ಮುಂಬೈ: ಸಂಗೀತ ಸಂಯೋಜಕ ಹಾಗೂ ಗಾಯಕ ಬಪ್ಪಿ ಲಹಿರಿ(69) ಅವರು ಮುಂಬೈನಲ್ಲಿ ಮಂಗಳವಾರ ರಾತ್ರಿ ನಿಧನರಾಗಿದ್ದಾರೆ.

ಬಪ್ಪಿ ಲಹಿರಿಗೆ ಚಿಕಿತ್ಸೆ ನೀಡಿದ ವೈದ್ಯ ದೀಪಕ್ ನಾಮಜೋಶಿ ಅವರು ಡಿಸ್ಕೊ ಕಿಂಗ್ ಕುರಿತು ಕುತೂಹಲಕರ ವಿಚಾರವೊಂದನ್ನು ಬಿಚ್ಚಿಟ್ಟಿದ್ದಾರೆ.

‘ಬಪ್ಪಿ ದಾ ಅವರು ನನಗಾಗಿ ಹಾಡುತ್ತಿದ್ದರು ಮತ್ತು ನನಗೆ ಅನೇಕ ಕಥೆಗಳನ್ನು ಹೇಳುತ್ತಿದ್ದರು. ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕ ನನ್ನ ನೆಚ್ಚಿನ ‘ಮುಂಬೈ ಸೇ ಆಯಾ ಮೇರಾ ದೋಸ್ತ್’ ಹಾಡನ್ನು ಹಾಡುತ್ತೇನೆ ಎಂದಿದ್ದರು’ ಎಂದು ವೈದ್ಯ ಜೋಶಿ ತಿಳಿಸಿದ್ದಾರೆ.

‘ಸುಮಾರು ಒಂದು ತಿಂಗಳ ಕಾಲ ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು ಫೆಬ್ರುವರಿ 15 ರಂದು ಡಿಸ್ಚಾರ್ಜ್ ಮಾಡಲಾಯಿತು. ಅದೇ ದಿನ ಅವರನ್ನು ಮತ್ತೆ ಆಸ್ಪತ್ರೆಗೆ ಕರೆತರಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಬಪ್ಪಿ ಮೃತಪಟ್ಟರು’ ಎಂದು ಜೋಶಿ ಮೆಲುಕು ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.