ಸಚಿನ್ ರವಿ ನಿರ್ದೇಶನದ ರಕ್ಷಿತ್ ಶೆಟ್ಟಿ ನಟನೆಯ ‘ಅವನೇ ಶ್ರೀಮನ್ನಾರಾಯಣ‘ ಚಿತ್ರ ಸಾಕಷ್ಟು ಕುತೂಹಲ ಹೆಚ್ಚಿಸಿದೆ. ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳದಲ್ಲಿ ಈ ಚಿತ್ರ ತೆರೆ ಕಾಣುತ್ತಿದೆ. ಈಗಾಗಲೇ, ಚಿತ್ರದ ಟ್ರೇಲರ್ ಬಿಡುಗಡೆಗೊಂಡಿದ್ದು ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಡಿಸೆಂಬರ್ 27ರಂದು ಈ ಚಿತ್ರ ಬಿಡುಗಡೆಯಾಗುತ್ತಿದೆ.

ಬಿಡುಗಡೆಯ ಪೂರ್ವ ಸಿದ್ಧತೆಯಲ್ಲಿ ತೊಡಗಿರುವ ಚಿತ್ರತಂಡ ಡಿಸೆಂಬರ್ 12ರಂದು ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಲಿದೆ. ನಾಗಾರ್ಜುನ ಶರ್ಮ ಬರೆದಿರುವ ಈ ‘ಹ್ಯಾಂಡ್ಸ್ ಅಪ್’ ಸಾಂಗ್ಗೆ ಅಜನೀಶ್ ಬಿ. ಲೋಕೇಶ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದ ನಾಲ್ಕೂ ಹಾಡುಗಳನ್ನು ನಾಗಾರ್ಜುನ ಶರ್ಮ ಅವರೇ ಬರೆದಿರುವುದು ವಿಶೇಷ.

‘ನಾರಾಯಣನ ಪಾತ್ರಕ್ಕೆ ತಕ್ಕಂತೆ ಈ ಹಾಡು ಹೊಸೆಯಲಾಗಿದೆ. ಇದರಲ್ಲಿ ರಕ್ಷಿತ್ ಶೆಟ್ಟಿ ಅವರ ಅಭಿನಯವೂ ಸೊಗಸಾಗಿದೆ’ ಎಂದು ಹೇಳಿದ್ದಾರೆ ನಾಗಾರ್ಜುನ ಶರ್ಮ.

ಹೀರೊಗಳ ಪ್ರವೇಶಕ್ಕೆ ಸೀಮಿತಗೊಳಿಸಿ ಹಾಡು ಬರೆಯುವುದು ಹೊಸದೇನಲ್ಲ. ಈ ಹಾಡಿನಲ್ಲಿಯೂ ರಕ್ಷಿತ್ ಶೆಟ್ಟಿ ಅವರ ಪೊಲೀಸ್ ಅಧಿಕಾರಿಯ ಪಾತ್ರಕ್ಕೆ ತಕ್ಕಂತೆ ಸೆಟ್ ಅಳವಡಿಸಿ ಚಿತ್ರೀಕರಿಸಲಾಗಿದೆಯಂತೆ. ಕಥೆಗೆ ಪೂರಕವಾಗಿ ಈ ಹಾಡು ಇದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.