‘ಬಾಯ್ ಫ್ರೆಂಡ್’ ಸೇರಿದಂತೆ ಕೆಲ ಸಿನಿಮಾಗಳನ್ನು ನಿರ್ದೇಶಿಸಿದ್ದ ರಾಮ್ ಜನಾರ್ದನ್ ಅವರ ‘ಭಗೀರಥ’ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ ಸುರೇಶ್ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

‘ಚಿತ್ರೀಕರಣ ಮುಕ್ತಾಯವಾಗಿ, ಮಂದಿನ ತಿಂಗಳಲ್ಲಿ ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ. ನನ್ನ ನಿರ್ದೇಶನದ ಐದನೇ ಚಿತ್ರ. ಇದೊಂದು ಪ್ರಸ್ತುತ ರಾಜಕಾರಣದ ಕಥಾಹಂದರ ಹೊಂದಿರುವ ಹಾಗೂ ಪತ್ರಕರ್ತರೊಬ್ಬರ ಸುತ್ತ ನಡೆಯುವ ಕಥೆ. ತುಂಬಾ ಅಸಾಧ್ಯವಾದ್ದುದ್ದನ್ನು ಕಷ್ಟಪಟ್ಟು ಸಾಧ್ಯವಾಗಿಸಿದರೆ ಅದನ್ನು ‘ಭಗೀರಥ’ ಪ್ರಯತ್ನ ಎನ್ನುತ್ತಾರೆ. ಅಂತಹ ಕಥೆ ಈ ಚಿತ್ರದಲ್ಲಿದೆ’ ಎಂದರು ನಿರ್ದೇಶಕರು.

ಸಾಯಿ ರಮೇಶ್ ಪ್ರೊಡಕ್ಷನ್ ಲಾಂಛನದಲ್ಲಿ ಕೆ.ರಮೇಶ್ ಹಾಗೂ ಬಿ.ಬೈರಪ್ಪ ಮೈಸೂರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಜಯಪ್ರಕಾಶ್‌ಗೆ ಜೋಡಿಯಾಗಿ ಶ್ರೀಯಾ ಪಾವನಿ ಕಾಣಿಸಿಕೊಂಡಿದ್ದಾರೆ.

‘ಪತ್ರಿಕೋದ್ಯಮ ಮುಗಿಸಿ ಪತ್ರಕರ್ತನಾಗಿದ್ದ ನಾನು, ‘ಜಮಾನ’ ಚಿತ್ರದ ಮೂಲಕ ನಟನಾದೆ. ಇದು ನನ್ನ ಮೂರನೆ ಚಿತ್ರ. ಶೀರ್ಷಿಕೆಗೆ ತಕ್ಕಂತೆ ನೀರಿಗೆ ಸಂಬಂಧಿಸಿದ ಕಥೆಯೂ ಈ ಚಿತ್ರದಲ್ಲಿದೆ’ ಎಂದು ನಾಯಕ ಜಯಪ್ರಕಾಶ್ ಹೇಳಿದರು.

ಚಂದನ ರಾಘವೇಂದ್ರ, ಸುಧಾ ಬೆಳವಾಡಿ, ಶಿವರಾಜ್ ಕೆ.ಆರ್ ಪೇಟೆ, ರವಿಕಾಳೆ, ಶ್ರೀನಿವಾಸಪ್ರಭು, ಬಲ ರಾಜವಾಡಿ, ನಯನ, ಸುರಭಿ ರವಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.