ನಟಿ ಆಶಿಕಾ ರಂಗನಾಥ್ ಮತ್ತು ಇಶಾನ್ ಜೋಡಿಯ "ರೇಮೊ" ಚಿತ್ರ ನವೆಂಬರ್ 25 ರಂದು ಬಿಡುಗಡೆಯಾಗಲಿದೆ.ಹಿಂದಿನ ಚಿತ್ರದಲ್ಲಿ ಪವನ್ ಒಡೆಯರ್ಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿರಲಿಲ್ಲ. ಹೀಗಾಗಿ ಈ ಸಲ ಹೊಸ ನಟನೊಂದಿಗೆ ಬೇರೆಯದೇ ರೀತಿಯ ಕಥೆಯೊಂದಿಗೆ ಬಂದಿದ್ದಾರೆ.

ಸಿ.ಆರ್. ಮನೋಹರ್ ನಿರ್ಮಿಸಿ, ಪವನ್ ಒಡೆಯರ್ ನಿರ್ದೇಶನದ ಸಂಗೀತಮಯ ಪ್ರೇಮಕಥೆ ಇದಾಗಿದೆ. ‘ನಾನು ಮೊದಲ ಬಾರಿ ಇಶಾನ್ ಅವರನ್ನು ಭೇಟಿ ಮಾಡಿದ್ದು ದುಬೈನಲ್ಲಿ. ನೋಡಲು ಚೆನ್ನಾಗಿರುವ ಇವರನ್ನು ನಾಯಕನನ್ನಾಗಿ ಮಾಡಬೇಕು ಅಂದು ಕೊಂಡೆ. ನಂತರ "ರೇಮೊ" ಚಿತ್ರದ ಕಥೆ ಬರೆದೆ. 2019ರಲ್ಲಿ ಚಿತ್ರೀಕರಣ ಬೆಂಗಳೂರಿನಲ್ಲಿ ಆರಂಭವಾಯಿತು. ಆನಂತರ ಹೈದರಾಬಾದ್, ಜಮ್ಮು-ಕಾಶ್ಮೀರ, ದಕ್ಷಿಣ ಆಫ್ರಿಕಾ, ಸಿಂಗಾಪುರ ಮುಂತಾದ ಕಡೆ ಚಿತ್ರೀಕರಣ ನಡೆಸಲಾಯಿತು. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಸಂಗೀತ ನೀಡಿರುವ ಆರು ಅದ್ಭುತ ಹಾಡುಗಳು ಈ ಚಿತ್ರದಲ್ಲಿದೆ’ ಎಂದು ನಿರ್ದೇಶಕ ಪವನ್ ಒಡೆಯರ್ ಹೇಳಿದ್ದಾರೆ.

ವೈದಿ ಅವರ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ. ಸದ್ಯದಲ್ಲೇ ಲಿರಿಕಲ್ ಸಾಂಗ್ ಬಿಡುಗಡೆಯೊಂದಿಗೆ ಚಿತ್ರದ ಪ್ರಚಾರ ಕಾರ್ಯ ಆರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.