆರ್ಯನ್ಗೆ ಮಾತ್ರ ಸಂಬಂಧಿಸಿದ್ದಲ್ಲ. ಅವನು ದುರಾದೃಷ್ಟವಾಗಿ ತಪ್ಪಾದ ಜಾಗದಲ್ಲಿದ್ದಿದ್ದೇ ತಪ್ಪಾಗಿದೆ. ಇದೇ ಸಮಯ ಸಿಕ್ಕಿದೇ ಎಂದು ಬಾಲಿವುಡ್ ಮಂದಿಯನ್ನು ಹಣಿಯಲು ಕೆಲವರು ನೋಡುತ್ತಿದ್ದಾರೆ.ಆರ್ಯನ್ ಖಾನ್ ಒಳ್ಳೆಯ ಮಗು. ನನ್ನ ಬೆಂಬಲ ಆತನ ತಂದೆ ಶಾರುಖ್ ಹಾಗೂ ತಾಯಿ ಗೌರಿ ಖಾನ್ಗೆ ಇರುತ್ತದೆ ಎಂದು ಹೇಳಿದ್ದಾರೆ.

ಸುಶಾನ್ ಖಾನ್ ಅಭಿಪ್ರಾಯಕ್ಕೆ ಅನೇಕ ಜನ ವಿರೋಧ ವ್ಯಕ್ತಪಡಿಸಿದ್ದು, ಬಾಲಿವುಡ್ ಮಂದಿಯ ನಿಜ ಬಣ್ಣ ಈಗ ಹೊರಗೆ ಬರುತ್ತಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಇನ್ನೊಂದೆಡೆ ಆರ್ಯನ್ ಖಾನ್ ಮತ್ತು ಇತರ ಎಂಟು ಆರೋಪಿಗಳನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ಅಕ್ಟೊಬರ್ 7ರವರೆಗೆ ವಶಕ್ಕೆ ಪಡೆದಿರುವ ಎನ್ಸಿಬಿ, ವಾಟ್ಸ್ಆ್ಯಪ್ ಚಾಟ್ಗಳಲ್ಲಿ ಮಾದಕವಸ್ತು ಖರೀದಿಗಾಗಿ ಪಾವತಿ ವಿಧಾನಗಳು, ಡ್ರಗ್ಸ್ಗೆ ಹಲವಾರು ಕೋಡ್ ಹೆಸರುಗಳನ್ನು ಬಳಸಲಾಗುತ್ತಿದೆ ಎಂದು ಹೇಳಿದೆ. ಆದರೆ, ಆರ್ಯನ್ ಖಾನ್ ಅವರ ವಕೀಲರು ತಮ್ಮ ಕಕ್ಷಿದಾರನ ಬಳಿಯಿಂದ ಯಾವುದೇ ಮಾದಕ ದ್ರವ್ಯ ವಶಪಡಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಆರ್ಯನ್ ಖಾನ್ ವಾಟ್ಸ್ಆ್ಯಪ್ ಚಾಟ್ನಲ್ಲಿ ಆಘಾತಕಾರಿ ಅಂಶ ಪತ್ತೆ: ಎನ್ಸಿಬಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.