ವರನಟ, ಗಾನ ಗಂಧರ್ವ, ಪದ್ಮಭೂಷಣ, ಕರ್ನಾಟಕ ರತ್ನ ಡಾ. ರಾಜ್ ಕುಮಾರ್ ಅವರ ಪುಣ್ಯತಿಥಿಯಂದು ಆ ಅಪ್ರತಿಮ ಕಲಾವಿದನಿಗೆ ಅಭಿಮಾನಪೂರ್ವಕ ನಮನಗಳು. ಕನ್ನಡ ಚಿತ್ರರಂಗ ಮಾತ್ರವಲ್ಲ, ನಾಡು ನುಡಿಗಾಗಿ ಅವರು ಸಲ್ಲಿಸಿರುವ ಕೊಡುಗೆ, ಅವರ ವ್ಯಕ್ತಿತ್ವ, ಅವರ ಸಾಧನೆಗಳೆಲ್ಲವೂ, ಪ್ರತಿಯೊಬ್ಬ ಕನ್ನಡಿಗನ ಹೃದಯದಲ್ಲಿ ಚಿರಸ್ಥಾಯಿಯಾಗಿದೆ. pic.twitter.com/oyGQnrLg6O
— B.S.Yediyurappa (@BSYBJP) April 12, 2022
ಕನ್ನಡಿಗರ ಹೆಮ್ಮೆ, ಕಲಾಸರಸ್ವತಿಯ ವರಪುತ್ರ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ಕರ್ನಾಟಕ ರತ್ನ ಡಾ.ರಾಜ್ ಕುಮಾರ್ ಅವರ ಪುಣ್ಯಸ್ಮರಣೆಯಂದು ಅವರಿಗೆ ಅಭಿಮಾನಪೂರ್ವಕ ನಮನಗಳು.
— Basavaraj S Bommai (@BSBommai) April 12, 2022
ಕೋಟ್ಯಂತರ ಅಭಿಮಾನಿಗಳ ಪಾಲಿನ ಅಣ್ಣಾವ್ರು ಕನ್ನಡಿಗರ ಹೃದಯಮಂದಿರದಲ್ಲಿ ಚಿರಸ್ಥಾಯಿಯಾಗಿದ್ದಾರೆ. pic.twitter.com/lZvDnakNXG
ಕರ್ನಾಟಕದ ಕಣ್ಮಣಿ, ಕನ್ನಡದ ಅಸ್ಮಿತೆ, ನಮ್ಮ ನೆಲದ ಸಾಕ್ಷಿಪ್ರಜ್ಞೆ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರು, ವರನಟ, ಪದ್ಮಭೂಷಣ ಡಾ.ರಾಜ್ ಕುಮಾರ್ ಅವರ ಪುಣ್ಯಸ್ಮರಣೆ ದಿನದಂದು ಆ ಮೇರುನಟನಿಗೆ ನನ್ನ ಗೌರವ ಪ್ರಣಾಮಗಳು. pic.twitter.com/UyTqi70EUm
— H D Kumaraswamy (@hd_kumaraswamy) April 12, 2022
ದೂರದೃಷ್ಟಿಯ ಆಡಳಿತಗಾರ, ದೇಶದ ಎಂಜಿನಿಯರಿಂಗ್ ಹಾಗೂ ತಂತ್ರಜ್ಞಾನ ಕ್ಷೇತ್ರವನ್ನು ಅಗಾಧ ರೀತಿಯಲ್ಲಿ ಬೆಳೆಸಿದ ತಾಂತ್ರಿಕ ಪರಿಣತ ಭಾರತರತ್ನ ಶ್ರೀ ಸರ್ ಎಂ.ವಿಶ್ವೇಶ್ವರಯ್ಯನವರ ಪುಣ್ಯತಿಥಿಯಂದು ಗೌರವದ ಕೋಟಿ ಪ್ರಣಾಮಗಳು. ನಾಡಿಗೆ ಆಧುನಿಕ ರೂಪ ನೀಡುವಲ್ಲಿ ಅವರ ಶ್ರಮ, ಸೇವೆ ಅಗಣಿತವಾಗಿದೆ.#SirMVishweshwaraiah pic.twitter.com/9nG8uBzDuN
— Araga Jnanendra (@JnanendraAraga) April 12, 2022
ಅಭಿನಯದಲ್ಲಿ ನಟಸಾರ್ವಭೌಮ, ವ್ಯಕ್ತಿತ್ವದಲ್ಲಿ ಬಂಗಾರದ ಮನುಷ್ಯ. ಹೀಗೆಂದರೆ ಕನ್ನಡಿಗರಿಗೆ ನೆನಪಾಗುವುದು ವರನಟ ಡಾ.ರಾಜ್ ಕುಮಾರ್.
