ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಮಗ ಆರ್ಯನ್ ಖಾನ್ ವಸ್ತ್ರ ಉದ್ಯಮಕ್ಕೆ ಕಾಲಿಟ್ಟಿದ್ದು, ಹೊಸ ಬಟ್ಟೆ ಬ್ರಾಂಡ್ ಒಂದನ್ನು ಹೊರತಂದಿದ್ದಾರೆ. ಈ ಬ್ರಾಂಡ್‌ನ ಬಟ್ಟೆಗಳ ಬೆಲೆ ನೋಡಿ ನೆಟ್ಟಿಗರು ಹೌಹಾರಿದ್ದು ‘ಕಿಡ್ನಿ ಸ್ವೀಕರಿಸುತ್ತಿರಾ?‘ ಎಂದು ಕಾಲೆಳಿದ್ದಾರೆ.

ಆರ್ಯನ್ ಖಾನ್ ತಮ್ಮ ಬ್ರಾಂಡ್‌ಗೆ ‘D'Yavol X‘ ಎಂದು ಹೆಸರಿಟ್ಟಿದ್ದಾರೆ. ತಂದೆ ಶಾರುಖ್ ಖಾನ್ ಸಹಿ ಮಾಡಿದ ಲೆದರ್ ಜಾಕೆಟ್ ಜೊತೆಗೆ ಇನ್ನಿತರ ಬಟ್ಟೆಗಳನ್ನು ಮಾರುಕಟ್ಟೆಗೆ ಬಿಟ್ಟಿದ್ದರು. ಲೆದರ್ ಜಾಕೆಟ್‌ವೊಂದರ ಬೆಲೆ ₹2 ಲಕ್ಷವಾಗಿದೆ. ಟೀ ಶರ್ಟ್‌ವೊಂದರ ಬೆಲೆ ₹22 ಸಾವಿರದಿಂದ ಪ್ರಾರಂಭವಾಗಿ ₹24 ಸಾವಿರದವರೆಗೂ ಇದೆ. ಹುಡಿಗಳ(Hoodies) ಬೆಲೆ ₹45 ಸಾವಿರವಿದೆ. ಬಟ್ಟೆಗಳ ಬೆಲೆ ನೋಡಿ ನೆಟ್ಟಿಗರು ಆರ್ಯನ್ ಖಾನ್ ಅವರನ್ನು ಟ್ರೋಲ್ ಮಾಡಿದ್ದಾರೆ. ಭಾರತದಲ್ಲಿ ಬಿಲಿಯನೇರ್‌ಗಳಿಗಿಂತ ಬಡವರು ಜಾಸ್ತಿಯಿದ್ದಾರೆ ಎಂದು ಆರ್ಯನ್ ಖಾನ್‌ಗೆ ನೆನಪಿಸಿದ್ದಾರೆ.

‘ಮಾರುಕಟ್ಟೆಯಲ್ಲಿರುವ ಇತರ ಬ್ರಾಂಡ್‌ಗಳನ್ನು ನೋಡಿ ಆರ್ಯನ್ ಕಲಿಯುವುದು ಬಹಳವಿದೆ. ಬಿಸಿನೆಸ್ ಅನ್ನುವುದು ಸಾಮಾನ್ಯ ವಿಷಯವಲ್ಲ. ವಿರಾಟ್ ಕೊಹ್ಲಿ, ಹೃತಿಕ್ ರೋಷನ್, ಸಲ್ಮಾನ್ ಖಾನ್ ಬಟ್ಟೆ ಬ್ರಾಂಡ್‌ಗಳನ್ನು ನೋಡಿ ಕಲಿಯಿರಿ‘ ಎಂದು ನೆಟ್ಟಿಗರೊಬ್ಬರು ಸಲಹೆ ನೀಡಿದ್ದಾರೆ. ಇಷ್ಟೊಂದು ಹಣಕೊಟ್ಟು ಒಂದು ಜಾಕೆಟ್ ಖರೀದಿಸುವುದು ‘ವೇಸ್ಟ್ ಆಫ್ ಮನಿ‘ ಎಂದು ಕಾಮೆಂಟ್ ಮಾಡಿದ್ದಾರೆ.

ಆರ್ಯನ್ ಖಾನ್ ತಮ್ಮ ಬಟ್ಟೆ ಬ್ರಾಂಡ್‌ನ ಜಾಹೀರಾತನ್ನು ತಾವೇ ಚಿತ್ರಿಸಿದ್ದು, ಶಾರುಖ್ ಖಾನ್ ಇದರಲ್ಲಿ ಕಾಣಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.