ಗೀತಾ ಶಿವರಾಜ್ಕುಮಾರ್ ಅವರು ತಮ್ಮ ‘ಗೀತಾ ಪಿಕ್ಚರ್ಸ್’ ಲಾಂಛನದಲ್ಲಿ ನಿರ್ಮಾಣ ಮಾಡುತ್ತಿರುವ ‘ಭೈರತಿ ರಣಗಲ್’ ಸಿನಿಮಾದ ಶೂಟಿಂಗ್ ಭರ್ಜರಿಯಾಗಿ ಸಾಗುತ್ತಿದೆ. ಇದೇ ಸಂದರ್ಭದಲ್ಲಿ ಗೀತಾ ಅವರ ಜನ್ಮದಿನದಂದು ಚಿತ್ರದ ಮೇಕಿಂಗ್ ವಿಡಿಯೊವನ್ನು ನಟ ಶಿವರಾಜ್ಕುಮಾರ್ ಹಂಚಿಕೊಂಡಿದ್ದಾರೆ.

ನರ್ತನ್ ಆ್ಯಕ್ಷನ್ ಕಟ್ ಹೇಳಿರುವ ಚಿತ್ರದ ದೃಶ್ಯಗಳು ‘ಮಫ್ತಿ’ಯನ್ನು ಮೀರಿಸಿದೆ. ‘ಮಫ್ತಿ’ ಚಿತ್ರದಲ್ಲಿ ಶಿವರಾಜ್ಕುಮಾರ್ ಅವರು ಬಣ್ಣಹಚ್ಚಿದ್ದ ‘ಭೈರತಿ ರಣಗಲ್’ ಪಾತ್ರ ಇಂದಿಗೂ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚೊತ್ತಿದೆ. ಇದೇ ‘ಮಫ್ತಿ’ಯ ಪ್ರೀಕ್ವೆಲ್ ಈ ಸಿನಿಮಾ. ಶಿವರಾಜ್ಕುಮಾರ್ ‘ಭೈರತಿ ರಣಗಲ್’ ಆಗಿದ್ದು ಹೇಗೆ ಎನ್ನುವ ಕಥೆ ಹೊತ್ತು ಬರಲಿದೆ ಸಿನಿಮಾ. ‘‘ಭೈರತಿ ರಣಗಲ್’ ಗ್ಯಾಂಗ್ಸ್ಟರ್ ಆಗಿದ್ದು ಹೇಗೆ? ಆ ಕಪ್ಪು ಬಟ್ಟೆಯನ್ನು ಯಾಕೆ ಹಾಕುತ್ತಾರೆ ಎನ್ನುವುದೇ ಚಿತ್ರದ ಕಥೆ’ ಎಂದು ಈ ಹಿಂದೆ ನರ್ತನ್ ಸುಳಿವು ನೀಡಿದ್ದರು. ಸಿನಿಮಾ ಆಗಸ್ಟ್ 15ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿತ್ತು. ಆದರೆ ಚಿತ್ರೀಕರಣ ಇನ್ನೂ ಪೂರ್ಣಗೊಳ್ಳದ ಕಾರಣ ಇದು ಮುಂದೂಡಿಕೆಯಾಗುವ ಸಾಧ್ಯತೆ ಇದೆ. ಚಿತ್ರದಲ್ಲಿ ರುಕ್ಮಿಣಿ ವಸಂತ್, ರಾಹುಲ್ ಬೋಸ್, ಅವಿನಾಶ್ , ದೇವರಾಜ್, ಮಧು ಗುರುಸ್ವಾಮಿ, ಛಾಯಾ ಸಿಂಗ್, ಬಾಬು ಹಿರಣ್ಣಯ್ಯ ಮುಂತಾದ ಕಲಾವಿದರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.