— Dr Sudhakar K (@mla_sudhakar) April 12, 2022
ಡಾ.ರಾಜ್ ಅವರು ನಮ್ಮನ್ನಗಲಿ ಇಂದಿಗೆ 16 ವರ್ಷ. ಸಾಂಸ್ಕೃತಿಕ ರಾಯಭಾರಿಯಾಗಿ ನಮ್ಮ ನಾಡು-ನುಡಿಗೆ ಅವರ ಸೇವೆ ಅಪಾರ. ಅಭಿಮಾನಿ ದೇವರುಗಳ ಪಾಲಿನ ಪ್ರೀತಿಯ ಅಣ್ಣಾವ್ರು ಕನ್ನಡಿಗರ ಜನಮಾನಸದಲ್ಲಿ ಎಂದಿಗೂ ಅಜರಾಮರ. pic.twitter.com/71rqp75vca
ಕನ್ನಡ ನಾಡಿನ ಹೆಗ್ಗುರುತುಗಳಲ್ಲಿ ಡಾ.ರಾಜ್ಕುಮಾರ್ ಅವರು ಪ್ರಮುಖರಾದವರು. ನಟನಾಗಿ-ಗಾಯಕನಾಗಷ್ಟೇ ಅಲ್ಲದೆ ನಾಡು-ನುಡಿಗಾಗಿ ಹೋರಾಟವನ್ನೂ ಮಾಡಿದ ಮಹಾನ್ ಚೇತನ ನಮ್ಮೆಲ್ಲರ ಪ್ರೀತಿಯ ಅಣ್ಣಾವ್ರು. ಡಾ.ರಾಜ್ಕುಮಾರ್ ಅವರ ನೆನಪು ಅಭಿಮಾನಿಗಳ ಹೃದಯದಲ್ಲಿ ಹಚ್ಚಹಸಿರು. ಅವರ ಪುಣ್ಯಸ್ಮರಣಾ ದಿನದಂದು ಹೃದಯಪೂರ್ವಕ ನಮನಗಳು. pic.twitter.com/JW3TPQ2c8R
— DK Shivakumar (@DKShivakumar) April 12, 2022
Good morning
— Raghavendra Rajkumar (@RRK_Official_) April 11, 2022
Have a blessed day
Take care
Jai Anjeneya
Jai Gurudev 🙏🙏🙏 pic.twitter.com/MNlC5fMkEv
ಕರ್ನಾಟಕದ ಕಣ್ಮಣಿ, ಕನ್ನಡದ ಅಸ್ಮಿತೆ, ನಮ್ಮ ನೆಲದ ಸಾಕ್ಷಿಪ್ರಜ್ಞೆ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರು, ವರನಟ, ಪದ್ಮಭೂಷಣ ಡಾ.ರಾಜ್ ಕುಮಾರ್ ಅವರ ಪುಣ್ಯಸ್ಮರಣೆ ದಿನದಂದು ಆ ಮೇರುನಟನಿಗೆ ನನ್ನ ಗೌರವ ಪ್ರಣಾಮಗಳು. pic.twitter.com/UyTqi70EUm
— H D Kumaraswamy (@hd_kumaraswamy) April 12, 2022
ಕನ್ನಡಿಗರ ಮನದಾಳದಲ್ಲಿ ಶಾಶ್ವತವಾಗಿ ನೆಲೆಮಾಡಿರುವ ನಮ್ಮೆಲ್ಲರ ನಲ್ಮೆಯ ವರನಟ ಅಣ್ಣಾವ್ರು ಡಾ||ರಾಜ್ ಕುಮಾರ್ ರವರ ಪುಣ್ಯಸ್ಮರಣೆಯ ಪ್ರಯುಕ್ತ ಅಭಿಮಾನಪೂರ್ವಕ ನಮನಗಳು. pic.twitter.com/gCtk3M7Lbn
— Darshan Thoogudeepa (@dasadarshan) April 12, 2022
ಇಂದು ನನ್ನ ಕಲಾದೇವರ ಪುಣ್ಯಸ್ಮರಣೆಯ ದಿನ.
— ನವರಸನಾಯಕ ಜಗ್ಗೇಶ್ (@Jaggesh2) April 12, 2022
ಅವರ ನಾನು ಕಳಿಸಿಕೊಟ್ಟ ಕಡೆ ದಿನ ಇದಾಗಿತ್ತು.ಅವರ ಪಾರ್ಥಿವ ದೇಹ ಜನಜಂಗುಳಿಯಿಂದ ತಪ್ಪಿಸಿ ಸ್ಯಾಂಕಿ ಟ್ಯಾಂಕ್ ಬಳಿ 1/2ಗಂಟೆ ನಿಲ್ಲಿಸಿ ಅವರ ಒಡನಾಟ ಪ್ರೀತಿ ಹಾರೈಕೆ ನೆನೆದು ಭಾವುಕನಾಗಿ ನಂತರ ಪುನೀತನಿಗೆ ದೇಹ ಒಪ್ಪಿಸಿ ಮನೆಗೆ ರಾತ್ರಿ 12ಕ್ಕೆ ಹೋದೆ..ಇತಿಹಾಸ ಪುರುಷ ಗುರುವಿಗೆ ನಮನಗಳು🙏 pic.twitter.com/rYssjh124r
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.